ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಗೆ ಅಮೆರಿಕ ನಿರ್ಬಂಧ ವಿಚಾರ ಸ್ವಾಗತಿಸಿದ ಇಮ್ರಾನ್ ಖಾನ್

ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದಿಂದ ಪಾಕಿಸ್ತಾನದ ಬುದ್ಧಿಜೀವಿಗಳು ಸ್ವದೇಶದಲ್ಲೇ ಉಳಿಯುವಂತಾಗಲಿದೆ ಎಂಬುದು ಖಾನ್ ಆಲೋಚನೆ

|
Google Oneindia Kannada News

ಕರಾಚಿ, ಜನವರಿ 30: ಈಗಾಗಲೇ ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕ ಪ್ರವೇಶಿಸುವುದನ್ನು ದುಸ್ತರಗೊಳಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೀಘ್ರದಲ್ಲೇ ಆ ನಿರ್ಬಂಧವನ್ನು ಪಾಕಿಸ್ತಾನಕ್ಕೂ ಅನ್ವಯಿಸಿದರೆ ಅದು ಸ್ವಾಗತಾರ್ಹ ಎಂದು ಪಾಕಿಸ್ತಾನದ ರಾಜಕೀಯ ಧುರೀಣ ಇಮ್ರಾನ್ ಖಾನ್ ತಿಳಿಸಿದ್ದಾರೆ.

ಶನಿವಾರ ತಮ್ಮ ಪಕ್ಷವಾದ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಅನೇಕ ಬುದ್ಧಿಜೀವಿಗಳು, ತಂತ್ರಜ್ಞರು ಹಾಗೂ ಇತರ ವಿದ್ಯಾವಂತರು ಉತ್ತಮ ಉದ್ಯೋಗಗಳನ್ನು ಅರಸಿ ಅಮೆರಿಕದ ಕಡೆಗೆ ವಲಸೆ ಹೋಗುತ್ತಾರೆ. ಟ್ರಂಪ್ ಅವರು ಪಾಕಿಸ್ತಾನದ ಪ್ರಜೆಗಳಿಗೆ ನಿರ್ಬಂಧ ವಿಧಿಸಿದಲ್ಲಿ ಆ ಬುದ್ಧಿವಂತ ಪಾಕ್ ಪ್ರಜೆಗಳು ನಮ್ಮಲ್ಲೇ ಉಳಿಯುತ್ತಾರೆ. ಇದರಿಂದ ನಮ್ಮ ದೇಶಕ್ಕೇ ಅನುಕೂಲ'' ಎಂದು ಹೇಳಿದ್ದಾರೆ.[ಪಾಕ್ ವಲಸಿಗರಿಗೆ ಯುಎಸ್ ನಿಂದ ನಿಷೇಧ: ಭಾರತ ಸ್ವಾಗತ]

Imran Khan thinks Donald Trump should include Pakistan on travel ban list

ಈಗಾಗಲೇ ಪಾಕಿಸ್ತಾನವು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಇವೆಲ್ಲವನ್ನೂ ಪ್ರಜೆಗಳು ಇಲ್ಲೇ ಖುದ್ದಾಗಿ ನೆಲೆನಿಂತು ನಿವಾರಿಸಬೇಕಿದೆ. ಹಾಗಾಗಿ, ವಿದ್ಯಾವಂತರು ದೇಶ ಬಿಟ್ಟು ಹೋಗಬಾರದು ಎಂದು ಆಶಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ, ದೇಶದಲ್ಲಿನ ಅರಾಜಕತೆ, ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಅವರು, ದೇಶದಲ್ಲಿನ ಕೆಟ್ಟ ವಾತಾವರಣಕ್ಕೆ ಪ್ರಧಾನಿ ನವಾಜ್ ಶರೀಫ್ ಅವರ ದುರಾಡಳಿತವೇ ಕಾರಣವೆಂದು ದೂಷಿಸಿದರು.

English summary
Pakistan's political party Pakistan Tehrik-e-insaf (PTI) leader Imran Khan welcomes Donald Trump's intension to change visa rules for Pakistan. If Trump implement new rules it will be a favour for Pakistan, Khan says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X