ಹಂದಿ ಮತ್ತು ಚಿಂಪಾಂಜಿ ಸಂತತಿಯೇ ಮನುಷ್ಯ!

Posted By:
Subscribe to Oneindia Kannada
Humans hybrid offsprings of male pig female chimpanzee- Georgia University

ವಾಷಿಂಗ್ಟನ್, ಡಿ.5- ಮಾನವ ಜನಾಂಗವು ಹಂದಿ ಮತ್ತು ಚಿಂಪಾಂಜಿ ಸಂತತಿಯೇ !? ಹೌದು ಎನ್ನುತ್ತಿದ್ದಾರೆ ಪ್ರಾಣಿಗಳ ಹೈಬ್ರೀಡ್ ತಳಿಯ ಬಗ್ಗೆ ವಿಶೇಷ ಅಧ್ಯಯನ ಕೈಗೊಂಡಿರುವ ಅಮೆರಿಕದ ಸಂಶೋಧಕರು. ಹಾಗಾದರೆ ವಿಜ್ಞಾನಿ ಡಾರ್ವಿನ್‌ ಸಿದ್ಧಾಂತವಾದ ಮಂಗನಿಂದ ಮಾನವ ಎಂಬ ಅನಾದಿಕಾಲದ ಸಂಶೋಧನೆ ಏನಾಯಿತು?

ಪುರುಷ ಹಂದಿ ಮತ್ತು ಸ್ತ್ರೀ ಚಿಂಪಾಂಜಿಯ ಮಿಲನದಿಂದ ಮನುಷ್ಯ ಹುಟ್ಟಿದ ಎಂದು ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ಮಂಗನಿಂದ ಮಾನವ ಸಂಶೋಧನೆ ಬುಡಮೇಲಾಗುವಂತೆ ಮಾನವನ ಹುಟ್ಟಿಗೆ ಗಂಡು ಹಂದಿ, ಹೆಣ್ಣು ಚಿಂಪಾಂಜಿ ಸಂಯೋಗವೇ ಕಾರಣ ಎನ್ನುತ್ತಿದ್ದಾರೆ ಈ ತಳಿವಿಜ್ಞಾನಿಗಳು.

ಹಂದಿಯ ವರ್ಣತಂತುಗಳು (chromosomes) ಮಾನವ ಕ್ರೋಮೋ ಸೋಮ್‌ ಗಳಂತಿವೆ. ಅಲ್ಲದೇ ಈಗಾಗಲೇ ಹಂದಿಯ ಹೃದಯ ಕವಾಟಗಳನ್ನು ಮಾನವನಿಗೆ ಜೋಡಿಸಿರುವುದೂ ಯಶಸ್ವಿಯಾಗಿದೆ. ಅವುಗಳ ಚರ್ಮದ ಪದರವನ್ನೂ, ಮಾನವನ ಸುಟ್ಟ ಗಾಯಕ್ಕೆ ಪರ್ಯಾಯವಾಗಿ ಬಳಸಲಾಗಿದೆ. ಹಂದಿಯ ಬಹುತೇಕ ಅವಯವಗಳು, ಮಾನವನಂತೆಯೇ ಇದೆ ಎಂಬ ವಾದದ ಸರಣಿಗಳನ್ನು ಮುಂದಿಟ್ಟಿದ್ದಾರೆ.

ಇನ್ನು ಇನ್ಸುಲಿನ್ ತಯಾರಿಕೆಯಲ್ಲೂ ಹಂದಿಯ ಬಳಕೆಯಾಗುತ್ತಿದೆ. ಹಾಗಾಗಿ, ಮನುಷ್ಯನು ಹಂದಿ ಮತ್ತು ಚಿಂಪಾಯಿ ಸಂತತಿ ಎಂಬ ವಾದಕ್ಕೆ ರೆಕ್ಕೆಪುಕ್ಕೆ ಬಂದಿದೆ ಎಂದು Daily Mail ವರದಿ ಮಾಡಿದೆ! ಮೊಸಳೆ, ಆಕ್ಟೋಪಸ್ ಅಥವಾ ಮತ್ಯಾವುದೇ ಪ್ರಾಣಿಗಳಿಗೆ ಮಾನವನನ್ನು ಹೋಲಿಕೆ ಮಾಡಿದರೆ ಅವರು ಯಾವುವೂ ಮನುಷ್ಯನ ರೂಪವನ್ನು ಹೋಲುವುದಿಲ್ಲ. ಹಂದಿ ಮತ್ತು ಚಿಂಪಾಂಜಿಗಳು ಮಾತ್ರ ಮನುಷ್ಯನಿಗೆ ಹೆಚ್ಚು ಹತ್ತಿರವಾಗಿವೆ.

ಜಾರ್ಜಿಯಾ ವಿಶ್ವವಿದ್ಯಾಲಯದ, ಮಾನವ ವಂಶವಾಹಿ ವಿಭಾಗದ ಮುಖ್ಯಸ್ಥರಾದ ಡಾ. ಈಗುನೆ ಮೆಕಾರ್ತಿ (Eugene McCarthy) ಅವರ ಪ್ರಕಾರ, ಮಾನವನದ್ದು ಹ್ರೈಬ್ರಿಡ್‌ ತಳಿ. ಹೈಬ್ರಿಡ್‌ ಹಂದಿ ಮತ್ತು ಹೈಬ್ರಿಡ್‌ ಜಿಂಪಾಂಜಿ ಸಮ್ಮಿಲನದಿಂದ ಮಾನವನ ಜನ್ಮವಾಗಿದೆಯಂತೆ.

ಡಾರ್ವಿನ್‌ ಸಿದ್ಧಾಂತವಾದ ಮಂಗನಿಂದ ಮಾನವ ಎಂಬುದು ಅರ್ಧ ಕಥೆಯನ್ನು ಮಾತ್ರ ಹೇಳುತ್ತದೆ. ಉಳಿದಿದ್ದು ಬೇರೆಯದೇ ಕಥೆಯಿದೆ ಎನ್ನುತ್ತಿದ್ದಾರೆ ಡಾ. ಈಗುನೆ ಮೆಕಾರ್ತಿ. ಚಿಂಪಾಂಜಿ ಬಹುತೇಕವಾಗಿ ಮಾನವನನ್ನೇ ಹೋಲುತ್ತದೆ. ಈ ವಾದದಲ್ಲಿ ಆಕ್ಷೇಪವಿಲ್ಲ. ಹಾಗೆಯೇ, ಇತರ ಪ್ರಾಣಿಗಳೊಂದಿಗೆ ಹೋಲಿಸಿದಾಗ, ಹಂದಿ ಮಾನವ ವಂಶವಾಹಿಗೆ ಹತ್ತಿರದಲ್ಲಿದೆಯಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Humans are hybrid offsprings of male pig and female chimpanzee says Georgia University geneticist McCarthy. McCarthy said if human beings are compared with non-mammals or invertebrates like crocodile, octopus, dragonfly or anything else, only pigs and chimpanzees look similar to the human beings. McCarthy also said that Charles Darwin told only half the story of human evolution.
Please Wait while comments are loading...