ಚೀನಾ ವೈರಸ್ ವುಹಾನ್ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್
ವಾಷಿಂಗ್ಟನ್, ಜೂ. 04: ಕೊರೊನಾ ಸೋಂಕು ವಿಶ್ವದಾದ್ಯಂತ ಹರಡಿದ ಬೆನ್ನಲ್ಲೇ ಕೋವಿಡ್-19 ಹರಡಲು ಚೀನಾವೇ ಕಾರಣ, ಅದು ಚೀನಾದ ಲ್ಯಾಬ್‌ನಿಂದಲೇ ಹುಟ್ಟಿದೆ ಎಂದು ಹೇಳುತ್ತಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ, ತಾನು ಹೇಳಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ.
Recommended Video
'"ಈಗ ಎಲ್ಲರೂ, ಶತ್ರು ಎಂದು ಕರೆಯಲ್ಪಡುವವರೂ ಸಹ, ಅಧ್ಯಕ್ಷ ಟ್ರಂಪ್ ವುಹಾನ್ ಲ್ಯಾಬ್‌ನಿಂದ ಚೀನಾದ ವೈರಸ್ ಬಂದಿದೆ ಎಂದು ಹೇಳಿದ್ದು ಸರಿಯಾಗಿದೆ. ಅಧ್ಯಕ್ಷರು ಸರಿಯಾಗಿಯೇ ಹೇಳಿದ್ದರು ಎಂದು ಹೇಳಲು ಆರಂಭಿಸಿದ್ದಾರೆ" ಟ್ರಂಪ್ ಎಂದಿದ್ದಾರೆ.
ಚೀನಾದ ಸೂಕ್ಷ್ಮ ರೋಗಾಣುಗಳ ಪ್ರಯೋಗಾಲಯದಿಂದ ರಹಸ್ಯವಾಗಿ ಕೊವಿಡ್-19 ಸೋರಿಕೆಯಾಗಿದೆ ಎಂಬ ಆರೋಪ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೊರೊನಾವೈರಸ್ ಸೋಂಕಿನ ಮೂಲವನ್ನು ಪತ್ತೆ ಮಾಡುವುದಕ್ಕೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಚೀನಾದ ಪ್ರಯೋಗಾಲಯಗಳಿಂದಲೇ ಕೊರೊನಾ ವೈರಾಣು ಸೋರಿಕೆಯಾಗಿದೆ ಎಂದು ಬ್ರಿಟನ್ ಗುಪ್ತಚರ ಇಲಾಖೆ ಕೂಡಾ ಹೇಳಿದೆ.

ಈ ಹಿನ್ನೆಲೆ ಕೋವಿಡ್ ವಿಚಾರದಲ್ಲಿ ಚೀನಾದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿರುವ ಟ್ರಂಪ್, "ಲ್ಯಾಬ್ ಸೋರಿಕೆಯಿಂದಾಗಿ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡಿ ಉಂಟಾದ ವಿನಾಶಕ್ಕೆ ಕಾರಣವಾದ ಚೀನಾಕ್ಕೆ ಭಾರಿ ದಂಡ ವಿಧಿಸಬೇಕು. ಚೀನಾ ಉಂಟು ಮಾಡಿದ ಸಾವು ಮತ್ತು ವಿನಾಶಕ್ಕೆ ಅಮೆರಿಕಕ್ಕೆ ಮತ್ತು ಜಗತ್ತಿಗೆ 10 ಟ್ರಿಲಿಯನ್ ಯುಎಸ್‌ಡಿ ಪಾವತಿಸಬೇಕು" ಎಂದು ಆಗ್ರಹಿಸಿದ್ದಾರೆ.
ಯುಎಸ್‌ನಲ್ಲಿ ಕೋವಿಡ್ ಏಕಾಏಕಿ ಪ್ರಾರಂಭದ ದಿನಗಳ ಬಗ್ಗೆ ಇಮೇಲ್‌ಗಳು ಬಹಿರಂಗಗೊಂಡಿವೆ. ಯುಎಸ್ ಉನ್ನತ ಕೊರೊನಾವೈರಸ್ ಸಲಹೆಗಾರರಾದ ಡಾ. ಆಂಥೋನಿ ಫೌಸಿ ಮತ್ತು ಸಹೋದ್ಯೋಗಿಗಳು ಆರಂಭಿಕ ದಿನಗಳಲ್ಲಿ, ಕೋವಿಡ್-19 ಚೀನಾದ ವುಹಾನ್‌ನಲ್ಲಿನ ಪ್ರಯೋಗಾಲಯದಿಂದ ಸೋರಿಕೆಯಾಗಿರಬಹುದು ಎಂದು ಉಲ್ಲೇಖವಾಗಿದೆ.

ವಾಷಿಂಗ್ಟನ್ ಪೋಸ್ಟ್, ಬಝ್‌ಫೀಡ್ ನ್ಯೂಸ್ ಮತ್ತು ಸಿಎನ್ಎನ್ 2020 ರ ಜನವರಿ ನಿಂದ ಜೂನ್ 2020 ರವರೆಗಿನ ಮಾಹಿತಿ ಸ್ವಾತಂತ್ರ್ಯ ಕಾಯ್ದೆ (ಎಫ್‌ಒಐಎ) ಪ್ರಕಾರ 3,000 ಪುಟಗಳ ಇಮೇಲ್‌ಗಳನ್ನು ಪಡೆದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯರೊಬ್ಬರು, "ವುಹಾನ್ ಪ್ರಯೋಗಾಲಯವು ವೈರಸ್ ಅನ್ನು ಬಿಡುಗಡೆ ಮಾಡಿರುವುದು ಅಸಂಭವ. ಇನ್ನು ಹೆಚ್ಚಿನ ಇಮೇಲ್‌ನಲ್ಲಿ ಏನಿದೆ ಎಂದು ನನಗೆ ನೆನಪಿಲ್ಲ. ಆದರೆ ಚೀನೀಯರು ಉದ್ದೇಶಪೂರ್ವಕವಾಗಿ ಏನೋ ಒಂದನ್ನು ಅಭಿವೃದ್ದಿ ಮಾಡಿದ್ದಾರೆ. ಅದು ಸೋರಿಕೆಯಾಗಿ ಚೀನೀಯರನ್ನು ಸೇರಿದ್ದಂತೆ ವಿಶ್ವದ ಜನರ ಪ್ರಾಣ ಹಾನಿಗೆ ಕಾರಣವಾಗಿದೆ" ಎಂದು ತಿಳಿಸಿದ್ದಾರೆ.
"ಆದರೆ ಚೀನಾದ ಲ್ಯಾಬ್‌ನಿಂದಲೇ ಈ ವೈರಸ್ ಹೊರಬಂದಿದೆ ಎಂದು ಹೇಳಲು ಯಾವುದೇ ಪುರಾವೆಗಳು ಇಲ್ಲ" ಎಂದು ಕೂಡಾ ಈ ವೇಳೆಯೇ ವೈದ್ಯರು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications