PM Narendra Modi: ಚೀನಾ ಜೊತೆ ಕೈಜೋಡಿಸುವುದು ಗ್ಯಾರಂಟಿ, ಪ್ರಧಾನಿ ಮೋದಿ ಮಹತ್ವದ ಸಂದೇಶ!
ಅಮೆರಿಕ ತಾನು ಹಚ್ಚಿದ ಬೆಂಕಿಯಲ್ಲಿ ತಾನೇ ಬೆಂದು ಹೋಗುತ್ತಿದೆ, ಒಂದು ಕಡೆ ತನ್ನದೇ ಆರ್ಥಿಕತೆ ಬುಡಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ಬಿಸಿನೀರು ಹಾಕುತ್ತಿದ್ದಾರೆ. ಇನ್ನೊಂದು ಕಡೆ ಅಮೆರಿಕದ ಮಿತ್ರ ದೇಶಗಳು ಶತ್ರು ದೇಶಗಳಾಗಿ ಬದಲಾಗುತ್ತಿವೆ. ಇದರ ಲಾಭ & ನಷ್ಟದ ಲೆಕ್ಕಾಚಾರ ಜೋರಾಗಿರುವ ಸಮಯದಲ್ಲೇ ಅಮೆರಿಕಗೆ ಮತ್ತೊಂದು ಆಘಾತ ನೀಡಿದೆ ಭಾರತ. ಚೀನಾ ಜೊತೆಯಲ್ಲಿ ಇದೀಗ ಸಂಬಂಧ ಬೆಸೆಯುವ ಮೂಲಕ, ಅಮೆರಿಕದ ಬುಡ ಅಲುಗಾಡಿಸಲು ಭಾರತ ಸಜ್ಜಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಮಹತ್ವದ ಸಂದೇಶ ರವಾನಿಸಿದ್ದಾರೆ.
ಜಪಾನ್ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನೀಡಿರುವ ಸಂದರ್ಶನ ಈಗ ಪಾಶ್ಚಿಮಾತ್ಯರ ಎದೆ ನಡುಗುವಂತೆ ಮಾಡಿದೆ. ಯಾಕಂದ್ರೆ ಇಷ್ಟು ದಿನಗಳ ಕಾಲ ಚೀನಾ ಜೊತೆಗೆ ಅಂತರ ಕಾಯ್ದುಕೊಂಡು ಅಮೆರಿಕದ ಜೊತೆಗೆ ಚನ್ನಾಗಿದ್ದ ಭಾರತ ತನ್ನ ನಿಲುವನ್ನು ಸಂಪೂರ್ಣ ಬದಲಾವಣೆ ಮಾಡಿಕೊಂಡು ಮುಂದೆ ನುಗ್ಗಲು ಸಜ್ಜಾಗಿದೆ. ಅಮೆರಿಕ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುವ ಮೂಲಕ ಭಾರತಕ್ಕೆ ಆಘಾತ ನೀಡಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪಾಠ ಕಲಿಸಿ ತನ್ನ ಶಕ್ತಿ ಪ್ರದರ್ಶನ ಮಾಡಲು ಭಾರತ ಇದೀಗ ಮುಂದಾಗಿದೆ. ಇದರ ಭಾಗವಾಗಿ ನಾನು ಚೀನಾ ಜೊತೆ ಸಂಪೂರ್ಣ ಒಪ್ಪಂದಕ್ಕೆ ಸಿದ್ಧ ಎಂಬ ಸಂದೇಶ ರವಾನೆಯಾಗಿದೆ.

ಶಾಂತಿ ಕಾಪಾಡಲು ಭಾರತ ಬದ್ಧ!
ಹೌದು, ಪ್ರಧಾನಿ ಮೋದಿ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದು ಭಾರತವು ಚೀನಾ ಜೊತೆ ಮಾತುಕತೆ ಮೂಲಕ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬದ್ಧ ಎಂದಿದ್ದಾರೆ. ಅಲ್ಲದೆ ಭಾರತ & ಚೀನಾ ನಡುವಿನ ಈ ಸಂಬಂಧ ಇಂಡೋ ಪೆಸಿಫಿಕ್ ಭಾಗದಲ್ಲಿ ಶಾಂತಿ ಸ್ಥಾಪನೆಗೆ ಕೂಡ ಅತ್ಯಗತ್ಯ ಎಂಬುದನ್ನು ಪ್ರಧಾನಿ ಮೋದಿ ಅವರು ಪ್ರಸ್ತಾಪ ಮಾಡಿದ್ದಾರೆ. ಅಮೆರಿಕ ವಿರುದ್ಧ ಜಗತ್ತಿನ ಹಲವು ದೇಶಗಳು ಆಕ್ರೋಶವನ್ನ ಹೊರಹಾಕಿ ಸಂಬಂಧ ಕಡಿದುಕೊಳ್ಳುತ್ತಿರುವ ಈ ಸಮಯದಲ್ಲೇ ಭಾರತ ಕೂಡ ಅಮೆರಿಕಗೆ ಆಘಾತವನ್ನೇ ನೀಡಿದೆ.
ಕಿರಿಕ್ ಶುರು ಮಾಡಿದ್ದೇ ಅಮೆರಿಕ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದಲೇ ಇಲ್ಲಿ ಕಿರಿಕ್ ಜೋರಾಗಿ, ಸಂಬಂಧ ಹಾಳಾಗಿದ್ದು. ಆಗಸ್ಟ್ 27 ಬುಧವಾರದಿಂದ ಅನ್ವಯ ಆಗುವಂತೆ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಆದೇಶ ಜಾರಿಗೆ ತಂದಿದೆ ಅಮೆರಿಕ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ರೀತಿ ತಿಕ್ಕಲು ತಿಕ್ಕಲು ನಿರ್ಧಾರ ಭಾರತ & ಅಮೆರಿಕ ನಡುವಿನ ಸಂಬಂಧ ಹಾಳು ಮಾಡುವ ಜೊತೆಗೆ ಜಾಗತಿಕವಾಗಿಯು ಕೂಡ ಆರ್ಥಿಕ ಸಂಚಲನಕ್ಕೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿದ ಶೇಕಾಡ 25 ಹೆಚ್ಚುವರಿ ಸುಂಕ ಸೇರಿ ಒಟ್ಟಾರೆ ಶೇ. 50ರಷ್ಟು ಸುಂಕ ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ವಿಧಿಸುತ್ತಾ ಒತ್ತಡ ಹೇರಲಾಗಿತ್ತು. ಅದಕ್ಕೆ ಸರಿಯಾಗಿ ಭಾರತ ಕೂಡ ಇದೀಗ ಉತ್ತರ ನೀಡಿದೆ. ಚೀನಾ ಜೊತೆಯಲ್ಲಿ ಈ ಸಮಯದಲ್ಲಿ ಮಹತ್ವದ ಗಡಿ ಒಪ್ಪಂದಗಳು ನಡೆಯುವ ನಿರೀಕ್ಷೆ ದಟ್ಟವಾಗಿದ್ದು, ಈ ವಿಚಾರದಲ್ಲಿ ಅಮೆರಿಕ ಸೋತು ಹೋಗುವುದು ಬಹುತೇಕ ಪಕ್ಕಾ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಓಡಾಡುತ್ತಿದೆ...












Click it and Unblock the Notifications