ಕೊರೊನಾ ಅಟ್ಟಹಾಸ: ಜಗತ್ತಿನ ಮುಂದೆ ರಷ್ಯಾ ಮೇಲುಗೈ, ಭಾರತಕ್ಕೂ ಹಿನ್ನಡೆ

ದೆಹಲಿ, ಜೂನ್ 2: ಅಮೆರಿಕ, ಬ್ರೆಜಿಲ್ ಬಿಟ್ಟರೆ ರಷ್ಯಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಅತಿ ಹೆಚ್ಚು ಸೋಂಕಿಗೆ ತುತ್ತಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದೆ. ಭಾರತ ಏಳನೇ ಸ್ಥಾನದಲ್ಲಿದೆ.

Recommended Video

      ವಿರಾಟ್ ತಮ್ಮ ನಾಯಕತ್ವದ ಬೆಳವಣಿಗೆಗೆ ಕಾರಣ ಯಾರು ಅಂತಾ ಹೇಳಿದ್ದಾರೆ ನೋಡಿ | Virat Kohli | Oneindia Kannada

      ಸ್ಪೇನ್, ಇಟಲಿ, ಯುಕೆ, ಫ್ರಾನ್ಸ್ ದೇಶಗಳನ್ನು ಹಿಂದಿಕ್ಕಿದ ರಷ್ಯಾದಲ್ಲಿ ಕೊವಿಡ್ ಸೋಂಕು ಭಾರಿ ಪ್ರಮಾಣದಲ್ಲಿ ವರದಿಯಾಗಿದೆ. ರಷ್ಯಾದಲ್ಲಿ ಈವರೆಗೂ 423,741 ಜನರಿಗೆ ಮಹಾಮಾರಿ ವಕ್ಕರಿಸಿದೆ. ಜಗತ್ತಿನ ಕೊವಿಡ್ ಹಾಟ್‌ಸ್ಪಾಟ್‌ ದೇಶಗಳ ಪಟ್ಟಿಯಲ್ಲಿ ರಷ್ಯಾ ಪ್ರಮುಖವಾಗಿದೆ. ಸದ್ಯ ರಷ್ಯಾ ಮತ್ತು ಬೆಜಿಲ್‌ನಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ.

      ಆದರೆ, ಸಾವಿನ ವಿಚಾರದಲ್ಲಿ ರಷ್ಯಾ ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿದೆ. ಕೊವಿಡ್ ಎದುರಿಸುವಲ್ಲಿ ರಷ್ಯಾ ಅನುಸರಿಸಿದ ಕ್ರಮ ಏನು ಎಂಬುದರ ಬಗ್ಗೆ ಈಗ ಚರ್ಚೆಯಾಗುತ್ತಿದೆ. ರಷ್ಯಾ ಜನಸಂಖ್ಯೆಗೆ, ಆ ದೇಶದಲ್ಲಿ ವರದಿಯಾಗಿರುವ ಪ್ರಕರಣಗಳ ಅಂಕಿ ಅಂಶ ಲೆಕ್ಕಚಾರ ನೋಡಿದ್ರೆ, ಸಾವಿನ ವಿಚಾರದಲ್ಲಿ ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ಮುಂದೆ ಓದಿ....

      ರಷ್ಯಾ ಮುಂದೆ ಭಾರತಕ್ಕೆ ಹಿನ್ನಡೆ!

      ರಷ್ಯಾ ಮುಂದೆ ಭಾರತಕ್ಕೆ ಹಿನ್ನಡೆ!

      ರಷ್ಯಾದಲ್ಲಿ 423,741 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ, ಈವರೆಗೂ ಆ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,037 ಜನರು. ಅದೇ ಭಾರತದಲ್ಲಿ 1,98,706 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾಗೆ ಬಲಿಯಾದವರ ಸಂಖ್ಯೆ 5,598. ಅತಿ ಹೆಚ್ಚು ಸೋಂಕು ವರದಿಯಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ಸಾವಿನ ಲೆಕ್ಕಚಾರದಲ್ಲಿ ರಷ್ಯಾ ಹತ್ತಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.

      ರಷ್ಯಾದಷ್ಟು ಸೋಂಕು ಭಾರತದಲ್ಲಿ ವರದಿಯಾದರೆ?

      ರಷ್ಯಾದಷ್ಟು ಸೋಂಕು ಭಾರತದಲ್ಲಿ ವರದಿಯಾದರೆ?

      ರಷ್ಯಾದ ಒಟ್ಟಾರೆ ಜನಸಂಖ್ಯೆ 14.4 ಕೋಟಿ. ಆದರೆ, ಭಾರತದ ಜನಸಂಖ್ಯೆ 130 ಕೋಟಿ. ಜನಸಂಖ್ಯೆ ಲೆಕ್ಕಚಾರ ನೋಡಿದ್ರೆ ರಷ್ಯಾಗಿಂತ ಭಾರತವೇ ಕೊವಿಡ್ ಹೋರಾಟದಲ್ಲಿ ಹೆಚ್ಚು ಯಶಸ್ಸು ಕಂಡಿದೆ. ಆದರೆ, ಸಾವಿನ ಸಂಖ್ಯೆ ಗಮನಿಸಿದರೆ ಭಾರತಕ್ಕೆ ಹಿನ್ನಡೆ ಆಗಿದೆ. ಒಂದು ವೇಳೆ ರಷ್ಯಾದಲ್ಲಿ ದಾಖಲಾಗಿರುವಷ್ಟು ಸೋಂಕು ಭಾರತದಲ್ಲಿ ಕಾಣಿಸಿಕೊಂಡರೆ ಆಗ ಸಾವಿನ ಸಂಖ್ಯೆ ಈಗಿರುವುದಕ್ಕಿಂತ ಡಬಲ್ ಆಗಬಹುದು.

      ಇತರೆ ರಾಷ್ಟ್ರಗಳಿಂದ ರಷ್ಯಾದಲ್ಲಿ ಕಡಿಮೆ ಸಾವು ಹೇಗೆ?

      ಇತರೆ ರಾಷ್ಟ್ರಗಳಿಂದ ರಷ್ಯಾದಲ್ಲಿ ಕಡಿಮೆ ಸಾವು ಹೇಗೆ?

      ಅಮೆರಿಕದಲ್ಲಿ ನರಬಲಿ ನಡೆದು ಹೋಗಿದೆ. ಸ್ಪೇನ್, ಇಟಲಿ, ಯುಕೆ, ಫ್ರಾನ್ಸ್ ದೇಶಗಳಲ್ಲಿ 30 ಸಾವಿರದಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದೇಶಗಳಿಗಿಂತ ಹೆಚ್ಚು ಸೋಂಕು ಹೊಂದಿರುವ ರಷ್ಯಾ ಮಾತ್ರ ಸಾವಿನ ವಿಚಾರದಲ್ಲಿ ಅದು ಹೇಗೆ ಹಿಡಿತ ಸಾಧಿಸಿದೆ ಎಂಬುದು ಕುತೂಹಲ ಹುಟ್ಟಿಸಿದೆ.

      ಯಾವ ಯಾವ ದೇಶದಲ್ಲಿ ಎಷ್ಟು ಸಾವು?

      ಯಾವ ಯಾವ ದೇಶದಲ್ಲಿ ಎಷ್ಟು ಸಾವು?

      ಜಗತ್ತಿನಾದ್ಯಂತ 6,388,606 ಸೋಂಕು ಕಾಣಿಸಿಕೊಂಡಿದೆ. 377,883 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಅಮೆರಿಕ ಒಂದರಲ್ಲೇ 1,859,693 ಪ್ರಕರಣ ವರದಿಯಾಗಿದ್ದು, 106,927 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 529,405 ಕೇಸ್ ಮತ್ತು 30,046 ಸಾವು, ಸ್ಪೇನ್‌ನಲ್ಲಿ 286,718 ಕೇಸ್ ಮತ್ತು 27,127 ಸಾವು, ಯುಕೆಯಲ್ಲಿ 276,332 ಕೇಸ್ ಮತ್ತು 39,045 ಸಾವು ವರದಿಯಾಗಿದೆ. ಆದರೆ, ರಷ್ಯಾದಲ್ಲಿ 423,741 ಕೇಸ್ ದಾಖಲಾಗಿದ್ದರೂ 5,037 ಜನರು ಮಾತ್ರ ಪ್ರಾಣ ಕಳೆದುಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+