Imran Khan: ಇಮ್ರಾನ್ ಬೆಂಬಲಿಗರ ತೀವ್ರ ಪ್ರತಿಭಟನೆಗೆ ಬೆಚ್ಚಿಬಿದ್ದ ಪಾಕಿಸ್ತಾನ!
ಪಾಕಿಸ್ತಾನ ಅಕ್ಷಶಃ ಅಲ್ಲಾಡಿ ಹೋಗಿದ್ದು, ಇಮ್ರಾನ್ ಖಾನ್ ಬೆಂಬಲಿಗರ ತೀವ್ರ ಪ್ರತಿಭಟನೆಗೆ ಬೆಚ್ಚಿ ಬಿದ್ದಿದೆ ಭಾರತದ ಶತ್ರು ದೇಶ. ಅಂದಹಾಗೆ ಪಾಕಿಸ್ತಾನ ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತದೆ, ಹಾಗೇ ಅರಾಜಕತೆಯ ಬೆಂಕಿಯಲ್ಲಿ ಬೇಯುತ್ತದೆ. ಅದರಲ್ಲೂ ಈ ಹಿಂದೆ ಉಗ್ರರ ಕಾಟಕ್ಕೆ ನರಳಿ ಹೋಗಿದ್ದ ಪಾಕಿಸ್ತಾನದಲ್ಲಿ ಇದೀಗ ಸ್ವತಃ ಸರ್ಕಾರದ ತಪ್ಪುಗಳೇ ದೊಡ್ಡ ಅವಾಂತರ ಸೃಷ್ಟಿ ಮಾಡಿವೆ. ಈ ಮೂಲಕ ಇಮ್ರಾನ್ ಖಾನ್ ಬೆಂಬಲಿಗರ ಆರ್ಭಟ ಹೆಚ್ಚಾಗಿದ್ದು, ಇಡೀ ಪಾಕಿಸ್ತಾನ ಬೆಚ್ಚಿಬಿದ್ದಿದೆ!
ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರ ಸುಳ್ಳು ಸುಳ್ಳು ಆರೋಪ ಹೊರಿಸಿ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದೆ ಎಂಬುದು, ಇಮ್ರಾನ್ ಖಾನ್ ಬೆಂಬಲಿಗರ ಗಂಭೀರ ಆರೋಪ. ಇದೇ ಕಾರಣಕ್ಕೆ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ದೊಡ್ಡ ಪ್ರತಿಭಟನೆ ಆರಂಭವಾಗಿದೆ. ಇಮ್ರಾನ್ ಖಾನ್ ಬೆಂಬಲಿಗರು ಹಿಂಸಾಚಾಕ್ಕೆ ಇಳಿದಿದ್ದಾರೆ ಎಂಬ ಆರೋಪಗಳ ನಡುವೆ, ಈಗ ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ವಿರುದ್ಧ ಕೂಡ ಭಾರಿ ಆಕ್ರೋಶ ಮೊಳಗಿದೆ.

ಇಮ್ರಾನ್ ಖಾನ್ ಬೆಂಬಲಿಗರಿಗೆ ಗುಂಡೇಟು?
ಇಮ್ರಾನ್ ಖಾನ್ ಪಾಕಿಸ್ತಾನದ ಆಡಳಿತ ನಡೆಸುವ ಸಮಯದಲ್ಲಿ, ಬೇಕು ಅಂತಲೇ ಅರೆಸ್ಟ್ ಮಾಡಿ ಕುತಂತ್ರದ ಮೂಲಕ ಜೈಲಿಗೆ ಕಳಿಸಲಾಗಿತ್ತು, ಎಂಬುದು ಇಮ್ರಾನ್ ಖಾನ್ ಬೆಂಬಲಿಗರ ಗಂಭೀರ ಆರೋಪ. ಇದೇ ಕಾರಣಕ್ಕೆ ಇಮ್ರಾನ್ ಖಾನ್ ಬೆಂಬಲಿಗರು ಸೇರಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಸಾರಥ್ಯವನ್ನು ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಅವರು ವಹಿಸಿದ್ದಾರೆ.
ಈ ಮೂಲಕ ಪಾಕಿಸ್ತಾನದ ರಾಜಧಾನಿ ಈಗ ನರಕವಾಗಿ ಬದಲಾಗುತ್ತಿದೆ. ಇಂತಹ ಸಮಯದಲ್ಲಿ ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಗುಂಡು ಹಾರಿಸಿರುವ ಆರೋಪ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಇಸ್ಲಾಮಾಬಾದ್ ನಗರದಲ್ಲಿ ಭಾರಿ ಭದ್ರತೆ ಕೈಗೊಂಡಿದ್ದು, ಇಲ್ಲಿ ಬೆಂಕಿ ಹಚ್ಚಲು ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದ್ಕಡೆ ಪಾಕಿಸ್ತಾನದ ಸಣ್ಣಪುಟ್ಟ ನಗರಗಳಲ್ಲೂ ಗಲಾಟೆ ಜೋರಾಗುತ್ತಿದೆ.











Click it and Unblock the Notifications