US Election: ಡೊನಾಲ್ಡ್ ಟ್ರಂಪ್‌ಗೆ ಶಾಕ್ ಕೊಟ್ಟ ಭಾರತೀಯ ಅಮೆರಿಕನ್ ಮತದಾರರು!
ಯುಎಸ್ ಅಧ್ಯಕ್ಷ ಚುನಾವಣೆ ಅಖಾಡ ರಂಗೇರಿದ್ದು ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಫಲಿತಾಂಶದ ಬಗ್ಗೆ ವಿಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಮೆರಿಕ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರ ಮತಗಳು ಕೂಡ ಮಹತ್ವದ್ದಾಗಿದೆ. ಇದೀಗ ಭಾರತೀಯ ಅಮೆರಿಕನ್ನರು ಡೊನಾಲ್ಡ್ ಟ್ರಂಪ್‌ಗೆ ಆಘಾತ ಕೊಟ್ಟಿದ್ದಾರೆ.
ಈ ಬಾರಿ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಭಾರತೀಯ ಮತ್ತು ವೆಸ್ಟ್ ಇಂಡೀಸ್ ಮೂಲದ ಅಮೆರಿಕನ್ನರು ಬೆಂಬಲ ನೀಡಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಅಮೆರಿಕನ್ನರಿಗೆ ಭಾರತೀಯ ಮೂಲದವರಾದ ಕಮಲಾ ಹ್ಯಾರಿಸ್ ವೈಟ್‌ಹೌಸ್‌ಗೆ ಕಳಿಸುವ ಅವಕಾಶ ಸಿಕ್ಕಿದೆ. ಅಮೆರಿಕದ ರಾಜಕೀಯದಲ್ಲಿ ಭಾರತೀಯ ಮೂಲದವರು ಪ್ರಾಬಲ್ಯ ಸಾಧಿಸಲು ಇದು ಸುವರ್ಣ ಅವಕಾಶವಾಗಿದ್ದು, ಹೆಚ್ಚಿನ ಭಾರತೀಯ ಅಮೆರಿಕನ್ನರು ಕಮಲಾ ಹ್ಯಾರಿಸ್ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.
ಭಾರತೀಯ ಮೂಲದ ನಾಯಕರೊಬ್ಬರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಾರ್ಜಿಯಾದ ಫೆಡರೇಶನ್ ಆಫ್ ಇಂಡಿಯನ್-ಅಮೆರಿಕನ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ.ವಾಸುದೇವ್ ಪಟೇಲ್ ಹೇಳಿದ್ದಾರೆ.
ಜಾರ್ಜಿಯಾ ಏಳು ಮುಖ್ಯವಾದ ಯುದ್ಧ ಪೀಡಿತ ರಾಜ್ಯಗಳಲ್ಲಿ ಒಂದಾಗಿದ್ದು, ಹ್ಯಾರಿಸ್ ಗೆಲುವಿನಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಪಾತ್ರ ಪ್ರಮುಖವಾಗಿದೆ ಎಂದು ವಾಸುದೇವ್ ಪಟೇಲ್ ಹೇಳಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಮತ ಹಾಕಿದ್ದೇನೆ. ಈ ಬಾರಿ ಕಮಲಾ ಹ್ಯಾರಿಸ್‌ಗೆ ಬೆಂಬಲ ಕೊಡುತ್ತೇನೆ ಎಂದು ದೆಹಲಿಯಿಂದ ತೆರಳಿ ಮೇರಿಲ್ಯಾಂಡ್‌ನ ಮಾಂಟ್ಗೊಮೆರಿ ಕೌಂಟಿಯಲ್ಲಿ ನೆಲೆಸಿರುವ ಸೌರವ್ ಗುಪ್ತಾ ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಗೆಲುವು ಸಾಧಿಸಿದರೆ ಭಾರತಕ್ಕೆ ಅನುಕೂಲವಾಗಲಿದೆ ಎಂದು ಭಾರತೀಯ ಅಮೆರಿಕನ್ನು ಆಶಿಸಿದ್ದಾರೆ. ಭಾರತೀಯ ಮೂಲದವರು ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿದರೆ, ಎರಡೂ ರಾಷ್ಟ್ರಗಳ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಲಿದೆ ಎನ್ನುವ ನಿರೀಕ್ಷೆ ಕೂಡ ಮಾಡಲಾಗಿದೆ.
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಹ್ಯಾರಿಸ್ ಅವರ ಸ್ಪರ್ಧೆಯನ್ನು ಖಚಿತಪಡಿಸಿದ ನಂತರ, ಭಾರತೀಯ ಅಮೆರಿನ್ ಮತ್ತು ದಕ್ಷಿಣ ಏಷ್ಯಾದ ಅಮೆರಿಕನ್ ಸಂಘಟನೆಗಳು ನಿಧಿ ಸಂಗ್ರಹಿಸುವುದು ಸೇರಿದಂತೆ ಹಲವು ರೀತಿ ಕಮಲಾ ಹ್ಯಾರಿಸ್ ಬೆಂಬಲಕ್ಕೆ ನಿಂತಿದ್ದಾರೆ.
ಯುಎಸ್‌ನಲ್ಲಿ 5.2 ಮಿಲಿಯನ್ ಭಾರತೀಯ ಅಮೆರಿಕನ್ನರು ನೆಲೆಸಿದ್ದಾರೆ. ಇದು ಎರಡನೇ ಅತಿ ದೊಡ್ಡ ವಲಸಿಗ ಸಮುದಾಯವಾಗಿದೆ. 2.3 ಮಿಲಿಯನ್ ಮಂದಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಮತಗಳು ಚುನಾವಣಾ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.












Click it and Unblock the Notifications