ಡಿಗ್ರಿ ವಿವಾದದಲ್ಲಿ ಸಿಲುಕಿದ ಇಮ್ರಾನ್ ಖಾನ್ ಪತ್ನಿ ರೆಹಂ ಖಾನ್

ಇಸ್ಲಾಮಾಬಾದ್, ಜುಲೈ, 16 : ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹಾಗೂ ಆಪ್ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಡಿಗ್ರಿ ಪ್ರಕರಣ ಮುಗಿಯುವ ಮುನ್ನವೇ ಇಂಥದ್ದೇ ಡಿಗ್ರಿ ವಿವಾದ ಇದೀಗ ಪಾಕಿಸ್ತಾನದಲ್ಲಿ ಹುಟ್ಟಿಕೊಂಡಿದೆ.

ಈ ವಿವಾದದಲ್ಲಿ ಸಿಲುಕಿದವರು ಮತ್ಯಾರೂ ಅಲ್ಲ...ಪಾಕಿಸ್ತಾನ ರಾಜಕಾರಣಿ ಮತ್ತು ಕ್ರಿಕೆಟಿಗನಾದ ಇಮ್ರಾನ್ ಖಾನ್ ಪತ್ನಿ ರೆಹಂ ಖಾನ್. ಈಕೆ ತನ್ನ ವಿದ್ಯಾಭ್ಯಾಸ ದ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.[ಸ್ಮೃತಿ ಇರಾನಿ ಡಿಗ್ರಿ ಪ್ರಕರಣ ವಿಚಾರಣೆ ಆ. 28ಕ್ಕೆ ಮುಂದೂಡಿಕೆ]

Imran Khan's wife Reham Khan under fire over

ರೆಹಂಖಾನ್ ಗ್ರಿಸ್ ಬಿಯಾ ಸಂಸ್ಥೆಯಲ್ಲಿ ಬ್ರಾಡ್ ಕಾಸ್ಟಿಂಗ್ ಮೀಡಿಯಾದಲ್ಲಿ ಡಿಪ್ಲೋಮ ಪದವಿ ಪೂರೈಸಿದ್ದಾರೆ. ಆದರೆ ಆಕೆ ಲಿನ್ಡ್ ಸೇ ಕಾಲೇಜಿನಲ್ಲಿ ಬ್ರಾಡ್ ಕಾಸ್ಟಿಂಗ್ ಪತ್ರಿಕೋದ್ಯಮ ಪದವಿ ಗಳಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಕಾಲೇಜಿನಲ್ಲಿ ಈ ಹೆಸರಿನ ಯಾವುದೇ ಕೋರ್ಸ್ ಇಲ್ಲ. ಕಾಲೇಜಿನ ವಿದ್ಯಾರ್ಥಿಗಳ ರಿಜಿಸ್ಟ್ರಾರ್ ಪುಸ್ತಕದಲ್ಲಿ ಆಕೆಯ ಹೆಸರಿಲ್ಲ ಎಂದು ಎಕ್ಸ್ ಪ್ರೆಸ್ ಟ್ರಿಬ್ಯುನ್ ಪತ್ರಿಕೆ ವರದಿ ಮಾಡಿದೆ.

ತನ್ನ ಪತ್ನಿಯ ವಿವಾದದ ಕುರಿತು ಇಮ್ರಾನ್ ಖಾನ್ ಮೌನ ವಹಿಸಿದ್ದು, ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಫ್ ನಾಯಕರು ಈ ಆರೋಪವನ್ನು ಅಲ್ಲಗಳೆದಿದ್ದಾರೆ ಹಾಗೂ ಇದೊಂದು ಅಪಪ್ರಚಾರ ಎಂದು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+