ಪಾಪಿ ಪಾಕಿಸ್ತಾನ ಪಲ್ಟಿ, ಮೈತ್ರಿ ಸರ್ಕಾರ ಗ್ಯಾರಂಟಿ!
ಭಾರತದ ಜೊತೆಗೆ ಚೆನ್ನಾಗಿ ಇದ್ದಿದ್ದರೆ ಪಾಕಿಸ್ತಾನ ಕೂಡ ಇಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಬಹುದಿತ್ತು. ಈ ಮೂಲಕ ಆರ್ಥಿಕವಾಗಿ ಕೂಡ ಪ್ರಬಲವಾಗಿ, ತನ್ನ ದೇಶದ ಪ್ರಜೆಗಳ ಬದುಕನ್ನು ಕೂಡ ಶ್ರೀಮಂತ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿತ್ತು. ಆದರೆ ಪದೇ ಪದೇ ಭಾರತದ ವಿರುದ್ಧ ಕಾಲು ಕೆರೆದುಕೊಂಡು, ಕಿರಿಕ್ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಸರಿಯಾಗೇ ಇಕ್ಕಿ ಇಕ್ಕಿ ಕಳುಹಿಸಿದೆ. ಇಂತಿಪ್ಪ ಪಾಕ್ ಈಗ ರಾಜಕೀಯ ದಾರಿದ್ರ್ಯಕ್ಕೆ ಬಂದು ತಲುಪಿದೆ, ಪಾಕಿಸ್ತಾನದ ಬದುಕು ಬೀದಿಗೆ ಬಿದ್ದಂತಾಗಿದೆ.
ಪಾಕಿಸ್ತಾನದಲ್ಲಿ ಸರಿಯಾಗಿ 1 ವಾರದ ಹಿಂದೆ ಸಂಸತ್ ಚುನಾವಣೆ ನಡೆದಿತ್ತು. ಹಾಗೇ ಪಾಕ್ ತಾಂತ್ರಿಕವಾಗಿ ಭಾರಿ ಹಿಂದೆ ಉಳಿದಿರುವ ಕಾರಣ, ಹಲವು ದಿನಗಳ ಕಾಲ ಮತ ಎಣಿಕೆಯು ನಡೆದು ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಆದರೆ ಪಾಕಿಸ್ತಾನದಲ್ಲಿ ಯಾರಿಗೂ ಇದೀಗ ಬಹುಮತ ಸಿಕ್ಕಿಲ್ಲ. ಹೀಗಾಗಿಯೇ ಅಲ್ಲಿ ಅತಂತ್ರ ಸರ್ಕಾರ ಸೃಷ್ಟಿಯಾಗಿದೆ. ಹೀಗಿದ್ದಾಗ ಅಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೊರತಾಗಿ ಸರ್ಕಾರ ರಚಿಸಲು ಅವರ ಶತ್ರುಗಳು ಪ್ಲ್ಯಾನ್ ಮಾಡಿದ್ದಾರೆ. ಹೀಗೆ ಬಾವಿ ಕಪ್ಪೆ ಆಗಿರುವ ಪಾಕಿಸ್ತಾನದ ರಾಜಕೀಯದಲ್ಲಿ ಮತ್ತೊಂದು ರೀತಿ ಸಮಸ್ಯೆ ಸೃಷ್ಟಿಯಾಗಿದೆ.

ಸಮ್ಮಿಶ್ರ ಸರ್ಕಾರ ಯಾವಾಗ ರಚನೆ?
ಈಗಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದಲ್ಲಿ ಮೈತ್ರಿ ಸರ್ಕಾರವನ್ನ ರಚಿಸುವ ಬಗ್ಗೆ ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಡುವೆ 2ನೇ ಸುತ್ತಿನ ಮಾತುಕತೆ ಶುರುವಾಗಲಿದೆ ಎನ್ನಲಾಗುತ್ತಿದೆ. ಬಿಲಾವಲ್ ಭುಟ್ಟೊ ಜರ್ಧಾರಿ ನೇತೃತ್ವದ ಪಿಪಿಪಿ ಈಗಾಗಲೇ ಸರ್ಕಾರ ರಚನೆಗೆ ಪಿಎಂಎಲ್-ಎನ್ ಬೆಂಬಲಿಸುತ್ತೇವೆ ಅಂತ ಹೇಳಿದೆ. ಅಂದ್ರೆ ನವಾಜ್ ಷರೀಫ್ ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ನೀಡುವ ಮಾತನ್ನೂ ಕೊಡುತ್ತಿದೆ. ಹೀಗಿದ್ದಾಗ ಬೆಂಬಲ ನೀಡೋಕೆ ದೊಡ್ಡ ರೂಲ್ಸ್ ಅಂದರೆ ಷರತ್ತನ್ನು ಕೂಡ ಹಾಕಿದೆಯಂತೆ! ಹಾಗಾದರೆ ಏನದು ಷರತ್ತು.? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.
ಪ್ರಧಾನಿ ಪಟ್ಟಕ್ಕೆ ಅಧ್ಯಕ್ಷ ಪಟ್ಟ ಫ್ರೀ?
ಅಷ್ಟಕ್ಕೂ ನವಾಜ್ ಷರೀಫ್ ಅವರ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ ಅನ್ನ ಬೆಂಬಲಿಸಿ ಸರ್ಕಾರ ರಚನೆಗೆ ಸಪೋರ್ಟ್ ಮಾಡಲು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಭರ್ಜರಿ ಡಿಮ್ಯಾಂಡ್ ಇಟ್ಟಿದೆ. ಆ ಪ್ರಕಾರ, ಪ್ರಧಾನಿ ಆಯ್ಕೆ & ಸರ್ಕಾರ ರಚನೆಗೆ ಬೆಂಬಲ ನೀಡುತ್ತೇವೆ. ಪ್ರತಿಯಾಗಿ ಅಧ್ಯಕ್ಷ ಸ್ಥಾನ ಒಳಗೊಂಡಂತೆ ಪ್ರಮುಖ ಸಾಂವಿಧಾನಿಕ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ನಮಗೆ ನೀವು ಬೆಂಬಲಿಸಬೇಕು ಎಂದು ಪಿಪಿಪಿ ಡಿಮ್ಯಾಂಡ್ ಇಟ್ಟಿದೆಯಂತೆ. ಇದೇ ಕಾರಣಕ್ಕೆ ಈಗ ಎರಡೂ ಪಕ್ಷಗಳ ನಾಯಕರ ನಡುವೆ ಚರ್ಚೆ ನಡೆಯುತ್ತಿದೆ. ಚರ್ಚೆಗಳು ಅಂತಿಮ ಹಂತಕ್ಕೆ ಬಂದ ಬಳಿಕ ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಆಗುವ ನಿರೀಕ್ಷೆ ದಟ್ಟವಾಗಿವೆ.

ಮತ್ತೊಂದು ಕಡೆ ಇದೀಗ ಪಾಕಿಸ್ತಾನದ ಸ್ಥಳೀಯ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ, ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಸಂಸತ್ತಿನ ಸ್ಪಿಕರ್ ಆಗಿ ಆಯ್ಕೆ ಆಗುವ ಸಾಧ್ಯತೆಯೇ ದಟ್ಟವಾಗಿದೆ. ಹಾಗೇ ಪಾಕ್‌ನ ವಿರೋಧ ಪಕ್ಷದ ಮಾಜಿ ನಾಯಕ, ಖುರ್ಷೀದ್ ಶಾ ಹೆಸರೂ ಈ ಸ್ಥಾನಕ್ಕೆ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆ ನವಾಜ್ ಷರೀಫ್ ಪಕ್ಷದಲ್ಲಿಯೂ ಈ ಸ್ಥಾನಕ್ಕೆ ಭಾರಿ ಪೈಪೋಟಿ ಇದೆ. ಹೀಗಾಗಿ ಯಾರಿಗೆ ಯಾವ ಪಟ್ಟ ಸಿಗುತ್ತೆ? ಹುಚ್ಚರ ಸಂತೆಯಾಗಿರುವ ಪಾಕಿಸ್ತಾನ ಸರಿ ಹೋಗುತ್ತಾ? ಅನ್ನೋ ಪ್ರಶ್ನೆಗಳು ಕುತೂಹಲದ ಜೊತೆಗೆ ಉದ್ಭವಿಸಿವೆ. ಹೀಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.
ಭಾರತ ಬೆಳೆಯುತ್ತಿದೆ, ಪಾಕಿಸ್ತಾನ?
ಒಟ್ಟಾರೆ ಹೇಳುವುದಾದ್ರೆ ಭಾರತ ಒಂದು ಕಡೆ ಭದ್ರ ಬುನಾದಿಯನ್ನ ಹಾಕಿಕೊಂಡು, ಅಭಿವೃದ್ಧಿ ಹೊಂದುತ್ತಿದೆ. ಆದರೆ ಈ ಸಮಯದಲ್ಲೇ ಭಾರತದ ಪಕ್ಕಕ್ಕೆ ಇರುವ ಪಾಕಿಸ್ತಾನ ಪರದಾಡುತ್ತಿದೆ. ಜನ ಒಂದು ಹೊತ್ತು ಸರಿಯಾಗಿ ಊಟ ಮಾಡುವುದಕ್ಕೂ ಪರದಾಡುವ ಸ್ಥಿತಿ ಇದೆ. ಅದರಲ್ಲೂ, ಕಳೆದ ಶುಕ್ರವಾರ ನಡೆದಿದ್ದ ಪಾಕಿಸ್ತಾನ ಲೋಕಸಭಾ ಚುನಾವಣೆ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಯಾರು ಸರ್ಕಾರ ರಚನೆ ಮಾಡಲಿದ್ದಾರೆ? ಅನ್ನೋ ಕುತೂಹಲ ಕೂಡ, ಡಬಲ್ ಆಗುತ್ತಿದೆ.












Click it and Unblock the Notifications