ಟಿಕ್ ಟಾಕ್ ವಿಡಿಯೋ ಅಪ್ ಲೋಡ್ ಮಾಡಿದ ಯುವತಿಗೆ ಜೈಲುಶಿಕ್ಷೆ!
ಕೈರೋ, ಜುಲೈ.27: ಟಿಕ್ ಟಾಕ್. ವಿಶ್ವದಲ್ಲೇ ಸಾಕಷ್ಟು ಸುದ್ದಿಯಲ್ಲಿರುವ ಚೀನಾದ ಇದೊಂದು ಆಪ್ ಬಳಸಿದ ಐವರು ಮಹಿಳೆಯರು ಜೈಲುಶಿಕ್ಷೆಗೆ ಗುರಿಯಾಗಿರುವ ಘಟನೆ ಈಜಿಪ್ಟ್ ನಲ್ಲಿ ವರದಿಯಾಗಿದೆ. ಆದರೆ ಜೈಲುಶಿಕ್ಷೆ ಅನುಭವಿಸುವುದಕ್ಕೆ ಕಾರಣವಾಗಿದ್ದು ಟಿಕ್ ಟಾಕ್ ಆಪ್ ಅಲ್ಲ. ಬದಲಿಗೆ ಮಹಿಳೆಯರು ಅಪ್ ಲೋಡ್ ಮಾಡಿದ ಅಸಭ್ಯ ವಿಡಿಯೋಗಳು.
Recommended Video
ಕೈರೋದ ಆರ್ಥಿಕ ನ್ಯಾಯಾಲಯವು ಮಾವಾದ್ ಅಲ್ ಅದಮ್ ಮತ್ತು ಹನೀನ್ ಹೊಸ್ಸಮ್ ಸೇರಿದಂತೆ ಐವರು ಮಹಿಳೆಯರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಒಬ್ಬೊಬ್ಬರಿಗೂ ತಲಾ 3 ಲಕ್ಷ ಈಜಿಪ್ಟ್ ಪೌಂಡ್ ದಂಡವನ್ನು ವಿಧಿಸಿದೆ.
ಅಸಭ್ಯ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮಹಿಳೆಯರು ಈಜಿಪ್ಟ್ ಸಮಾಜದ ಮೌಲ್ಯ ಮತ್ತು ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದಾರೆ. ನೈತಿಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪುರುಷರ ಜೊತೆಗೆ ಅನುಚಿತ ವಿಡಿಯೋ ಕಾಲ್:
ಇಬ್ಬರು ಮಹಿಳೆಯರು ಅಸಭ್ಯ ವಿಡಿಯೋ ಮತ್ತು ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಉಳಿದಂತೆ ಹೆಸರು ಉಲ್ಲೇಖಿಸದ ಮೂವರು ಮಹಿಳೆಯರು ಪುರುಷರ ಜೊತೆಗೆ ಅನುಚಿತವಾಗಿ ಸಂಭಾಷಣೆ ನಡೆಸಿದ ವಿಡಿಯೋ ಕಾಲ್ ಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ಆರೋಪಿಸಲಾಗಿದೆ.
ಈಜಿಪ್ಟ್ ನಲ್ಲಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲೇ ಪ್ರಭಾವಿ ಎನಿಸಿದ ಮಹಿಳೆಯರ ವಿರುದ್ಧ ಕೋರ್ಟ್ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗಿದೆ. 1.3 ಮಿಲಿಯನ್ ಫಾಲೋವರ್ಸ್ ರನ್ನು ಹೊಂದಿರುವ ಹೋಸ್ಸಮ್ ಎಂಬ ಮಹಿಳೆಯು ಹಣವನ್ನು ಸಂಬಾದಿಸುವುದು ಹೇಗೆ ಎನ್ನುವ ಬಗ್ಗೆ 3 ನಿಮಿಷದ ವಿಡಿಯೋ ಅಪ್ ಲೋಡ್ ಮಾಡಿದ್ದರು. ಸಮಾಜವನ್ನು ತಪ್ಪು ಹಾದಿಗೆಳೆಯುವ ಆರೋಪದ ಹಿನ್ನೆಲೆ ಏಪ್ರಿಲ್ ತಿಂಗಳಿನಲ್ಲಿ ಹೋಸ್ಸಮ್ ರನ್ನು ಬಂಧಿಸಿದ್ದರು.
ಇನ್ನು, 2 ಮಿಲಿಯನ್ ಫಾಲೋವರ್ಸ್ ರನ್ನು ಹೊಂದಿರುವ ಅಧಮ್ ಈ ಹಿಂದೆ ಅಪಹಾಸ್ಯಕಾರಿ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ಹಿನ್ನೆಲೆ ಕಳೆದ ಮೇ ತಿಂಗಳಿನಲ್ಲಿ ಅಧಮ್ ರನ್ನು ಬಂಧಿಸಲಾಗಿತ್ತು.












Click it and Unblock the Notifications