'ಭಾರತ ವಿಶ್ವದ ಔಷಧಾಲಯ' ಎಂದ ಶಾಂಘೈ ಸಹಕಾರ ಸಂಸ್ಥೆ
ಬೀಜಿಂಗ್, ಜೂನ್ 22: ಭಾರತವು ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ 'ವಿಶ್ವದ ಔಷಧಾಲಯ'ದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಂಘೈನ ಸಹಕಾರ ಸಂಸ್ಥೆ ಹೇಳಿದೆ.
ಭಾರತವು ಔಷಧದಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದು, ಅನೇಕ ಪ್ರಾದೇಶಿಕ ಮತ್ತು ಜಾಗತಿಕ ಉಪಕ್ರಮಗಳಿಗೆ ನಾಂದಿ ಹಾಡಿದೆ ಎಂದು ಹೇಳಿದೆ.
ಭಾರತವು ಕೊರೊನಾ ವಿರುದ್ಧ ಹೋರಾಡಲು 133 ದೇಶಗಳಿಗೆ ಔಷಧವನ್ನು ರಫ್ತು ಮಾಡಿದೆ.ಇದು ಭಾರತದ ಔದಾರ್ಯವನ್ನು ತೋರಿಸುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಸಂಸ್ಥೆಯು ಸಂದರ್ಶನವೊಂದರಲ್ಲಿ ತಿಳಿಸಿದೆ.

ಯುಎನ್ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ಭಾರತ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ತಾತ್ಕಾಲಿಕ ಸದಸ್ಯರಾಗಿ ಭಾರತ 8 ನೇ ಬಾರಿಗೆಆಯ್ಕೆಯಾಗಿದೆ. ಭಾರತವು 2021-22ರ ನಡುವೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಿ ಉಳಿಯಲಿದೆ.
193 ಸದಸ್ಯರ ಸಾಮಾನ್ಯ ಸಭೆಯಲ್ಲಿ 184 ಮತಗಳನ್ನು ಗೆದ್ದ ನಂತರ ಯುಎನ್‌ಎಸ್‌ಸಿಯ ಖಾಯಂ ಸದಸ್ಯರಲ್ಲೊಬ್ಬರಾಗಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾಯಿತರಾಗಲು ಕನಿಷ್ಠ ಅವಶ್ಯಕತೆ 128 ಮತಗಳು. ಇದಕ್ಕೂ ಮುನ್ನ ಭಾರತ 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಈ ಜವಾಬ್ದಾರಿಯನ್ನು ನಿರ್ವಹಿಸಿದೆ.
ಕೊರೊನಾಗೆ ಔಷಧ: ಭಾರತದ ವಿಜ್ಞಾನಿಗಳಿಗಿದೆ ಅರ್ಹತೆ
ಕೊವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ಔಷಧ ಸಂಶೋಧಿಸಲು ಭಾರತದ ವಿಜ್ಞಾನಿಗಳಿಗೆ ಅರ್ಹತೆ ಇದೆ ಎಂದು ಶಾಂಘೈ ಕೋ-ಆಪರೇಟಿವ್ ಆರ್ಗನೈಸೇಷನ್ ಸೆಕ್ರೆಟರಿ ಜನರಲ್ ವ್ಲಾಡಿಮಿರ್ ನೋರೊವ್ ಹೇಳಿದ್ದಾರೆ.

ಭಾರತ ವಿಶ್ವದ ಔಷಧಾಲಯ
ಭಾರತವು ಇಡೀ ವಿಶ್ವದಲ್ಲೇ ಔಷಧಾಲಯ ಪಾತ್ರವನ್ನು ನಿರ್ವಹಿಸುತ್ತದೆ. ಬೀಜಿಂಗ್‌ನಲ್ಲಿರುವ ಎಸ್‌ಸಿಓ ಪ್ರಧಾನ ಕಚೇರಿಯಲ್ಲಿ ಎಂಟು ದೇಶಗಳ ಸದಸ್ಯತ್ವ ಇದೆ. ಪಾಕಿಸ್ತಾನವು 2017ರಲ್ಲಿ ಸದಸ್ಯತ್ವ ಪಡೆಎದುಕೊಂಡಿದೆ. ಚೀನಾ, ರಷ್ಯಾ, ಕಜಾಕ್‌ಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ , ಉಜ್ಬೇಕಿಸ್ತಾನ್ ಇದರಲ್ಲಿ ಸೇರಿದೆ.

ವಿಶ್ವದ ಅತಿದೊಡ್ಡ ಜನೆರಿಕ್ ಔಷಧಗಳ ಉತ್ಪಾದಕ ರಾಷ್ಟ್ರ
ಭಾರತವು ವಿಶ್ವದ ಅತಿದೊಡ್ಡ ಜೆನೆರಿಕ್ ಔಷಧಗಳ ಉತ್ಪಾದಕ ರಾಷ್ಟ್ರವಾಗಿದೆ. ವಿಶ್ವದ ಒಟ್ಟಾರೆ ಔಷಧಗಳ ಉತ್ಪಾದನೆಯಲ್ಲಿ ಶೇ.20ರಷ್ಟು ಭಾರತ ಉತ್ಪಾದಿಸುತ್ತಿದೆ. ಜಾಗತಿಕವಾಗಿ ಲಸಿಕೆಗಳ ಬೇಡಿಕೆಯ ಶೇ.62 ರಷ್ಟು ಪೂರೈಸಿದೆ. ಭಾರತವು ಅಗತ್ಯ ಔಷಧಗಳ ಸರಬರಾಜಿನಲ್ಲಿ ಎಸ್‌ಸಿಓ ಸದಸ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಗೆ ನೆರವು ನೀಡಿದೆ ಎಂದು ನೊರೊವ್ ತಿಳಿಸಿದ್ದಾರೆ.












Click it and Unblock the Notifications