ಶಾರ್ಜಾ: ಭಾರತೀಯ ಮೂಲದ ವ್ಯಕ್ತಿ ನೇಣಿಗೆ ಶರಣು
ಶಾರ್ಜಾ, ಜು. 27: ಭಾರತೀಯ ಮೂಲದ 24 ವರ್ಷದ ಯುವಕ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಧ್ಯಮಗಳು ವರದಿ ಮಾಡಿರುವಂತೆ ಈತ ಕಾಂಟ್ರಾಕ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ರಾತ್ರಿ ತನ್ನ ಮನೆಯಲ್ಲೇ ವಿದ್ಯುತ್ ತಂತಿಯಿಂದ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ.
ಯುವಕನ ಶವ ನೋಡಿದ ತಕ್ಷಣ ಆತನ ರೂಮ್ ಮೇಟ್ ಶಾರ್ಜಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.[ಯುಎಇಯಿಂದ ಭಾರತಕ್ಕೆ 'ಅಮಿತಾಬ್ ಬಚ್ಚನ್' ಹಸ್ತಾಂತರ]

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ತನಿಖೆಯನ್ನು ಪೊಲೀಸರು ಆರಂಭಿಸಿದ್ದು ಆತನ ಸ್ನೇಹಿತರು ಮತ್ತು ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.[ಯುದ್ಧಪೀಡಿತ ಯೆಮನ್ ನಿಂದ ಭಾರತೀಯರು ಬದುಕಿ ಬಂದಿದ್ದು ಹೇಗೆ?]
ಯುಎಇ ನಲ್ಲಿ ಸುಮಾರು 2.2 ಮಿಲಿಯನ್ ಭಾರತೀಯರು ವಿವಿಧ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೇರಳಿಯನ್ನರೇ ಇದರಲ್ಲಿ ಅಧಿಕವಾಗಿದ್ದು ಶೇ. 40 ರಷ್ಟು ಕಾರ್ಮಿಕರು ಭಾರತೀಯರೇ ಆಗಿದ್ದಾರೆ.












Click it and Unblock the Notifications