ಭಾರತದ ಕ್ರಿಕೆಟರ್‌ಗಳು, ಅಮೀರ್ ಖಾನ್‌ಗೆ ಇಮ್ರಾನ್ ಖಾನ್ ಆಹ್ವಾನ

Recommended Video

      ಭಾರತದ ಕ್ರಿಕೆಟರ್‌ಗಳು, ಅಮೀರ್ ಖಾನ್‌ಗೆ ಇಮ್ರಾನ್ ಖಾನ್ ಆಹ್ವಾನ | Oneindia kannada

      ಇಸ್ಲಾಮಾಬಾದ್, ಆಗಸ್ಟ್ 1: ಪ್ರಧಾನಿಯಾಗಿ ಅಧಿಕಾರ ಹಿಡಿಯಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟರ್‌ಗಳಾದ ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿಧು ಹಾಗೂ ನಟ ಅಮೀರ್ ಖಾನ್ ಅವರಿಗೆ ಆಹ್ವಾನ ನೀಡಿದ್ದಾರೆ.

      ಆಗಸ್ಟ್ 11ರಂದು ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಗವಾಸ್ಕರ್, ಸಿಧು ಹಾಗೂ ಅಮೀರ್ ಖಾನ್ ಅದರಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

      ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ವಿವಿಧ ದೇಶಗಳ ನಾಯಕರನ್ನು ಕೂಡ ಸಮಾರಂಭಕ್ಕೆ ಆಹ್ವಾನಿಸುವುದರ ಕುರಿತು ವಿದೇಶಾಂಗ ಕಚೇರಿಗೆ ಮಾಹಿತಿ ನೀಡಲಾಗಿದೆ.

      imran khan invites gavaskar sidhu aamir khan oath taking for ceremony

      ವಿದೇಶಾಂಗ ಕಚೇರಿಯ ಅಭಿಪ್ರಾಯಕ್ಕೆ ಕಾದಿರುವುದಾಗಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ವಕ್ತಾರ ಫವಾದ್ ಚೌಧರಿ ತಿಳಿಸಿದ್ದಾರೆ.

      ಜುಲೈ 25ರಂದು ನಡೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು 115 ಸೀಟುಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ತಿಳಿಸಿದೆ.

      272 ಸೀಟುಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 270 ಸೀಟುಗಳ ಫಲಿತಾಂಶ ಹೊರಬಂದಿದೆ. ಉಳಿದ ಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಲು ಇಮ್ರಾನ್ ಖಾನ್ ಮುಂದಾಗಿದ್ದಾರೆ.

      ಇಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 172. ಈಗಾಗಲೇ 117 ಸ್ಥಾನಗಳಲ್ಲಿ ಜಯಗಳಿಸಿರುವ ಪಿಟಿಐ ಸರ್ಕಾರ ರಚಿಸುವುದು ಬಹುತೇಕ ಖಚಿತ.

      ಈ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳ ಬಗ್ಗೆ ಇಮ್ರಾನ್ ಖಾನ್ ಪರಾಮರ್ಶಿಸುತ್ತಿದ್ದಾರೆ. ಪಿಪಿಪಿ 43 ಹಾಗೂ ಪಿಎಂಎಲ್ ಎನ್ 63 ಸ್ಥಾನಗಳು ಹಾಗೂ ಇತರೆ 47 ಸ್ಥಾನಗಳನ್ನು ಗೆದ್ದಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+