ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

|
Google Oneindia Kannada News

ನವದೆಹಲಿ, ಆಗಸ್ಟ್ 19: ರಷ್ಯಾಗೆ ಭೇಟಿ ನೀಡಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದ್ವಿಪಕ್ಷೀಯ ಭದ್ರತಾ ಸಹಕಾರಕ್ಕೆ ಸಂಬಂಧಿಸಿದಂತೆ ರಷ್ಯಾದ ಸಹವರ್ತಿ ನಿಕೊಲಾಯ್ ಪಟ್ರಶೆವ್ ಜೊತೆ ಚರ್ಚಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಪ್ರಾರಂಭವಾಗಿದೆ. ಈ ಬೆಳವಣಿಗೆ ನಂತರ ಮೊದಲ ಬಾರಿಗೆ ಅಜಿತ್ ದೋವಲ್ ಮತ್ತು ಪಟ್ರಶೆವ್ ಮುಖಾಮುಖಿ ಭೇಟಿ ಆಗಿದ್ದಾರೆ. ಈ ವೇಳೆ ಅಫ್ಘಾನಿಸ್ತಾನ ಸೇರಿದಂತೆ ಪ್ರಾದೇಶಿಕ ಭದ್ರತಾ ಪರಿಸ್ಥಿತಿಯು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರವೇ ಕೊಟ್ಟ ಆಫರ್: 10 ಮಕ್ಕಳನ್ನು ಹೆರುವವರಿಗೆ 13 ಲಕ್ಷ ರೂಪಾಯಿ ಬಹುಮಾನ!ಸರ್ಕಾರವೇ ಕೊಟ್ಟ ಆಫರ್: 10 ಮಕ್ಕಳನ್ನು ಹೆರುವವರಿಗೆ 13 ಲಕ್ಷ ರೂಪಾಯಿ ಬಹುಮಾನ!

ಅಜಿತ್ ದೋವಲ್ ಭೇಟಿ ಅಥವಾ ಭೇಟಿಯ ಕುರಿತು ಭಾರತದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಂದಿಲ್ಲ. ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಪಟ್ರಶೆವ್ ಮತ್ತು ದೋವಲ್ ಅವರು "ಭದ್ರತಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ, ಸಮಸ್ಯೆಗಳು ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಕಾರ್ಯಸೂಚಿಯಲ್ಲಿನ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ'' ಎಂದು ರಷ್ಯಾ ತಿಳಿಸಿದೆ.

In Russia india National Security Adviser Ajit Doval holds talks on security issues

ದ್ವಿಪಕ್ಷೀಯ ಚರ್ಚೆಗೆ ಹಸಿರು ನಿಶಾನೆ:

"ರಷ್ಯಾ-ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಪರ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ಭದ್ರತಾ ಮಂಡಳಿಗಳ ನಡುವಿನ ಸಂವಾದ ಮುಂದುವರಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳ ವಿರೋಧದ ಹೊರತಾಗಿಯೂ ರಿಯಾಯಿತಿ ದರದ ರಷ್ಯಾದ ಸರಕುಗಳನ್ನು, ಪ್ರಾಥಮಿಕವಾಗಿ ಕಚ್ಚಾ ತೈಲವನ್ನು ಖರೀದಿಸಲು ಭಾರತ ನಿರ್ಧರಿಸಿದ ಹಿನ್ನೆಲೆ ಅಜಿತ್ ದೋವಲ್ ಭೇಟಿಯು ಮಹತ್ವ ಪಡೆದುಕೊಂಡಿದೆ. ಉಜ್ಬೇಕಿಸ್ತಾನ್‌ನಲ್ಲಿ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಹಿರಿಯ ಭದ್ರತಾ ಅಧಿಕಾರಿಗಳ ಎರಡು ದಿನಗಳ ಸಭೆಗೆ ಒಂದು ದಿನ ಮುಂಚಿತವಾಗಿ ನಡೆಸಲಾಗುತ್ತಿದೆ.

English summary
In Russia india National Security Adviser Ajit Doval holds talks on security issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X