Hurricane Milton: ಎಲ್ಲಿ ಹೋಗಬೇಕು, ಹೇಗೆ ಜೀವ ಉಳಿಸಿಕೊಳ್ಳಬೇಕು ಅಂತಾ ಪರದಾಡುತ್ತಿರುವ ಅಮೆರಿಕನ್ನರು!
ಅಮೆರಿಕದ ಜನರ ನೆಮ್ಮದಿ ಕಸಿಕೊಂಡಿರುವ 'ಮಿಲ್ಟನ್' ಮಹಾ ಚಂಡಮಾರುತ ಇದೀಗ, ಸಾವಿನ ರೂಪ ಪ್ರದರ್ಶನ ಮಾಡುತ್ತಿದೆ. ಫ್ಲೊರಿಡಾ ಕರಾವಳಿಗೆ ಅಪ್ಪಳಿಸಲು ಓಡೋಡಿ ಬರ್ತಾ ಇರುವ 'ಮಿಲ್ಟನ್' ಮಹಾ ಚಂಡಮಾರುತ ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಹೀಗೆ ಇದೀಗ ಅಮೆರಿಕದ ದಕ್ಷಿಣ ಭಾಗದಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈಮೀರಿ ಹೋಗುತ್ತಿದ್ದು, ಜನಗಳು ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಎಲ್ಲಿ ಹೋಗಬೇಕು?? ಹೇಗೆ ಜೀವ ಉಳಿಸಿಕೊಳ್ಳಬೇಕು ಅಂತಾ?? ಅಂತಾ ಜನರು ಇದೀಗ ಉತ್ತರ ತಿಳಿಯದೆ ನರಳುತ್ತಿದ್ದಾರೆ.
ಅಮೆರಿಕದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣೆ ಅಬ್ಬರ ಜೋರಾಗಿದೆ. ಇದೇ ಸಮಯದಲ್ಲೇ, ಚಂಡಮಾರುತ ಸೇರಿದಂತೆ ಪಾಕೃತಿಕ ವಿಕೋಪಗಳು ಕೂಡ ಅಬ್ಬರ ತೋರಿಸುತ್ತಿವೆ. ಕಳೆದ ತಿಂಗಳು ಫ್ಲೊರಿಡಾ ರಾಜ್ಯದಲ್ಲಿ ಒಂದು ಚಂಡಮಾರುತ ಅಪ್ಪಳಿಸಿತ್ತು, ಈ ವಿನಾಶದಿಂದಲೇ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೊಂದು ಚಂಡಮಾರುತ ಕೂಡ ಇದೀಗ ಫ್ಲೊರಿಡಾ ರಾಜ್ಯದ ಕರಾವಳಿಗೆ ಅಪ್ಪಳಿಸಲು ಸಜ್ಜಾಗಿದೆ. ಇದೀಗ ಫ್ಲೊರಿಡಾದ ವಾತಾವರಣ ಕಂಡು ಅಲ್ಲಿನ ಜನರು ಏನು ಮಾಡುತ್ತಿದ್ದಾರೆ ಗೊತ್ತಾ? ಮುಂದೆ ಓದಿ.

ಮನೆ ಬಿಟ್ಟು, ಓಡಿ ಹೋಗುತ್ತಿರುವ...
ಅಮೆರಿಕದ ಸರ್ಕಾರ ಹಾಗೂ ಫ್ಲೊರಿಡಾ ರಾಜ್ಯದ ಆಡಳಿತ ಈಗಾಗಲೇ ಅಮೆರಿಕದ ಜನರಿಗೆ, ಅದರಲ್ಲೂ ಪ್ರಮುಖವಾಗಿ ಫ್ಲೊರಿಡಾದ ಮಧ್ಯ ಭಾಗದಲ್ಲಿ ವಾಸ ಇರುವವರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದೆ. ಅದು ಏನೆಂದರೆ 'ಮಿಲ್ಟನ್' ಮಹಾ ಚಂಡಮಾರುತ ಅಪ್ಪಳಿಸುವ, ಅತ್ಯಂತ ಸೂಕ್ಷ್ಮ ಪ್ರದೇಶದಿಂದ ಜಾಗ ಖಾಲಿ ಮಾಡಿ ಎಂದು ಸೂಚಿಸಲಾಗಿದೆ. ಹೀಗಾಗಿಯೇ ಫ್ಲೊರಿಡಾ ರಾಜ್ಯದ ಕರಾವಳಿ ಭಾಗದ ಜನರು ಹಾಗೂ ಫ್ಲೊರಿಡಾ ರಾಜ್ಯದ ಮಧ್ಯ ಭಾಗದಲ್ಲಿ ಜೀವನ ಕಟ್ಟಿಕೊಂಡಿದ್ದ ಜನರು ಎದ್ದು ಬಿದ್ದು ಮನೆ ಖಾಲಿ ಮಾಡಿಕೊಂಡು ಓಡುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಫ್ಲೊರಿಡಾ ರಾಜ್ಯದಲ್ಲಿ ಭೀಕರ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಮತ್ತೆ.. ಮತ್ತೆ.. ಜನರಿಗೆ ಸಮಸ್ಯೆ..
ಒಂದು ತಿಂಗಳ ಹಿಂದಷ್ಟೇ, ಅಮೆರಿಕದ ಫ್ಲೊರಿಡಾ ರಾಜ್ಯದಲ್ಲಿ ದೊಡ್ಡ ಚಂಡಮಾರುತವೇ ಅಪ್ಪಳಿಸಿತ್ತು. ಸೆಪ್ಟೆಂಬರ್ 26 ರಂದು ಅಮೆರಿಕದ ಫ್ಲೊರಿಡಾ ರಾಜ್ಯದ ಕರಾವಳಿಗೆ ಈ ರೀತಿಯ ಸೈಕ್ಲೋನ್ ಅಪ್ಪಳಿಸಿತ್ತು. ಬಿಗ್ ಬೆಂಡ್ ಪ್ರದೇಶಕ್ಕೆ ಅಪ್ಪಳಿಸಿದ್ದ 'ಹೆಲೆನ್' ಚಂಡಮಾರುತ 200 ಜನರ ಜೀವ ತೆಗೆದಿತ್ತು. ಆದರೆ ಇದಕ್ಕಿಂತಲೂ ಭಯಾನಕ ಸಂಗತಿ ಇದೀಗ ಹೊರ ಬಿದ್ದಿದೆ. ಅದು ಏನು ಅಂದ್ರೆ ಕಳೆದ ತಿಂಗಳು ಅಪ್ಪಳಿಸಿದ್ದ 'ಹೆಲೆನ್' ಚಂಡಮಾರುತ ಸುಮಾರು 140 ಕಿಲೋ ಮೀಟರ್ ವೇಗದಲ್ಲಿ ಇತ್ತು. ಆದರೆ ಇದೀಗ ಅಪ್ಪಳಿಸುತ್ತಿರುವ 'ಮಿಲ್ಟನ್' ಸೈಕ್ಲೋನ್ ಬರೋಬ್ಬರಿ 250 ಕಿಲೋ ಮೀಟರ್ ವೇಗದಲ್ಲಿ ಫ್ಲೊರಿಡಾ ಕರಾವಳಿಗೆ ಅಪ್ಪಳಿಸುವ ಭಯವು ಕಾಡುತ್ತಿದೆ.












Click it and Unblock the Notifications