ಅಂಟಾರ್ಕಟಿಕಾ ಬಳಿ 7.1 ಪ್ರಮಾಣದ ಭಾರೀ ಭೂಕಂಪ, ಸುನಾಮಿ ಭಯವಿಲ್ಲ

ಮಂಗಳವಾರ ಬೆಳಗಿನ ಜಾವ ಅಂಟಾರ್ಕಟಿಕಾ ಬಳಿ 7.1 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ತಿಳಿಸಿದೆ.

ಬ್ರಿಸ್ಟಲ್ ದ್ವೀಪದ ಉತ್ತರ ಭಾಗದಿಂದ 61 ಕಿ.ಮೀ. ದೂರದಲ್ಲಿರುವ ಸೌತ್ ಸ್ಯಾಂಡ್ ವಿಚ್ ಐಲ್ಯಾಂಡ್ಸ್ ನಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿದುಬಂದಿದೆ.

ಭೂಮಿಯ ಮೇಲ್ಭಾಗದಿಂದ 150 ಕಿ.ಮೀ. ಆಳದಲ್ಲಿ ಕಂಪನ ಸಂಭವಿಸಿದೆ. ಆದರೆ, ಸುನಾಮಿಯ ಯಾವುದೇ ಭೀತಿಯಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

Huge magnitude earthquake strikes near Antarctica

ಭೂಕಂಪದ ಪ್ರಮಾಣ ಮೊದಲು 7.5 ಎಂದು ಹೇಳಲಾಗಿತ್ತು. ನಂತರ ಅದನ್ನು 7.1ಕ್ಕೆ ಇಳಿಸಲಾಗಿದೆ. ಬ್ರಿಟಿಷರ ಆಳ್ವಿಕೆಯ ಸ್ಯಾಂಡ್ ವಿಚ್ ಐಲ್ಯಾಂಡ್ಸ್ ನಲ್ಲಿ ಹಲವಾರು ಅಗ್ನಿ ಪರ್ವತಗಳಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಡಿಸೆಂಬರ್ 1ರಂದು ಅಮೆರಿಕದ ಅಲಾಸ್ಕದಲ್ಲಿ 6.7 ಪ್ರಮಾಣದ ಭೂಕಂಪ ಸಂಭವಿಸಿ, ಆಸ್ತಿಪಾಸ್ತಿಗೆ ಭಾರೀ ಹಾನಿ ಉಂಟಾಗಿತ್ತು. ರಸ್ತೆ ಸೇತುವೆಗಳು ಭಾರೀ ಬಿರುಕು ಬಿಟ್ಟಿದ್ದರಿಂದ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.

Huge magnitude earthquake strikes near Antarctica

ಇತ್ತೀಚೆಗೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಬಳಿಯ ದ್ವಿಪವೊಂದರಲ್ಲಿ ಕೂಡ ಇಷ್ಟೇ ಪ್ರಮಾಣದ ಭೂಕಂಪ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+