ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ 'ಕೊಲೆ ಯತ್ನ' ಪ್ರಕರಣ

|
Google Oneindia Kannada News

ಇಸ್ಲಾಮಾಬಾದ್‌, ಅ.23: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ "ಕೊಲೆ ಯತ್ನ" ಪ್ರಕರಣವನ್ನು ದಾಖಲಿಸಲಾಗಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಮೊಹ್ಸಿನ್ ಶಾನವಾಜ್ ರಂಝಾ ಅವರು ಶನಿವಾರ ಇಸ್ಲಾಮಾಬಾದ್‌ನ ಸೆಕ್ರೆಟರಿಯೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಗೊರೆ ಮಾರಾಟ: ಇಮ್ರಾನ್‌ ಅನರ್ಹಗೊಳಸಿದ ಪಾಕಿಸ್ತಾನ ಚುನಾವಣಾ ಆಯೋಗಉಡುಗೊರೆ ಮಾರಾಟ: ಇಮ್ರಾನ್‌ ಅನರ್ಹಗೊಳಸಿದ ಪಾಕಿಸ್ತಾನ ಚುನಾವಣಾ ಆಯೋಗ

ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ಕಟ್ಟಡದ ಮುಂದೆ ಮೊಹ್ಸಿನ್ ಶಾನವಾಜ್ ರಾಂಝಾ ಅವರ ಮೇಲೆ ಪಿಟಿಐ ಬೆಂಬಲಿಗರು ಹಲ್ಲೆ ನಡೆಸಿದ ಒಂದು ದಿನದ ನಂತರ ದೂರು ದಾಖಲಾಗಿದೆ.

ಮೊಹ್ಸಿನ್ ಶಾನವಾಜ್ ರಾಂಝಾ ಅವರು ಆಯೋಗದ ಮುಂದೆ ತೋಷಖಾನಾ ಪ್ರಕರಣದಲ್ಲಿ ದೂರುದಾರರಾಗಿ ಹಾಜರಾದಾಗ, ಅವರು ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಿಕೊಂಡಿದ್ದಾರೆ. ಎಫ್‌ಐಆರ್ ಪ್ರಕಾರ, ರಾಂಜಾ ಅವರು ಪಾಕಿಸ್ತಾನದ ಚುನಾವಣಾ ಆಯೋಗ ತೊರೆದಾಗ ಪಿಟಿಐ ನಾಯಕತ್ವದ ಆದೇಶದ ಮೇರೆಗೆ ಕೊಲೆಯ ಉದ್ದೇಶದಿಂದ ಹಲ್ಲೆ ನಡೆಸಲಾಗಿದೆ. ಹೀಗಾಗಿಯೇ ತನ್ನ ಕಾರಿನ ಗಾಜು ಒಡೆಯಲು ಪ್ರಯತ್ನಿಸಲಾಯಿತು ಎಂದು ದೂರಿದ್ದಾರೆ.

ತೋಷಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅನರ್ಹ!

ತೋಷಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅನರ್ಹ!

ತೋಷಖಾನಾ ಪ್ರಕರಣದ ತೀರ್ಪನ್ನು ಆಡಳಿತಾರೂಢ ಒಕ್ಕೂಟವು ಶ್ಲಾಘಿಸಿದರೂ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ತಮ್ಮ ಕಡೆಗೆ ತೀರ್ಪು ಬರುವ ನಿರೀಕ್ಷೆಯಿದೆ ಎಂದು ಪಕ್ಷ ತಿಳಿಸಿದೆ.

ಘಟನೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಪಾಕಿಸ್ತಾನದ ಚುನಾವಣಾ ಆಯೋಗ ನ್ಯಾಯವನ್ನು ನೀಡಿದೆ. ಕಾನೂನಿನ ಮೇಲೆ ತಮ್ಮ ಇಚ್ಛೆಯನ್ನು ಹೇರದಂತೆ ಪಿಟಿಐ ನಾಯಕರು ಮತ್ತು ಸದಸ್ಯರಿಗೆ ಚಾಟಿ ಬೀಸಿದೆ ಎಂದು ಹೇಳಿದ್ದಾರೆ.

ಸಂವಿಧಾನದ ವಿಧಿಯ ಉಲ್ಲಂಘನೆ ಎಂದ ಇಮ್ರಾನ್ ಖಾನ್!

ಸಂವಿಧಾನದ ವಿಧಿಯ ಉಲ್ಲಂಘನೆ ಎಂದ ಇಮ್ರಾನ್ ಖಾನ್!

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥರು ಶನಿವಾರ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತೋಷಖಾನಾ ಪ್ರಕರಣದಲ್ಲಿ ತನ್ನನ್ನು ಅನರ್ಹಗೊಳಿಸುವ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ನಿರ್ಧಾರವನ್ನು ಇಮ್ರಾನ್ ಖಾನ್ ಮೇಲ್ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್, ಚುನಾವಣಾ ಆಯೋಗದ ಆದೇಶವನ್ನು ಸಂವಿಧಾನದ ಸ್ಥಾಪಿತ ಕಾನೂನು ಮಾನದಂಡಗಳ 63 ನೇ ವಿಧಿಯ ಉಲ್ಲಂಘನೆಯಾಗಿದೆ ಆರೋಪಿಸಿದ್ದಾರೆ. ಆದೇಶವನ್ನು ತಡೆಹಿಡಿಯಬೇಕು ಮತ್ತು ಅರ್ಜಿಯ ಅಂತಿಮ ನಿರ್ಣಯದವರೆಗೆ ಮುಂದಿನ ಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.

ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಪ್ರಕರಣ!

ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಪ್ರಕರಣ!

ಶುಕ್ರವಾರ ತೋಷಖಾನಾ ಪ್ರಕರಣದಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿದ ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ), ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸೇವೆ ಸಲ್ಲಿಸಲು ಅನರ್ಹರು ಎಂದು ಘೋಷಿಸಿದೆ.

ಇಮ್ರಾನ್ ಖಾನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಅಸಾದ್ ಉಮರ್ ಮತ್ತು ಪಕ್ಷದ ಇತರ 100 ಸದಸ್ಯರ ವಿರುದ್ಧ ಈ ಹಿಂದೆ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರವನ್ನು ನಡೆಸಿದಕ್ಕಾಗಿ ಎರಡು ಭಯೋತ್ಪಾದನೆ ಸಂಬಂಧಿತ ಆರೋಪಗಳನ್ನು ಹೊರಿಸಲಾಗಿದೆ.

ಪ್ರಧಾನಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದ್ ಇಮ್ರಾನ್!

ಪ್ರಧಾನಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದ್ ಇಮ್ರಾನ್!

ವಿದೇಶಿ ಗಣ್ಯರು ಮತ್ತು ರಾಷ್ಟ್ರಗಳ ಮುಖ್ಯಸ್ಥರಿಂದ ಅಕ್ರಮವಾಗಿ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಇಮ್ರಾನ್ ಖಾನ್ ತಪ್ಪಿತಸ್ಥರೆಂದು ಪಾಕಿಸ್ತಾನಿ ಚುನಾವಣಾ ಆಯೋಗವು ಘೋಷಿಸಿದೆ. ಶುಕ್ರವಾರದಿಂದ ಸಾರ್ವಜನಿಕ ಕಚೇರಿಯನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಇಮ್ರಾನ್ ಖಾನ್ ಅವರು 2018-2022 ರ ಪ್ರಧಾನ ಮಂತ್ರಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು, ವಿದೇಶಿ ಪ್ರವಾಸಗಳ ಸಮಯದಲ್ಲಿ ಸರ್ಕಾರಕ್ಕೆ ನೀಡಲಾದ ಉಡುಗೊರೆಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಧಿಕಾರ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ 140 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗಿಂತ ಹೆಚ್ಚು (6,35,000 ಡಾಲರ್) ವೆಚ್ಚ ಮಾಡಲಾಗಿತ್ತು.

English summary
Attempted murder case registered against former pakistan prime minister Imran Khan. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X