Breaking: ಇಂಡೋನೇಷ್ಯಾದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ
ಜಕಾರ್ತಾ, ಡಿಸೆಂಬರ್ 14: ಇಂಡೋನೇಷ್ಯಾದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಫ್ಲೋರ್ಸ್ ಸಮುದ್ರದ 18.5 ಕಿ.ಮೀ ಆಳದಲ್ಲಿ ಮೌಮೆರೆ ಪಟ್ಟಣದ ಉತ್ತರಕ್ಕೆ 100 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಹೇಳಿದೆ.
ಭೂಕಂಪದ ಕೇಂದ್ರಬಿಂದುವಿನಿಂದ 1 ಸಾವಿರ ಕಿ.ಮೀ ಒಳಗೆ ಇರುವ ಕರಾವಳಿ ತೀರಗಳಲ್ಲಿ ಅಪಾಯಕಾರಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

2021ರ ಜನವರಿ 16ರಂದು ಇಂಡೋನೇಷ್ಯಾದಲ್ಲಿ 6.3 ತೀವ್ರತೆ ಭೂಕಂಪ ಸಂಭವಿಸಿ 56 ಮಂದಿ ಮೃತಪಟ್ಟಿದ್ದರು. ಪಶ್ಚಿಮ ಸುಲಾವೆಸಿಯಲ್ಲಿ ಭೂಕಂಪ ಸಂಭವಿಸಿತ್ತು.
2004ರ ಡಿಸೆಂಬರ್ 26ರಂದು ಇಂಡೋನೇಷ್ಯಾದಲ್ಲಿ 9.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸುಮಾತ್ರಾದಲ್ಲಿ ಸುನಾಮಿಯೂ ಅಪ್ಪಳಿಸಿ 230,000 ಮಂದಿ ಮೃತಪಟ್ಟಿದ್ದರು. ಅದರಲ್ಲಿ ಶ್ರೀಲಂಕಾ, ಥೈಲೆಂಡ್, ಭಾರತ ಸೇರಿ 9 ಕ್ಕೂ ಅಧಿಕ ದೇಶಗಳ ಜನರು ಸಾವನ್ನಪ್ಪಿದ್ದರು.
2018ರಲ್ಲಿ ಲೋಂಬೊಕ್ ಐಲೆಂಡ್‌ನಲ್ಲಿ ಭೂಕಂಪ ಸಂಭವಿಸಿ, ವಾರಗಳಲ್ಲೇ ಸಾಂಬವ ಹಾಲಿಡೇ ಐಲೆಂಡ್‌ನಲ್ಲಿ ಭೂಕಂಪ ಸಂಭವಿಸಿ 550 ಮಂದಿ ಮೃತಪಟ್ಟಿದ್ದರು.












Click it and Unblock the Notifications