ವಿಜಯ್ ಮಲ್ಯ ಯುಕೆಯಲ್ಲಿ ಬಂಧನಕ್ಕೊಳಗಾಗಿದ್ದು ಹೇಗೆ?

Posted By:
Subscribe to Oneindia Kannada

ಲಂಡನ್, ಏಪ್ರಿಲ್ 18 : ಎರಡು ವರ್ಷಗಳಿಂದ ಲಂಡನ್ನಿನಲ್ಲಿ ತಲೆಮರೆಸಿಕೊಂಡಿದ್ದ ಮದ್ಯದ ದೊರೆ, 9000 ಕೋಟಿ ರುಪಾಯಿ ಸಾಲ ಮಾಡಿ ಪರಾರಿಯಾಗಿದ್ದ ವಿಜಯ್ ಮಲ್ಯ ಯುಕೆಯಲ್ಲಿ ಬಂಧನವಾಗಿದ್ದು ಹೇಗೆ?

ಇದು ಸದ್ಯಕ್ಕೆ ಚರ್ಚೆಯಾಗುತ್ತಿರುವ ಸಂಗತಿ. ಕರ್ನಾಟಕದ ಬಂಟ್ವಾಳದ ಮೂಲದ ಮಲ್ಯ ಅವರನ್ನು ಬಂಧನಕ್ಕೊಳಪಡಿಸಲು ಭಾರತ ಕರಾರುವಾಕ್ಕಾದ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಹಲವಾರು ಬಾರಿ ಯುಕೆ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಭೇಟಿಯನ್ನೂ ಮಾಡಿತ್ತು.

ಇದಕ್ಕಾಗಿ ಯುಕೆ ಅಧಿಕಾರಿಗಳು ಭಾರತಕ್ಕೆ ಬಂದಿದ್ದರು. ಮೊದಲಿಗೆ ದೆಹಲಿಯ ನೆಹರೂ ಭವನದಲ್ಲಿ ಭಾರತ ಮತ್ತು ಯುಕೆಯ ಅಧಿಕಾರಿಗಳ ರಹಸ್ಯ ಭೇಟಿಯಾಗಿತ್ತು. ನಂತರ ಲಂಡನ್ನಿನ 10 ಡೌನಿಂಗ್ ಸ್ಟ್ರೀಟ್ ನಲ್ಲಿ ಅಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದರು. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

How Dr Vijay Mallya was arrested by Scotland Yard

ಯುನೈಟೆಡ್ ಕಿಂಗಡಂಗೆ ಮ್ಯೂಚುವಲ್ ಲೀಗಲ್ ಅಸಿಸ್ಟನ್ಸ್ ಟ್ರೀಟಿಯಡಿ ಭಾರತ ಸಲ್ಲಿಸಿದ್ದ ಪತ್ರದ ಆಧಾರದ ಮೇಲೆ ಮಲ್ಯ ಅವರನ್ನು ಬಂಧಿಸಲಾಗಿದೆ. ಹಸ್ತಾಂತರಕ್ಕಾಗಿ ಜಾರಿ ನಿರ್ದೇಶನಾಲಯ ಯುನೈಟೆಡ್ ಕಿಂಗಡಂಗೆ ಮತ್ತೊಮ್ಮೆ ಪತ್ರ ಬರೆಯಬೇಕಾಗುತ್ತದೆ. [ಲಂಡನ್ನಿನಲ್ಲಿ ವಿಜಯ್ ಮಲ್ಯ ಬಂಧನ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How Dr Vijay Mallya was arrested by Scotland Yard? India and United Kingdom officials met in India and UK twice secretly for the arrest of Vijay Mallya. First they met in Nehru Bhavan and second time in 10 Downing Street.
Please Wait while comments are loading...