ಭಾರತ ವ್ಯಾಪಾರಕ್ಕೆ ಒಳ್ಳೆಯ ದೇಶವಲ್ಲ, 24 ಗಂಟೆಯಲ್ಲಿ ಭಾರೀ ತೆರಿಗೆ ಟ್ರಂಪ್ ಎಚ್ಚರಿಕೆ! ಚಿನ್ನ & ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಅವಮಾನಿಸುವುದನ್ನು ಮುಂದುವರಿಸಿದ್ದಾರೆ. ಅಲ್ಲದೇ ವ್ಯಾಪಾರ - ವಹಿವಾಟು ನಡೆಸುವುದಕ್ಕೆ ಭಾರತ ಸೂಕ್ತ ದೇಶವಲ್ಲ ಎಂದೂ ಅವರು ಹೇಳಿದ್ದು. ಮುಂದಿನ 24 ಗಂಟೆಗಳಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸಲಾಗುವ ಸುಂಕಗಳ ಮೇಲೆ ಭಾರೀ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಭಾರತದ ಆರ್ಥಿಕತೆಗೆ ಪೆಟ್ಟುಕೊಡುವುದಕ್ಕೆ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಅಲ್ಲದೇ ಭಾರತ ಎಷ್ಟೇ ಸೌಹಾರ್ದಯುತವಾಗಿ ನಡೆದುಕೊಂಡರೂ ಅಮೆರಿಕ ತನ್ನ ಬುದ್ಧಿಯನ್ನು ಪ್ರದರ್ಶಿಸುತ್ತಿದೆ.
ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುನಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ರಷ್ಯಾ ಮತ್ತು ಭಾರತದ ನಡುವೆ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ತೈಲ ಒಪ್ಪಂದ ಪ್ರಮುಖವಾಗಿದೆ. ಇದೀಗ ಮಂಗಳವಾರ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತವು ಉತ್ತಮ ವ್ಯಾಪಾರ ಪಾಲುದಾರ ದೇಶವಾಗಿಲ್ಲ (Not Been Good Trading Partner)ಎಂದು ಹೇಳಿದ್ದಾರೆ. ಅಲ್ಲದೇ ಮುಂದಿನ 24 ಗಂಟೆ ಅವಧಿಯಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಮುಖ ಸರಕುಗಳ ಮೇಲೆ ವಿಧಿಸಲಾದ ಸುಂಕಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಅವರು ಭಾರತದ ಮೇಲೆ ಶೇ 25ರಷ್ಟು ತೆರಿಗೆ ವಿಧಿಸುವುದಾಗಿ ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಕತ್ತಿ ಮಸಿಯುವುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದುವರಿಸಿದ್ದಾರೆ. ಭಾರತವು ಉತ್ತಮ ವ್ಯಾಪಾರ ಪಾಲುದಾರವಾಗಿಲ್ಲ. ಅಲ್ಲದೇ ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದರೆ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಟ್ರಂಪ್ ಅವರು ಅಮೆರಿಕದ ಸುದ್ದಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮುಂದುವರಿದು ನಾವು ಭಾರತದ ಮೇಲೆ ಶೇ 25ರಷ್ಟು ತೆರಿಗೆ ವಿಧಿಸುವುದಕ್ಕೆ ನಿರ್ಧರಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಭಾರತ ಪರೋಕ್ಷವಾಗಿ ರಷ್ಯಾದ ಯುದ್ಧಕ್ಕೆ ಸಹಕಾರ ಕೊಟ್ಟಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಆರೋಪ ಮಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅವರು ಪ್ರಸ್ತಾಪಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಯು ಯುದ್ಧ ಯಂತ್ರಕ್ಕೆ ಇಂಧನ ತುಂಬುತ್ತಿದೆ ಎಂಬ ಆರೋಪವನ್ನು ಅವರು ಮುಂದುವರಿಸಿದ್ದಾರೆ. ಭಾರತ ಈ ರೀತಿ ಮಾಡಲು ಹೋದರೆ ನಾನು ಸಂತೋಷವಾಗಿರುವುದಿಲ್ಲ ಎಂದಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದ ನಡುವೆಯೇ ರಷ್ಯಾದಿಂದ ತನ್ನ ಮಿಲಿಟರಿ ಉಪಕರಣಗಳು ಮತ್ತು ಇಂಧನದ ದೊಡ್ಡ ಭಾಗವನ್ನು ಖರೀದಿ ಮಾಡಿರುವುದಕ್ಕಾಗಿ ಭಾರತದ ಮೇಲೆ ದಂಡ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ.
ಇನ್ನು ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಅಮೆರಿಕ ತನ್ನ ಪರಮಾಣು ಉದ್ಯಮಕ್ಕಾಗಿ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ತನ್ನ ವಿದ್ಯುತ್ ವಾಹನ ಉದ್ಯಮಕ್ಕಾಗಿ ಪಲ್ಲಾಡಿಯಮ್, ರಸಗೊಬ್ಬರಗಳು ಹಾಗೂ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ ಎಂದು ಭಾರತ ಹೇಳಿದೆ.
ಭಾರತದಲ್ಲಿ ಬೆಲೆ ಏರಿಕೆಯ ಆತಂಕ: ಅಮೆರಿಕದ ಆರ್ಥಿಕ ನೀತಿಯಿಂದ ಭಾರತದಲ್ಲಿ ಔಷಧಿ, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆ ಆಗುವ ಆತಂಕ ಎದುರಾಗಿದೆ. ಮುಖ್ಯವಾಗಿ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಲಿದೆ ಎಂದು ಹೇಳಲಿದ್ದು. ಪೆಟ್ರೋಲ್ ಹಾಗೂ ಡೀಸೆಲ್ ಸೇರಿದಂತೆ ಕಚ್ಚಾ ತೈಲೆ ಬೆಲೆ ಏರಿಕೆಯ ಆತಂಕವೂ ಎದುರಾಗಿದೆ.












Click it and Unblock the Notifications