ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭಕ್ಕೆ ಮೋದಿಗೆ ಆಹ್ವಾನ ಸಾಧ್ಯತೆ
ಲಾಹೋರ್, ಜುಲೈ 31: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಹಿಡಿಯಲಿರುವ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ.
ಮೋದಿ ಸೇರಿದಂತೆ ಸಾರ್ಕ್ ಸದಸ್ಯ ದೇಶಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಲು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಉದ್ದೇಶಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಎಲ್ಲ ಮುಖಂಡರನ್ನು ಆಹ್ವಾನಿಸಲು ಪಕ್ಷದ ಕೋರ್ ಕಮಿಟಿಯು ಪರಿಗಣಿಸುತ್ತಿದೆ. ಅದರ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರಿಗೆ ಮೋದಿ ಅವರು ಕರೆ ಮಾಡಿ ಅಭಿನಂದಿಸಿರುವುದು ಉಭಯ ದೇಶಗಳ ಬಾಂಧವ್ಯದ ಹೊಸ ಅಧ್ಯಾಯ ಬರೆಯುವ ಸೂಚನೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಜುಲೈ 25ರಂದು ನಡೆದು ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇತರೆ ಪಕ್ಷಗಳ ಸಹಾಯದಿಂದ ಇಮ್ರಾನ್ ಖಾನ್ ಸರ್ಕಾರ ರಚಿಸಲಿದ್ದು, ಆಗಸ್ಟ್ 11ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.












Click it and Unblock the Notifications