ಭಾರತೀಯ ಮೂಲದ ಆಸ್ಟ್ರೇಲಿಯಾ ಬಸ್ ಚಾಲಕ ಸಜೀವ ದಹನ

Posted By: Ananthanag
Subscribe to Oneindia Kannada

ಸಿಡ್ನಿ, ಅಕ್ಟೋಬರ್, 29: ಆಸ್ಟ್ರೇಲಿಯಾದ ಬ್ರಿಸ್ಬೇನಿನಲ್ಲಿ ಭಾರತೀಯ ಮೂಲದ ಬಸ್ ಚಾಲಕ ಸಜೀವ ದಹನವಾಗಿದ್ದಾರೆ.
ಮನ್ಮೀತ್ ಅಲಿಶಿರ್ ಎಂಬಾತನೇ ಬೆಂಕಿಗಾಹುತಿಯಾದ ದುರ್ದೈವಿ.

ಪಂಜಾಬಿನ ಭಾರತೀಯ. ಬ್ರಿಸ್ಬೇನ್ ನಗರದಲ್ಲಿ ಪ್ರಯಾಣಿಕರ ಎದುರೇ ವ್ಯಕ್ತಿಯೊಬ್ಬ ಮನ್ಮೀತ್ ಗೆ ಬೆಂಕಿ ಹಚ್ಚಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

Indian origin bus driver killed in Australia

ಮನಬೀತ್ ಬ್ರಿಸ್ಬೇನಿನ ಪರಿಷತ್ ಬಸ್ ಚಾಲಕರಾಗಿದ್ದರು. ಬಸ್ ಚಾಲನೆ ಮಾಡುವ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಉರಿಯುವ ವಸ್ತುವೊಂದನ್ನು ಆತನ ಮೇಲೆ ಎಸೆದಿದ್ದು ಮನ್ಬೀತ್ ಸ್ಥಳದಲ್ಲಿಯೇ ದಹನಗೊಂಡು ಮೃತರಾಗಿದ್ದಾರೆ.

ಇನ್ನು ಪ್ರಯಾಣಿಕರು ಬಸ್ ತುಂಬಾ ಹೊಗೆ ತುಂಬಿಕೊಂಡ ಪರಿಣಾಮ ಆತಂಕಗೊಂಡು ತುರ್ತು ನಿರ್ಗಮನದ ಮೂಲಕ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರಕ್ಷಕರು "ಇದು ಜನಾಂಗೀಯ ದ್ವೇಷವೇ ? ಅಥವಾ ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆ ಸುಳಿವು ಸಿಕಿಲ್ಲ" ಎಂದು ಹೇಳಿದ್ದಾರೆ. ಈ ಕೃತ್ಯಕ್ಕೆ ಕಾರಣವಾದ 48 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ವೀನ್ಸ್ ಲ್ಯಾಂಡ್ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 29-year-old bus driver of Indian origin was burnt to death on Friday while sitting behind the wheel in a shocking and senseless attack in Australia's Queensland state.
Please Wait while comments are loading...