Imran Khan Arrest: ಪಾಕಿಸ್ತಾನದ ಸ್ಥಿತಿ ಬಡತನದಿಂದ ಬೀದಿಗೆ!

ಪಾಕಿಸ್ತಾನ: ಎಲ್ಲಿ ನೋಡಿದರೂ ಬೆಂಕಿ, ಆಕಾಶದ ತುಂಬಾ ಆವರಿಸಿರುವ ದಟ್ಟ ಹೊಗೆ. ಅಂದಹಾಗೆ ಇದು ಇಮ್ರಾನ್ ಖಾನ್ ಬಂಧನದ ಬಳಿಕ ರೊಚ್ಚಿಗೆದ್ದಿರುವ ಬೆಂಬಲಿಗರು ಪಾಕಿಸ್ತಾನದಲ್ಲಿ ಸೃಷ್ಟಿಸಿರುವ ಅವಾಂತರ. ಇದು ಇಷ್ಟಕ್ಕೇ ನಿಂತಿಲ್ಲ ಪೆಟ್ರೋಲ್ ಬಂಕ್ & ಸೇನಾ ನೆಲೆಗಳ ಮೇಲೂ ದಾಳಿ ಆರಂಭವಾಗಿದೆ. ಹೀಗೆ ಪಾಕ್ ಪರಿಸ್ಥಿತಿ ಬಡತನದಿಂದ ಬೀದಿಗೆ ಬಿದ್ದಂತಾಗಿದೆ.

ಮೊದಲೇ ತಿನ್ನಲು ಅನ್ನವಿಲ್ಲದ ಪರದಾಡುತ್ತಿದ್ದ ದೇಶ ಅದು ಇಂತಹ ಪರಿಸ್ಥಿತಿಯಲ್ಲಿ ಆಂತರಿಕ ಹಿಂಸಾಚಾರ ಬೇರೆ. ಅದರಲ್ಲೂ ಇಮ್ರಾನ್ ಖಾನ್ ಬಂಧನದ ಬಳಿಕ ಪರಿಸ್ಥಿತಿ ಅಯೋಮಯ ಎಂಬಂತಾಗಿದೆ. ಪಾಕಿಸ್ತಾನ ರಕ್ತದ ಮಡುವಿನಲ್ಲಿ ಮಿಂದಿದೆ. ಪಾಕಿಸ್ತಾನದ ಗಲ್ಲಿಗಲ್ಲಿಗಳಲ್ಲಿ ರಕ್ತ ಹರಿಯುವುದು ಮಾತ್ರವಲ್ಲ, ಬೆಂಕಿಯ ಕೆನ್ನಾಲಿಗೆ ಎಲ್ಲೆಲ್ಲೂ ಅಬ್ಬರಿಸಿದೆ. ಇನ್ನೊಂದು ಕಡೆ ಕಂಬಿ ಎಣಿಸುತ್ತಿರುವ ಇಮ್ರಾನ್ ಖಾನ್‌ಗೆ ಮತ್ತೆ ಶಾಕ್ ಸಿಕ್ಕಿದೆ. ಇಮ್ರಾನ್ ಮನೆಗೆ ಪ್ರತಿಭಟನಾಕಾರರು ನುಗ್ಗಿ ಗಲಾಟೆ ಶುರು ಮಾಡಿದ್ದಾರೆ.

Imran Khan supporters become 1st target of Pakistan army

ಇಮ್ರಾನ್ ಬೆಂಬಲಿಗರು ಕಂಬಿ ಹಿಂದೆ!

ಹೌದು, ಪಾಕಿಸ್ತಾನದ ಸೇನೆ ಅದೆಷ್ಟ ಕ್ರೂರವಾಗಿ ಈ ಪರಿಸ್ಥಿತಿ ನಿಭಾಯಿಸುತ್ತಿದೆ ಅಂದ್ರೆ ಮುಲಾಜು ನೋಡದೆ ಕಂಡಲ್ಲಿ ಗುಂಡು ಹೊಡೆಯುತ್ತಿದೆ. ಈಗಾಗಲೇ ಹತ್ತಾರು ಜನ ಸೇನೆ ಗುಂಡಿಗೆ ಬಲಿಯಾಗಿದ್ದಾರೆ. ಆದರೆ ಕಿಚ್ಚು ಮಾತ್ರ ಆರುತ್ತಿಲ್ಲ. ಪ್ರತಿಭಟನೆ ಜೋರಾಗುತ್ತಿರುವುದು ಪಾಕಿಸ್ತಾನದ ಸೇನಾ ನಾಯಕರ ಬುಡ ಅಲ್ಲಾಡಿಸುತ್ತಿದೆ. ಈ ಕಾರಣಕ್ಕೆ ಇಮ್ರಾನ್ ಖಾನ್ ಬೆಂಬಲಿಗರನ್ನ ಅರೆಸ್ಟ್ ಮಾಡಿ, ಜೈಲಿಗೆ ಹಾಕುತ್ತಿದ್ದಾರೆ. ಆದರೂ ಹೋರಾಟ ನಿಲ್ಲುತ್ತಿಲ್ಲ, ಬಲದಾಗಿ ಪ್ರತಿಭಟನೆ ತೀವ್ರವಾಗುತ್ತಿದೆ.

ಮಹಿಳೆಯರ ಮೇಲೆ ಪಾಕ್ ಸೇನೆ ಪೌರುಷ

ಇಮ್ರಾನ್ ಖಾನ್ ಅರೆಸ್ಟ್ ಆಗಿ ಜೈಲು ಸೇರುತ್ತಿದ್ದಂತೆ ಪಾಕಿಸ್ತಾನ ಮಿಲಿಟರಿ & ಐಎಸ್‌ಐ ಹೊಸ ಆಟ ಶುರುಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಲಾಹೋರ್‌ನ ಇಮ್ರಾನ್ ಮನೆ ಮೇಲೆ ನಿರಂತರ ಶೆಲ್ ದಾಳಿ ನಡೆಸಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ ಕೈವಾಡವಿದೆ ಎಂದು ಖಾನ್ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಪರಿಣಾಮ ಪಾಕಿಸ್ತಾನದ ಬೀದಿಗಳಲ್ಲಿ ಇನ್ನಷ್ಟು ರಕ್ತ ಹರಿಯುವುದು ಪಕ್ಕಾ ಆಗಿದೆ. ಇಮ್ರಾನ್ ಖಾನ್ ಹೆಂಡತಿ ಜೀವ ಭಯದಲ್ಲೇ ಒಂಟಿಯಾಗಿ ಮನೆಯಲ್ಲಿ ನರಳುತ್ತಿದ್ದಾರಂತೆ.

Imran Khan supporters become 1st target of Pakistan army

10 ಜನರ ಹೆಣ ಬಿದ್ದರೂ ತೃಪ್ತಿ ಆಗಿಲ್ವಾ?

ಈಗಾಗಲೇ ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಆದರೆ ಹಿಂಸೆ ನಿಯಂತ್ರಿಸಲು ಆಗದ ಪಾಕಿಸ್ತಾನ ಸೇನೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿರುವ ಆರೋಪ ಈಗ ಕೇಳಿಬಂದಿದೆ. ಹೌದು ಭೀಕರ ಹಿಂಸಾಚಾರದಲ್ಲಿ 10 ಜನ ಮೃತಪಟ್ಟರೂ ಪಾಕಿಸ್ತಾನ ಸೇನೆಗೆ ಇನ್ನೂ ನೆಮ್ಮದಿ ಸಿಕ್ಕಿಲ್ವಾ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗಳ ನಡುವೆ ಒಂಟಿ ಮಹಿಲೆ ಮೇಲೆಯೂ ಭೀಕರವಾಗಿ ಶೆಲ್ ದಾಳಿ ನಡೆಸುತ್ತಿದೆ ನಾಚಿಕೆ ಬಿಟ್ಟ ಪಾಕ್ ಸೇನೆ.

ಇಮ್ರಾನ್ 8 ದಿನ ಕಂಬಿ ಹಿಂದೆ

ಅಂದಹಾಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನ 8 ದಿನಗಳ ಕಾಲ ಬಂಧನದಲ್ಲಿಡಬಹುದು ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ ನಿನ್ನೆ ಮಹತ್ವದ ತೀರ್ಪು ನೀಡಿತ್ತು. ಇಮ್ರಾನ್ ಅರೆಸ್ಟ್ ಆದ 1 ದಿನದ ಬಳಿಕ ಈ ತೀರ್ಪು ಹೊರಬಿದ್ದಿದೆ. ಹೀಗೆ ಇಮ್ರಾನ್ ಹೊರಗೆ ಬರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇಮ್ರಾನ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟು ಉಗ್ರರೂಪ ತಾಳುವ ಎಲ್ಲ ಮುನ್ಸೂಚನೆ ಸಿಗುತ್ತಿದೆ. ಇದು ಪಾಕಿಸ್ತಾನದ ಸಾಮಾನ್ಯ ಪ್ರಜೆಗಳ ನೆಮ್ಮದಿಗೆ ಬೆಂಕಿ ಇಟ್ಟಿದೆ.

ಒಟ್ನಲ್ಲಿ ಧಗಧಗ ಹೊತ್ತಿ ಉರಿಯುತ್ತಿರುವ ಪಾಕಿಸ್ತಾನದ ಪರಿಸ್ಥಿತಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಪಾಕಿಸ್ತಾನ ಸೇನೆ ಬೇರೆ ಕೈಕಟ್ಟಿ ಕೂರುವ ಸ್ಥಿತಿ ಬಂದಿದೆ. ಜನರ ಮೇಲೆ ಗುಂಡು ಹಾರಿಸುತ್ತಿದ್ರೂ ಪಾಕಿಸ್ತಾನಿ ಪ್ರಜೆಗಳು ಹೆದರುತ್ತಿಲ್ಲ. ಹೀಗಾಗಿ ಇಮ್ರಾನ್ ಬೆಂಬಲಿಗರು ರೊಚ್ಚಿಗೆದ್ದು ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಪ್ರತಿಭಟನೆ ನಿಯಂತ್ರಣಕ್ಕೆ ಇನ್ನಷ್ಟು ಉಗ್ರ ಕ್ರಮ ಕೈಗೊಳ್ಳಲು ಪಾಕ್ ಸೇನಾಧಿಕಾರಿಗಳು ಆದೇಶವನ್ನ ನೀಡಿದ್ದು, ಪಾಕ್ ರಕ್ತದಲ್ಲಿ ಸ್ನಾನ ಮಾಡುವುದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+