ಇರಾನ್ ಛಬಹಾರ್ ಬಂದರು ಅಭಿವೃದ್ಧಿಗೆ ಅಮೆರಿಕದಿಂದ ಭಾರತಕ್ಕೆ ವಿನಾಯ್ತಿ

ಇರಾನ್ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿರುವ ಅಮೆರಿಕವು ಭಾರತವು ಅಲ್ಲಿ ನಡೆಸುತ್ತಿರುವ ಕೆಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ವಿನಾಯಿತಿ ನೀಡಿದೆ. ಅದರಲ್ಲೂ ಮುಖ್ಯವಾಗಿ ಇರಾನ್ ನ ಛಬಹಾರ್ ಬಂದರು ಅಭಿವೃದ್ಧಿ ಹಾಗೂ ಅಫ್ಘಾನಿಸ್ತಾನದ ಜತೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ನಿರ್ಮಾಣಕ್ಕೆ ಭಾರತಕ್ಕೆ ಅಮೆರಿಕವು ವಿನಾಯ್ತಿ ನೀಡಿದೆ.

ವಿಸ್ತೃತವಾದ ಆಲೋಚನೆ ಮಾಡಿದ ನಂತರ ಅಮೆರಿಕವು ಇರಾನ್ ವಿಚಾರದಲ್ಲಿ ಭಾರತಕ್ಕೆ ಕೆಲವು ವಿನಾಯ್ತಿ ನೀಡಿದೆ. ಜತೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಇರಾನ್ ನಿಂದ ಆಮದು ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

‌ಈ ವರೆಗಿನ ಕಠಿಣವಾದ ದಿಗ್ಬಂಧನವನ್ನು ಸೋಮವಾರ ಅಮೆರಿಕವು ಇರಾನ್ ಗೆ ವಿಧಿಸಿದೆ. ಅಲ್ಲಿನ ಬ್ಯಾಂಕಿಂಗ್ ಮತ್ತು ಇಂಧನ ವಲಯದ ಮೇಲೆ ದಿಗ್ಬಂಧನ ಹೇರಲಾಗಿದೆ. ಯುರೋಪ್, ಏಷ್ಯಾ ಅಥವಾ ಇತರ ಯಾವುದೇ ದೇಶದಲ್ಲಿರುವ ಕಂಪನಿಗಳು ಇರಾನ್ ನಿಂದ ತೈಲ ಆಮದು ನಿಲ್ಲಿಸದಿದ್ದರೆ ವಿಧಿಸುವ ದಂಡವನ್ನು ಮತ್ತೆ ಚಾಲ್ತಿಗೆ ತರಲಾಗುವುದು ಎಂದು ತಿಳಿಸಲಾಗಿದೆ.

India gets US waiver for development of Chabahar Port in Iran

ಇರಾನ್ ನಿಂದ ತಾತ್ಕಾಲಿಕವಾಗಿ ತೈಲ ಆಮದು ಮಾಡಿಕೊಳ್ಳಬಹುದಾದ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಅಂದಹಾಗೆ ಛಬಹಾರ್ ಬಂದರು ಅಭಿವೃದ್ಧಿ ಹಾಗೂ ರೈಲು ಹಳಿ ನಿರ್ಮಾಣದಿಂದ ಅಫ್ಘಾನಿಸ್ತಾನಕ್ಕೆ ನೆರವಾಗುವುದರಿಂದ ಅವುಗಳಿಗೆ ದಿಗ್ಬಂಧನದಿಂದ ವಿನಾಯ್ತಿ ನೀಡಲಾಗಿದೆ ಎಂದು ಅಮೆರಿಕ ತಿಳಿಸಿದೆ.

India gets US waiver for development of Chabahar Port in Iran

ಪಾಕಿಸ್ತಾನದ ಗ್ವದಾರ್ ಬಂದರನ್ನು ಅಭಿವೃದ್ಧಿ ಪಡಿಸಿದ ಚೀನಾಗೆ ಹೊಡೆತ ಕೊಡುವ ಉದ್ದೇಶದಿಂದ ಭಾರತದಿಂದ ನೇರವಾಗಿ ಸಂಪರ್ಕ ಇರುವ ಇರಾನ್ ನ ಛಬಹಾರ್ ಬಂದರು ಅಭಿವೃದ್ಧಿ ಕೈಗೆತ್ತಿಕೊಂಡಿತು. ಅಂದಹಾಗೆ ಛಬಹಾರ್ ನಿಂದ ಗ್ವದಾರ್ ಎಂಬತ್ತು ಕಿ.ಮೀ. ದೂರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+