ಪಾಕಿಸ್ತಾನಕ್ಕೆ ಮುಗಿಯದ ತಲೆನೋವು, ಚುನಾವಣಾ ಆಯುಕ್ತರಿಗೆ ಕಂಟಕ?
ಪಾಕಿಸ್ತಾನ ಉದ್ಧಾರ ಆಗಲ್ಲ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ. ಅದರಲ್ಲೂ ತನ್ನ ದೇಶದಲ್ಲಿ ಒಂದು ಚುನಾವಣೆ ನೀಯತ್ತಾಗಿ ನಡೆಸಲು ಆಗದ ಈ ದೇಶ ಜಗತ್ತಿನಾದ್ಯಂತ ಭಾರಿ ಆಕ್ರೋಶ ಎದುರಿಸುತ್ತಿದೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಹೊಸ ಡಿಮ್ಯಾಂಡ್ ಮುಂದಿಟ್ಟಿದೆ.
ಹೌದು ಪಾಕಿಸ್ತಾನದಲ್ಲಿ ಕೆಲ ತಿಂಗಳ ಹಿಂದಷ್ಟೇ ಸಂಸತ್ ಚುನಾವಣೆ ನಡೆಸಲಾಗಿತ್ತು. ಆದರೆ ಈ ಚುನಾವಣೆ ವಿವಾದದ ಗೂಡಾಗಿದ್ದು, ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬುದು ಇಮ್ರಾನ್ ಖಾನ್ ಪಕ್ಷದ ಆರೋಪವಾಗಿದೆ. ಹೀಗಿದ್ದಾಗ ಚುನಾವಣಾ ಅಕ್ರಮ ಆರೋಪಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ತಕ್ಷಣ ರಾಜೀನಾಮೆ ನೀಡಬೇಕಾಗಿದೆ ಎಂಬ ಬೇಡಿಕೆ ಇಟ್ಟಿದೆ, ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐ. ಈ ಮೂಲಕ ತಣ್ಣಗಾಗಿದ್ದ ಪಾಕಿಸ್ತಾನ ಚುನಾವಣಾ ಅಕ್ರಮ ವಿಚಾರ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ.

ಪಾಕಿಸ್ತಾನದಲ್ಲಿ ಮತ್ತೆ ಹಿಂಸಾಚಾರ?
ಮುಕ್ತ & ನ್ಯಾಯಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಹೊಣೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು ನ್ಯಾಯಯುತ ಚುನಾವಣೆ ನಡೆಸಬೇಕಿತ್ತು. ಆದರೆ ಪಾಕಿಸ್ತಾನದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಇಮ್ರಾನ್ ಪಕ್ಷದ ಸಂಸದರು ಆರೋಪ ಮಾಡಿದ್ದಾರೆ. ಇದೇ ವಿಚಾರ ಮತ್ತೊಮ್ಮೆ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಲೇಳುವಂತೆ ಮಾಡುತ್ತಾ? ಎಂಬ ಆತಂಕ ಹುಟ್ಟುಹಾಕಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಮುಖಂಡರು ಹಾಗೂ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಈ ಬಗ್ಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. 2024ರ ಫೆಬ್ರವರಿ ತಿಂಗಳಲ್ಲಿ ಬೃಹತ್ ಹೋರಾಟ ನಡೆಸಿದ್ದರು. 265 ಸದಸ್ಯ ಬಲದ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಟಿಐ ಪಕ್ಷವು 93 ಸ್ಥಾನದಲ್ಲಿ ಜಯ ಸಾಧಿಸಿದೆ. ಭಾರತದ ಮಾದರಿ, ಪಾಕ್ ಕೂಡ ಚುನಾವಣೆ ಎದುರಿಸುತ್ತದೆ.












Click it and Unblock the Notifications