ಬೋಸ್ಟನ್ ನಲ್ಲಿ ಅನಿಲ ಪೈಪ್ ಲೈನ್ ಸ್ಫೋಟ, ಓರ್ವ ಮೃತ
ಬೋಸ್ಟನ್, ಸೆಪ್ಟೆಂಬರ್ 14: ಇಲ್ಲಿನ ಗ್ಯಾಸ್ ಪೈಪ್ ಲೈನ್ ವೊಂದರಲ್ಲಿ ಭಾರಿ ಬಿರುಕು ಉಂಟಾಗಿ 70 ಬಾರಿ ಸರಣಿ ಸ್ಫೋಟ ಸಂಭವಿಸಿದ ಘಟನೆ ಗುರುವಾರದಂದು ವರದಿಯಾಗಿದೆ. ಈ ಘಟನೆಯಿಂದಾಗಿ ಓರ್ವ ಬಾಲಕ ಮೃತಪಟ್ಟಿದ್ದು, ಹತ್ತಾರು ಮಂದಿಗೆ ಗಾಯವಾಗಿದ್ದು, ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
Fires and explosions erupt in homes across Boston-area neighborhoods due to gas line ruptures https://t.co/tA1rdwi7Ia
— Joan Dion (@jfdrocks) September 14, 2018
ಲಾರೆನ್ಸ್, ಆಂಡೋವರ್ ಹಾಗೂ ಆಂಡೋವರ್ ಉತ್ತರ ಭಾಗದ ವಾತಾವರಣ ಸಂಪೂರ್ಣ ಹೊಗೆ, ಕಾರ್ಮೋಡದಿಂದ ಆವರಿಸಿದೆ. ರಸ್ತೆ ಬೀದಿಗಳಲ್ಲಿ ಏನು ಕಾಣಿಸದಂಥ ದಟ್ಟ ಹೊಗೆ ವಾತಾವರಣ ಉಂಟಾಗಿದ್ದು, ಎಲ್ಲೆಡೆ ವಿದ್ಯುಚ್ಛಕ್ತಿ ಕಡಿತಗೊಲಿಸಲಾಗಿದೆ.

Gas explosions set more than 60 homes ablaze in Boston suburbs https://t.co/KGPLDe8m0n pic.twitter.com/PY72ca4bSQ
— JM (@JailRat40) September 14, 2018
ಈ ಘಟನೆಯಲ್ಲಿ ಗಾಯಗೊಂಡವರನ್ನು ಲಾರೆನ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಕೊಲಂಬಿಯಾ ಗ್ಯಾಸ್ ಕಂಪನಿ ತನ್ನ ಘಟಕವನ್ನು ಉನ್ನತೀಕರಣ ಮಾಡುವುದಾಗಿ ತಿಳಿಸಿತ್ತು. ಆದರೆ, ಇದರಿಂದ ಯಾವುದೇ ಹಾನಿಯಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದೆ.
LATEST: Evacuations are taking place in multiple neighborhoods north of Boston where residents have smelled gas, according to Massachusetts State Police.
— ABC News (@ABC) September 13, 2018
Authorities confirmed fires and explosions at 39 locations: https://t.co/FLlKiNwVMO pic.twitter.com/HYPFyccL7K
ಘಟನೆಯಲ್ಲಿ 6 ಮಂದಿಗೆ ಗಾಯಗೊಂಡಿದ್ದಾರೆ, ಗಾಯಾಳುಗಳ ಸಂಖ್ಯೆ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ, ಎಂಡೋವರ್ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಯೊಬ್ಬರಿಗೆ ಗಾಯವಾಗಿದೆ. ಲಾರೆನ್ಸ್ ಜನರಲ್ ಹಾಸ್ಪಿಟಲ್ನ ವಕ್ತಾರ ಜಿಲ್ ಮೆಕ್ಡೊನಾಲ್ಡ್ಸ್ ಹೆಸ್ಲಿ ಮಾತನಾಡುತ್ತಾ 10 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.












Click it and Unblock the Notifications