2018ನೇ ವರ್ಷದ ಎಚ್- 1ಬಿ ವೀಸಾಕ್ಕಾಗಿ ಏ. 3ರಿಂದ ಅರ್ಜಿ ಆಹ್ವಾನ

Posted By:
Subscribe to Oneindia Kannada

ವಾಷಿಂಗ್ಟನ್, ಮಾರ್ಚ್ 16: ಭಾರತೀಯ ಐಟಿ ವಲಯವು ಕಾತುರದಿಂದ ನಿರೀಕ್ಷಿಸುತ್ತಿದ್ದ, 2018ರ ಎಚ್ 1 ಬಿ ಸೇವಾ ವೀಸಾಗಳಿಗಾಗಿ ಏಪ್ರಿಲ್ 3ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆದರೆ, ಅರ್ಜಿ ಸಲ್ಲಿಕೆಯ ಮುಕ್ತಾಯ ದಿನದ ಬಗ್ಗೆ ಯಾವುದೇ ಮಾಹಿತಿಯನ್ನು ಯುಎಸ್ ಸಿಟಿಜನ್ ಶಿಪ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್ಎಸ್ ಸಿಐಎಸ್) ಹೇಳಿಲ್ಲ. ಸದ್ಯಕ್ಕೆ ಏಪ್ರಿಲ್ 3ರಿಂದ (ಸೋಮವಾರ) ಆರಂಭವಾಗುವ ವೀಸಾ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಐದು ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Indian techies can now file H-1B visa applications from April 3

ಈ ಬಾರಿಯ ವೀಸಾ ನೀಡಿಕೆ ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಯುಎಸ್ಎಸ್ ಸಿಐಎಸ್ ಹೇಳಿದೆ. ಯುಎಸ್ಎಸ್ ಸಿಐಎಸ್ ಪ್ರಕಾರ, ಅಮೆರಿಕದ 2018ರ ಹಣಕಾಸು ವರ್ಷವು ಇದೇ ವರ್ಷ ಅಕ್ಬೋಬರ್ 1ರಿಂದ ಆರಂಭವಾಗಲಿದ್ದು, ಈ ಕಾರಣಕ್ಕಾಗಿ ಏ. 3ರಿಂದಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Application for H-1B work visas, which is highly popular among Indian IT companies and professionals, for fiscal year 2018 can be filed from April
Please Wait while comments are loading...