ಪಾಕಿಸ್ತಾನ ಮಾಜಿ ಪ್ರಧಾನಿ 8 ದಿನಗಳ ಕಾಲ ಕಸ್ಟಡಿಗೆ!

ಇಸ್ಲಾಮಾಬಾದ್: ಪಾಕಿಸ್ತಾನ ಆಳಿದ ಮಾಜಿ ಪ್ರಧಾನಿಗಳು ಒಬ್ಬೊಬ್ಬರಾಗಿ ಜೈಲು ಸೇರೋದು ಟ್ರೆಂಡ್ ಆಗಿದೆ. ಈಗ ಇಮ್ರಾನ್ ಖಾನ್ ಕೂಡ ಅದೇ ಪಟ್ಟಿಗೆ ಸೇರಿದ್ದು, ಇಮ್ರಾನ್‌ಗೆ ದೊಡ್ಡ ಶಾಕ್ ನೀಡಿದೆ ಇಸ್ಲಾಮಾಬಾದ್ ಹೈಕೋರ್ಟ್. ಬಂಧನ ಪ್ರಶ್ನಿಸಿ ಹೂಡಿದ್ದ ಅರ್ಜಿ ವಿಚಾರಣೆ ವೇಳೆ ಇಮ್ರಾನ್ ವಿರುದ್ಧ ತೀರ್ಪು ನೀಡಲಾಗಿದೆ. ಈ ಮೂಲಕ ಪಾಕ್‌ನ ಮಾಜಿ ಪಿಎಂಗೆ ಜೈಲೂಟ ಗ್ಯಾರಂಟಿ ಆಗಿದೆ.

ಹೌದು, ನಿನ್ನೆ ವಿಚಾರಣೆಗೆ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಇಡೀ ಪಾಕಿಸ್ತಾನದ ನೆಮ್ಮದಿಯನ್ನೇ ಕೆಡಿಸಿ ಹಾಕಿದೆ. ಅದರಲ್ಲೂ ಇಮ್ರಾನ್ ಬಂಧಿಸಿದ್ದ ರೀತಿ ಫ್ಯಾನ್ಸ್ ರೊಚ್ಚಿಗೆಬ್ಬಿಸಿದೆ. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ಜೈಲಿನಲ್ಲಿ ಇಮ್ರಾನ್‌ಗೆ ತಟ್ಟೆ-ಲೋಟ ರೆಡಿಯಾಗಿದೆ.

Imran Khan handed over to NAB for 8 days by Islamabad high court

ಇಮ್ರಾನ್ 8 ದಿನ ಕಸ್ಟಡಿಗೆ!

ಅಂದಹಾಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನ 8 ದಿನಗಳ ಕಾಲ ಬಂಧನದಲ್ಲಿಡಬಹುದು ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಅರೆಸ್ಟ್ ಆದ 1 ದಿನದ ನಂತರ ತೀರ್ಪು ಹೊರಬಿದ್ದಿದೆ. ಈ ಮೂಲಕ ಇಮ್ರಾನ್ ಹೊರಗೆ ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದ್ಕಡೆ ಇಮ್ರಾನ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟು ಉಗ್ರರೂಪ ತಾಳುವ ಎಲ್ಲ ಮುನ್ಸೂಚನೆ ಸಿಗುತ್ತಿದೆ. ಇದು ಪಾಕಿಸ್ತಾನದ ಸಾಮಾನ್ಯ ಪ್ರಜೆಗಳ ನೆಮ್ಮದಿಗೆ ಬೆಂಕಿ ಇಟ್ಟಿದೆ.

ಏನಿದು ಇಮ್ರಾನ್ ವಿರುದ್ಧದ ಕೇಸ್?

ಅಷ್ಟಕ್ಕೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಖಾನ್ ಬೆಂಬಲಿಗರು ಹೇಳುತ್ತಿರುವ ವಿಚಾರವೇ ಬೇರೆ.

ಇಮ್ರಾನ್ ಜೀವಕ್ಕೆ ಅಪಾಯ?

ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಅವರ ಅಭಿಮಾನಿಗಳು ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ.

Imran Khan handed over to NAB for 8 days by Islamabad high court

ಪ್ರಜೆಗಳ ಮೇಲೆ ಗುಂಡಿನ ದಾಳಿ

ಇಮ್ರಾನ್ ಖಾನ್ ಕ್ರಿಕೆಟ್ ಆಡುವಾಗ ಎಷ್ಟು ಫೇಮಸ್ ಆಗಿದ್ರೋ, ಈಗಲೂ ಅಷ್ಟೇ ಬೆಂಬಲಿಗರು ಮತ್ತು ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಇಮ್ರಾನ್ ಅರೆಸ್ಟ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಕಾಡ್ಗಿಚ್ಚು ಧಗ ಧಗಿಸುತ್ತಿದೆ. ಆದರೆ ಇದನ್ನ ಕಂಟ್ರೋಲ್ ಮಾಡಲು ಪಾಕ್ ಸೇನೆ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಅಮಾಯಕ ಜನರ ಮೇಲೂ ಗುಂಡು ಹಾರಿಸುತ್ತಾ, ಪ್ರತಿಭಟನೆ ಕಂಟ್ರೋಲ್ ಮಾಡಲು ಉಗ್ರ ದಾರಿ ಕಂಡುಕೊಂಡಿದೆ. ಪಾಕ್ ಸೇನೆ ಹಾರಿಸಿದ ಗುಂಡಿಗೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಕೊಲೆ ಆರೋಪವೇ ಮುಳುವಾಯ್ತಾ?

ಪಾಕಿಸ್ತಾನ ಅಂದ್ರೆ ಅಲ್ಲಿ ಜೀವಕ್ಕೆ ಬೆಲೆ ಇಲ್ಲ. ಅದರಲ್ಲೂ ಸತ್ಯ ಮಾತನಾಡುವ ರಾಜಕಾರಣಿ, ಪತ್ರಕರ್ತರನ್ನ ಹೆಣ ಮಾಡದೆ ಬಿಡುವುದಿಲ್ಲ ಅಲ್ಲಿನ ವ್ಯವಸ್ಥೆ. ಹೀಗೆ ಪತ್ರಕರ್ತನೊಬ್ಬನ ಹತ್ಯೆ ಸಂಬಂಧ ಇಮ್ರಾನ್ ಖಾನ್ ISI ವಿರುದ್ಧ ಗಂಭೀರ ಆರೋಪ ಮಾಡಿದ್ರು. ಇಮ್ರಾನ್ ಖಾನ್ ಆರೋಪ ಮಾಡುತ್ತಿದ್ದಂತೆ ಐಎಸ್‌ಐ ಜೊತೆ ಪಾಕಿಸ್ತಾನ ಮಿಲಿಟರಿ ಕೂಡ ರೊಚ್ಚಿಗೆದ್ದು ಮೈಕೊಡವಿ ನಿಂತಿತ್ತು. ಅದರ ಪರಿಣಾಮವನ್ನ ಈಗ ಇಮ್ರಾನ್ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಐಎಸ್‌ಐ ತೋಡಿದ ಬಲೆಗೆ ಬಿದ್ದು ಇಮ್ರಾನ್ ಅಂದರ್ ಆಗಿದ್ದಾರೆಂದು ಪಾಕಿಸ್ತಾನದ ಜನ ಆರೋಪಿಸುತ್ತಿದ್ದಾರೆ.

ಒಟ್ನಲ್ಲಿ ಏನೇ ಆರೋಪ ಪ್ರತ್ಯಾರೋಪ ಇದ್ರೂ ಇಮ್ರಾನ್ ಖಾನ್ ಕಂಬಿ ಎಣಿಸುತ್ತಿರುವುದು ವಾಸ್ತವ ಸಂಗತಿ. ಇದರ ಜೊತೆಗೆ ಇಮ್ರಾನ್ ಬೆಂಬಲಿಗರು ಮತ್ತಷ್ಟು ಪ್ರದೇಶದಲ್ಲಿ ಗಲಾಟೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಸೇನೆ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿದ್ದು, ಸಾವಿರಾರು ಇಮ್ರಾನ್ ಬೆಂಬಲಿಗರಿಗೂ ಜೈಲೂಟ ಫಿಕ್ಸ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+