ಭಾರತ, ರಷ್ಯಾ & ಚೀನಾ ಒಂದಾದರೆ ಅಮೆರಿಕಾಗೆ ಬಿಸಿ ಫಿಕ್ಸ್ !, ಶತ್ರುವಿನ ಶತ್ರು ಮಿತ್ರ ಏನಿದು ಲೆಕ್ಕಾಚಾರ ?!
India-Russia-China Alliance: ಅಮೆರಿಕ ತನ್ನ ಕಾಲುಗಳ ಮೇಲೆ ತಾನೇ ಕಲ್ಲು ಎಳೆದುಕೊಂಡಿದ್ದು. ಭಾರತದಂತಹ ದೈತ್ಯ ರಾಷ್ಟ್ರವನ್ನು ಎದುರುಹಾಕಿಕೊಂಡಿದೆ. ತನ್ನನ್ನು ತಾನು ಸೂಪರ್ ಪವರ್ ನೇಷನ್ ಎಂದು ಹೇಳಿಕೊಳ್ಳುವ ಅಮೆರಿಕಾ ದೇಶವು ಏಕಕಾಲಕ್ಕೆ ರಷ್ಯಾ - ಚೀನಾ ಹಾಗೂ ಭಾರತವನ್ನು ಎದುರು ಹಾಕಿಕೊಂಡಿದೆ. ಈ ಮೂರು ರಾಷ್ಟ್ರಗಳು ಒಂದಾಗುವುದಿಲ್ಲ. ಈ ರಾಷ್ಟ್ರಗಳ ನಡುವೆ ಹೊಂದಾಣಿಕೆ ಸಾಧ್ಯವಿಲ್ಲ ಎಂದೇ ಅಮೆರಿಕಾ ಭಾವಿಸಿತ್ತು. ಆದರೆ ಅಮೆರಿಕಾದ ಲೆಕ್ಕಾಚಾರಗಳು ಈಗ ತಲೆಕೆಳಗಾಗಿವೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರಿದಿರುವ ಮೂರು ರಾಷ್ಟ್ರಗಳಾದ ಭಾರತ, ರಷ್ಯಾ ಮತ್ತು ಚೀನಾ ಒಂದಾಗುತ್ತಿವೆ.
ಭೌಗೋಳಿಕ ರಾಜಕೀಯವನ್ನೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಮದು ತೆರಿಗೆ ನೀತಿ ಬದಲಾಯಿಸಿದೆ. ಬೇಕಾಬಿಟ್ಟಿ ಟ್ಯಾಕ್ಸ್ ವಿಧಿಸುವುದಕ್ಕೆ ಪ್ರಾರಂಭವಾದ ಮೇಲೆ ಹಲವು ರಾಷ್ಟ್ರಗಳನ್ನು ಎದುರುಹಾಕಿಕೊಂಡಿದೆ. ಅದರಲ್ಲೂ ಭಾರತದ ಮೇಲೆ ಬರೋಬ್ಬರಿ ಶೇ 50ರಷ್ಟು ತೆರಿಗೆ ವಿಧಿಸಿದ ಮೇಲೆ ಅಮೆರಿಕದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಅಲ್ಲದೇ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಭಾರತ - ಚೀನಾ ಒಂದಾಗುವುದಕ್ಕೆ ಅಮೆರಿಕ ಕಾರಣವಾಗಿದೆ. ಭಾರತದ ಮೇಲೆ ಬೇಕಾಬಿಟ್ಟಿ ತೆರಿಗೆ ವಿಧಿಸಿರುವಂತೆಯೇ ಅಮೆರಿಕ, ಚೀನಾದ ಮೇಲೆ ಸಹ ತೆರಿಗೆ ವಿಧಿಸಿದೆ. ಆ ಸಂದರ್ಭದಲ್ಲಿಯೇ ಚೀನಾ - ಅಮೆರಿಕಾಗೆ ದುಬಾರಿ ತೆರಿಗೆ ವಿಧಿಸಿತ್ತು.

ಭಾರತಕ್ಕೆ ಯಾವುದೇ ವಿಚಾರದಲ್ಲಿ ಸಹಕಾರ ನೀಡದ ಅಥವಾ ಭಾರತದ ಪರವಾಗಿ ಎಂದೂ ಮಾತನಾಡದ ಮತ್ತು ಶತ್ರುರಾಷ್ಟ್ರ ಎಂದೇ ಪರಿಗಣಿಸಲ್ಪಟ್ಟಿರುವ ಚೀನಾ ಇದೀಗ ಭಾರತದ ಪರವಾಗಿ ಮಾತನಾಡುತ್ತಿದೆ. ಭಾರತದ ಮೇಲೆ ದುಬಾರಿ ಆಮದು ತೆರಿಗೆ ವಿಧಿಸಿರುವುದನ್ನು ಚೀನಾ ವಿರೋಧಿಸಿದೆ. ಇದರ ಬೆನ್ನಲ್ಲೇ ಭಾರತ - ರಷ್ಯಾ ಹಾಗೂ ಚೀನಾ ಒಂದಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹೇಳಲಾಗಿದೆ.
ಚೀನಾ ಮತ್ತು ರಷ್ಯಾ ಎರಡೂ ಕಮ್ಯೂನಿಸ್ಟ್ ರಾಷ್ಟ್ರಗಳು. ಭಾರತ ಮತ್ತು ರಷ್ಯಾದೊಂದಿಗೆ ಉತ್ತಮ ಸಂಬಂಧಿವಿದೆಯಾದರೂ ಚೀನಾದೊಂದಿಗೆ ಭಾರತದ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ. ಆದರೆ ಅಮೆರಿಕಾ ದೇಶವೇ ಭಾರತ ಮತ್ತು ಚೀನಾ ಒಂದಾಗುವುದಕ್ಕೆ ದುಬಾರಿ ತೆರಿಗೆ ವಿಧಿಸುವ ಮೂಲಕ ವೇದಿಕೆ ಕಲ್ಪಿಸಿಕೊಟ್ಟಿದೆ. ಈ ಮೂರು ರಾಷ್ಟ್ರಗಳು ಒಂದಾದರೆ ಏಷ್ಯಾದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಐರೋಪ್ಯ ರಾಷ್ಟ್ರಗಳಿಗೆ ಅದರಲ್ಲೂ ಅಮೆರಿಕಾಗೆ ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.
ಭಾರತ - ರಷ್ಯಾ & ಚೀನಾ ಒಂದಾದರೆ ಏನಾಗಲಿದೆ: ಭಾರತ - ರಷ್ಯಾ ಮತ್ತು ಚೀನಾ ಒಂದಾದರೆ ಹೊಸ ಆರ್ಥಿಕ ಭಾಷ್ಯಾ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ. ಭಾರತದ ಮೇಲೆ ದೌರ್ಜನ್ಯ ಯಾಕೆ ಅಂತಾ ಅಮೆರಿಕಾವನ್ನು ಚೀನಾ ಪ್ರಶ್ನೆ ಮಾಡಿದೆ. ಭಾರತ ಮತ್ತು ಚೀನಾ ಪೈಪೋಟಿಯಿಂದ ಸಹಕಾರದ ಹಾದಿಯಲ್ಲಿ ಮೊದಲ ಹೆಜ್ಜೆ ಇರಿಸಿದೆ. ಆನೆ ಮತ್ತು ಡ್ರ್ಯಾಗನ್ ಒಂದಾಗುವ ಕಾಲ ಸನ್ನಿಹಿತವಾಗಿದೆ.
ಆರ್ಥಿಕವಾಗಿ ಹಾಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಭಾರತ ಹಾಗೂ ಚೀನಾ ಮುಂಚೂಣಿಯಲ್ಲಿದೆ. ಈ ದೇಶಗಳ ನಡುವೆ ಇಷ್ಟು ವರ್ಷಗಳ ಕಾಲ ಪೈಪೋಟಿಯೇ ಇತ್ತು. ಆದರೆ ಇದೀಗ ಈ ಮೂರು ರಾಷ್ಟ್ರಗಳು ಒಂದಾದರೆ ಅಮೆರಿಕ ಸಹ ಮಣಿಯಬೇಕಾಗುತ್ತದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications