ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಲ್ಲಿರುವ ಐವರಲ್ಲಿ ನಾಲ್ಕು ಕೊವಿಡ್ ರೋಗಿಗಳಲ್ಲಿ ನರರೋಗ ಲಕ್ಷಣ ಗೋಚರ

|
Google Oneindia Kannada News

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರಲ್ಲಿ ನಾಲ್ಕು ಕೊವಿಡ್ ರೋಗಿಗಳಲ್ಲಿ ನರರೋಗ ಲಕ್ಷಣ ಗೋಚರವಾಗಿದೆ.

ಸ್ನಾಯುಸೆಳೆತ, ತಲನೋವು, ಗೊಂದಲ, ಆಯಾಸ, ವಾಸನೆ, ರುಚಿ ಗ್ರಹಿಕೆ ಕಳೆಸುಕೊಳ್ಳುವುದು ಇನ್ನಿತರೆ ಲಕ್ಷಣಗಳು ಕಾಣಿಸಿಕೊಂಡಿವೆ.

ಪಟ್ಟಿ ಮಾಡಲಾದ ಅತ್ಯಂತ ತೀವ್ರವಾದ ಸ್ಥಿತಿ ಎಂದರೆ ಎನ್ಸೆಫಲೋಪತಿ, ಗೊಂದಲದಿಂದ ಆರಂಭವಾಗುವ ಈ ಸ್ಥಿತಿ ಕೋಮಾದವರೆಗೂ ಕೊಂಡೊಯ್ಯಬಲ್ಲದು. ಈ ಕುರಿತು ಚಿಕಾಗೋದ ನಾರ್ತ್ ವೆಸ್ಟರ್ನ್ ಮೆಡಿಸಿನ್‌ನ ಇಗೊರ್ ಕೊರಲ್ನಿಕ್ ಹೇಳಿದ್ದಾರೆ.

ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಸಾಂಕ್ರಾಮಿಕ ರೋಗದ ಆರಂಭದಲ್ಲಿ ಚಿಕಾಗೊ ಮೂಲದ ಆರೋಗ್ಯ ವ್ಯವಸ್ಥೆಯಲ್ಲಿ ಕೊವಿಡ್ 19 ಎಂದು ಆಸ್ಪತ್ರಗೆ ದಾಖಲಾದ 509 ರೋಗಿಗಳಲ್ಲಿ ನರರೋಗ ಲಕ್ಷಣಗಳಿರುವುದು ಕಂಡುಬಂದಿತ್ತು. ಹೀಗಾಗಿ ಅಧ್ಯಯನವನ್ನೂ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಅಲ್ಪ ಅವಧಿಗೆ ಉಸಿರಾಟದ ತೊಂದರೆ, ದೀರ್ಘಕಾಲದ ಅಪಾಯ

ಅಲ್ಪ ಅವಧಿಗೆ ಉಸಿರಾಟದ ತೊಂದರೆ, ದೀರ್ಘಕಾಲದ ಅಪಾಯ

ಕೆಲ ಸಮಯದವರೆಗೆ ಅಲ್ಪ ಪ್ರಮಾಣದ ಉಸಿರಾಟದ ತೊಂದರೆ ಅನುಭವಿಸುವ ಜನರು ಕೂಡ ದೀರ್ಘ ಅವಧಿಯ ರೋಗಲಕ್ಷಣವನ್ನು ಹೊಂದುವ ಅಪಾಯದಲ್ಲಿದ್ದಾರೆ. ಇದು ಕೊವಿಡ್ ರೋಗಿಗಳಿಗೆ ತಿಂಗಳುಗಟ್ಟಲೆ ಪರಿಣಾಮ ಬೀರಬಹುದು ಎಂದು ಅವರು ತಿಳಿಸಿದ್ದಾರೆ. ಈ ಪರಿಸ್ಥಿತಿಗೆ ತಲುಪಲು ಏನು ಕಾರಣ ಎಂಬುದನ್ನು ತಿಳಿಯಬೇಕಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಹಾಗೆಯೇ ಕೊವಿಡ್ 19ನಿಂದ ದೀರ್ಗಕಾಲದ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವವರನ್ನು ಪರೀಕ್ಷಿಸಲಾಗುತ್ತದೆ.

ಅಧ್ಯಯನದಲ್ಲಿ ಬಳಸಿಕೊಳ್ಳಲಾದ ರೋಗಿಗಳ ವಯಸ್ಸು?

ಅಧ್ಯಯನದಲ್ಲಿ ಬಳಸಿಕೊಳ್ಳಲಾದ ರೋಗಿಗಳ ವಯಸ್ಸು?

ಎನ್ಸೆಫಲೋಪತಿ ಹೊಂದಿರುವ 65 ವರ್ಷದ ವ್ಯಕ್ತಿ ಹಾಗೂ ಹೊಂದರಿದ 55 ವರ್ಷದ ವ್ಯಕ್ತಿಯನ್ನು ಹೋಲಿಕೆ ಮಾಡಲಾಯಿತು. ಮೆದುಳಿನ ಕಾಯಿಲೆ ಇರುವವರಲ್ಲಿ ಪುರುಷರೇ ಹೆಚ್ಚು. ಅಂತಹ ವ್ಯಕ್ತಿಗಳಲ್ಲಿ ರಕ್ತದ ಒತ್ತಡವೂ ಕೂಡ ಇರುತ್ತದೆ.

 ಚೀನಾದಲ್ಲಿ ಶೇ.36ರಷ್ಟು ರೋಗಿಗಳಿಗೆ ನರಸಮಸ್ಯೆ ಇದೆ

ಚೀನಾದಲ್ಲಿ ಶೇ.36ರಷ್ಟು ರೋಗಿಗಳಿಗೆ ನರಸಮಸ್ಯೆ ಇದೆ

ಚೀನಾದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಶೇ.36ರಷ್ಟು ರೋಗಿಗಳು ನರ ಸಮಸ್ಯೆಯನ್ನು ಹೊಂದಿದ್ದಾರೆ. ಸ್ಪೇನ್‌ನಲ್ಲಿ ಶೇ.57 ರಷ್ಟು ಮಂದಿ ನರದೌರ್ಬಲ್ಯಕ್ಕೆ ಒಳಗಾಗಿದ್ದಾರೆ. ವೈರಸ್‌ನಿಂದ ಮೆದುಳಿಗೆ ಸೋಂಕು ತಗುಲಿದೆಯೇ ಎಂದು ಭವಿಷ್ಯದಲ್ಲಿ ರೋಗನಿರೋಧಕ ಅಂಶಗಳ ಜತೆಗೆ ಅವರ ಗುಂಪು ಅಧ್ಯಯನ ಮಾಡಲಿದೆ.

509 ಮಂದಿಯಲ್ಲಿ ಶೇ.42 ಕೊರೊನಾ ಸೋಂಕಿತರು

509 ಮಂದಿಯಲ್ಲಿ ಶೇ.42 ಕೊರೊನಾ ಸೋಂಕಿತರು

ಅಧ್ಯಯನ ಮಾಡಿದ 509 ರೋಗಿಗಳಲ್ಲಿ ಶೇ.42ರಷ್ಟು ಮಂದಿ ಕೊರೊನಾ ಸೋಂಕಿತರಿದ್ದಾರೆ. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸ್ನಾಯುಸೆಳೆತ, ತಲನೋವು ಮತ್ತು ಎನ್ಸೆಫಲೋಪತಿ ಹೆಚ್ಚಾಗಿ ಕಂಡು ಬರುವ ಲಕ್ಷಣವಾಗಿವೆ.
ಈ ರೋಗದಲ್ಲಿ ಕಡಿಮೆ ವಯಸ್ಸಿನವರು ಕೊರೊನಾ ವೈರಸ್‌ನಿಂದ ಬದುಕುಳಿಯುತ್ತಾರೆ.

Recommended Video

ಶಾಲಾ ಕಾಲೇಜುಗಳು ಪುನರಾರಂಬದ ಬಗ್ಗೆ Sriramulu ಹೇಳಿದ್ದೇನು | Oneindia Kannada

English summary
About 4 out of 5 patients hospitalized with Covid-19 suffer neurologic symptoms such as muscle pain, headaches, confusion, dizziness and the loss of smell or taste, new research shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X