US Election 2024: ಹಾಲಿವುಡ್ ನಟ, ನಟಿಯರು & ಅಮೆರಿಕನ್ ಸೆಲೆಬ್ರಿಟಿಗಳ ನಡುವೆ ಮಹಾನ್ ಬಿರುಕು!
ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆ 2024, ವೆರೈಟಿ ವೆರೈಟಿಯಾಗಿ ವಿವಾದ ಎಬ್ಬಿಸುತ್ತಿದೆ. ಯಾಕಂದ್ರೆ ಈ ಬಾರಿ ಅಮೆರಿಕದಲ್ಲಿ ಅಧ್ಯಕ್ಷರಾಗಿ ಆಯ್ಕೆ ಆಗುವವರು ಹೊಸ ಇತಿಹಾಸ ನಿರ್ಮಿಸುವುದು ಗ್ಯಾರಂಟಿ. ಭಾರತ ಮೂಲದ ನಂಟನ್ನು ಹೊಂದಿರುವ ಕಮಲಾ ಹ್ಯಾರಿಸ್ & ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ದೊಡ್ಡ ಹೋರಾಟವೇ ನಡೆಯುತ್ತಿದೆ. ಈ ಸಮಯದಲ್ಲೇ ಹಾಲಿವುಡ್ ನಟ, ನಟಿಯರು & ಅಮೆರಿಕನ್ ಸೆಲೆಬ್ರಿಟಿಸ್ ನಡುವೆ ಮಹಾನ್ ಬಿರುಕು ಕೂಡ ಮೂಡಿಬಿಟ್ಟಿದೆ. ಇದ್ದಕ್ಕಿದ್ದಂತೆಯೇ ಹೀಗೆ ಆಗಿದ್ದು ಯಾಕೆ ಗೊತ್ತಾ?
ಚುನಾವಣೆ ಲೆಕ್ಕಾಚಾರದಲ್ಲಿ ಅಮೆರಿಕ ಈಗ ಪೀಸ್ ಪೀಸ್ ಆಗಿ ಹೋಗಿದೆ. ಯಾಕೆ ಅಂದ್ರೆ, ಒಂದು ಬಣ ಇದೀಗ ಡೊನಾಲ್ಡ್ ಟ್ರಂಪ್ ಪರವಾಗಿ ಬ್ಯಾಟ್ ಬೀಸುತ್ತಿದೆ. ಹಾಗೇ ಇನ್ನೊಂದು ಕಡೆ ಕಮಲಾ ಹ್ಯಾರಿಸ್ ಪರವಾಗಿ ಮತ್ತೊಂದು ಗುಂಪು ನಿಂತುಕೊಂಡಿದೆ. ಈ ಇಬ್ಬರ ಮಧ್ಯೆ ಚುನಾವಣೆಗಿಂತ ಹೆಚ್ಚಾಗಿ ಹೋರಾಟ ನಡೆಯುತ್ತಿದ್ದು, ದೊಡ್ಡ ಕಿತ್ತಾಟ ಕೂಡ ಶುರುವಾಗಿದೆ. ಇದರ ಪರಿಣಾಮ ಹಾಲಿವುಡ್ ನಟ, ನಟಿಯರು & ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿ ಜನರ ಮನಸ್ಸು ಗೆದ್ದಿರುವ ಸೆಲೆಬ್ರಿಟಿಗಳು ಕೂಡ ಡಿವೈಡ್ ಆಗಿದ್ದಾರೆ. ಇದು ಅಮೆರಿಕದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಡೊನಾಲ್ಡ್ ಟ್ರಂಪ್ ಪರವಾಗಿ ಯಾರಿದ್ದಾರೆ?
ಅಮೆರಿಕ ಎಂಬ ದೈತ್ಯ ದೇಶದಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹುಟ್ಟುತ್ತಲೇ ಬಾಯಲ್ಲಿ ಚಿನ್ನದ ಸ್ಪೂನ್ ಇಟ್ಟುಕೊಂಡು ಬೆಳೆದ ಮನುಷ್ಯ. ಹೀಗಾಗಿ ಡೊನಾಲ್ಡ್ ಟ್ರಂಪ್‌ಗೆ ಚುನಾವಣೆ ಎದುರಿಸಲು ಹಣದ ಸಮಸ್ಯೆ ಇಲ್ಲವೇ ಇಲ್ಲ, ಅದರಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಕೂಡ ಡೊನಾಲ್ಡ್ ಟ್ರಂಪ್ ಪರವಾಗಿ ನಿಂತು ಹೋರಾಡುತ್ತಿದ್ದಾರೆ. ಹಣ ಸುರಿದು, ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಟ್ರಂಪ್ ಪರವಾಗಿ ಭರ್ಜರಿ ಬೆಂಬಲ!
ಉದ್ಯಮಿಗಳು ಮಾತ್ರವಲ್ಲ ಡೊನಾಲ್ಡ್ ಟ್ರಂಪ್ ಪರ ಹಾಲಿವುಡ್ ನಟ & ನಟಿಯರು ಕೂಡ ಪ್ರಚಾರ ನಡೆಸುತ್ತಿದ್ದಾರೆ. ಹಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಹತ್ತಾರು ಹಿಟ್ ಸಿನಿಮಾ & ಟಿವಿ ಶೋಗಳನ್ನ ನೀಡಿರುವ ನಟ & ನಟಿಯರಿಂದ ಹಿಡಿದು ಡಬ್ಲ್ಯೂಡಬ್ಲ್ಯೂಇ ಅಖಾಡದಲ್ಲಿ ಕುಸ್ತಿ ಆಡುವವರ ತನಕವೂ, ದೊಡ್ಡ ದೊಡ್ಡವರ ಬೆಂಬಲ ಈಗಾಗಲೇ ಡೊನಾಲ್ಡ್ ಟ್ರಂಪ್‌ಗೆ ಸಿಗುತ್ತಿದೆ.
ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಅವರಿಗೆ ಕೂಡ ಹಾಲಿವುಡ್ ನಟ & ನಟಿಯರು ಹಾಗೂ ಸೆಲೆಬ್ರಿಟಿಗಳು ಬೆಂಬಲ ನೀಡುತ್ತಿದ್ದಾರೆ. ಈ ಕಾರಣಕ್ಕೆ ಇದೀಗ ಸೆಲೆಬ್ರಿಟಿಗಳ ನಡುವೆ ಕೂಡ ಕಿಚ್ಚು ಹೊತ್ತಿಸಿದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ. ಹಾಗೇ ಚುನಾವಣೆ ಪ್ರಚಾರಕ್ಕೆ ಅಂತಾನೇ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ಅವರು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಾ ಮತದಾರರ ಬೆಂಬಲ ಪಡೆಯಲು ಪರದಾಡುತ್ತಿದ್ದಾರೆ. ಹೀಗಾಗಿ ಅಮೆರಿಕದ ಚುನಾವಣೆ ಭಾರಿ ಭರ್ಜರಿ ಕುತೂಹಲ ಕೆರಳಿಸಿದೆ.












Click it and Unblock the Notifications