Get Updates
Get notified of breaking news, exclusive insights, and must-see stories!

ಯುಎಸ್ ಸರ್ಜನ್ ಸ್ಥಾನದಿಂದ ವಿವೇಕ್ ಮೂರ್ತಿ ಪದಚ್ಯುತಿ

ಪದಚ್ಯುತಿ ಬಗ್ಗೆ ಶನಿವಾರ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಉಪ ಸರ್ಜನ್ ಜನರಲ್ ಆಗಿದ್ದ ರಿಯರ್ ಅಡ್ಮಿರಲ್ ಸಿಲ್ವಿಯಾ ಟ್ರೆಂಟ್ ಆ್ಯಡಮ್ಸ್ ಅವರನ್ನು ನೂತನ ಸರ್ಜನ್ ಜನರಲ್ ಆಗಿ ನೇಮಿಸಲಾಗಿದೆ.

ವಾಷಿಂಗ್ಟನ್, ಏಪ್ರಿಲ್ 22: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ಪ್ರತಿಷ್ಠಿತ ಹುದ್ದೆಯಾದ ಯುಎಸ್ ಸರ್ಜನ್ ಜನರಲ್ ಸ್ಥಾನಕ್ಕೆ ನೇಮಕಗೊಂಡಿದ್ದ ಭಾರತ ಮೂಲದ ವಿವೇಕ್ ಮೂರ್ತಿ ಅವರನ್ನು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಆ ಸ್ಥಾನದಿಂದ ಪದಚ್ಯುತಿಗೊಳಿಸಿದೆ.

ಶನಿವಾರ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ವಿವೇಕ್ ಅವರ ಸ್ಥಾನಕ್ಕೆ ಈವರೆಗೆ ಯುಎಸ್ ಉಪ ಸರ್ಜನ್ ಜನರಲ್ ಆಗಿದ್ದ ರಿಯರ್ ಅಡ್ಮಿರಲ್ ಸಿಲ್ವಿಯಾ ಟ್ರೆಂಟ್ ಆ್ಯಡಮ್ಸ್ ಅವರನ್ನು ನೂತನ ಸರ್ಜನ್ ಜನರಲ್ ಆಗಿ ನೇಮಿಸಲಾಗಿದೆ.

Indian-American Surgeon General dismissed by Donald Trump administration

2014ರ ಡಿಸೆಂಬರ್ ನಲ್ಲಿ ವಿವೇಕ್ ಅವರನ್ನು ಯುಎಸ್ ಸರ್ಜನ್ ಜನರಲ್ ಹುದ್ದೆಗೆ ನೇಮಿಸಿರುವುದಾಗಿ ಬರಾಕ್ ಆಡಳಿತ ಖಚಿತಪಡಿಸಿತ್ತು. ಆ ಮೂಲಕ, ವಿವೇಕ್ ಅವರು ಭಾರತ ಮೂಲದವರು ಅಮೆರಿಕದ ಅತಿ ದೊಡ್ಡ ಹುದ್ದೆಗೆ ನೇಮಕಗೊಂಡ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು.

ಅಮೆರಿಕದ ಔದ್ಯೋಗಿಕ ವಲಯದಲ್ಲಿ ಅಮೆರಿಕನ್ನರಿಗೇ ಮೊದಲ ಆದ್ಯತೆ ನೀಡಬೇಕೆನ್ನುವ ಟ್ರಂಪ್ ಅವರ ಧೋರಣೆಯೇ ವಿವೇಕ್ ಅವರ ಪದಚ್ಯುತಿಗೆ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಡೊನಾಲ್ಡ್ ಟ್ರಂಪ್ ಅವರ ಈ ಧೋರಣೆ ಈಗಾಗಲೇ ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ದ್ವೇಷ, ಹತ್ಯೆಗಳಂಥ ಹೇಯ ಕೃತ್ಯಗಳು ಹೆಚ್ಚಾಗಿ ಆಗುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+