ಪ್ಯಾಲೆಸ್ತೀನ್ ಉಗ್ರನನ್ನು ಕೊಂದಿದ್ದಕ್ಕೆ ಇಸ್ರೇಲ್ ಸೈನಿಕನಿಗೆ ಜೈಲು!

ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ವೈರಿ ರಾಷ್ಟ್ರ ಪ್ಯಾಲೆಸ್ತೀನ್ ಉಗ್ರನನ್ನು ಕೊಂದಿದ್ದಕ್ಕೆ ಇಸ್ರೇಲ್ ಸೈನಿಕನಿಗೆ ಅಲ್ಲಿನದೇ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರು, ಫೆಬ್ರವರಿ 21: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ವೈರಿ ರಾಷ್ಟ್ರ ಪ್ಯಾಲೆಸ್ತೀನ್ ಉಗ್ರನನ್ನು ಕೊಂದಿದ್ದಕ್ಕೆ ಇಸ್ರೇಲ್ ಸೈನಿಕನಿಗೆ ಅಲ್ಲಿನದೇ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕನೊಬ್ಬ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದಾಗಿದೆ. 20 ವರ್ಷ ವಯಸ್ಸಿನ ಇಸ್ರೇಲ್ ಸೈನಿಕ ಎಲೊರ್ ಅಝಾರಿಯಾಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಿ ರಾಜಧಾನಿ ಟೆಲ್ ಅವಿವ್ ನಲ್ಲಿರುವ ರಕ್ಷಣಾ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ. [ಬೆಂಗಳೂರು : ಇಸ್ರೇಲ್ ವೀಸಾ ಕಚೇರಿ ಬೆಂಕಿಗೆ ಉಗ್ರರು ಕಾರಣ?]

ಅಜಾರಿಯಾಗೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ ನೀಡುವ ಅವಕಾಶ ಇತ್ತು. ಆದರೆ ನ್ಯಾಯಾಲಯ ಕೇವಲ 18 ತಿಂಗಳ ಶಿಕ್ಷೆ ನೀಡಿದೆ. [ಇಸ್ರೇಲ್: ಜೆರುಸಲೇಮ್- ಬೆಥ್ಲೆಹೆಮ್ ಗೆ ಕರಾವಳಿ ಕ್ರೈಸ್ತರ ಪಾದಯಾತ್ರೆ]

ಶಿಕ್ಷೆ ಯಾಕೆ?

ಶಿಕ್ಷೆ ಯಾಕೆ?

ಮಾರ್ಚ್ 24, 2016ರಂದು ವೆಸ್ಟ್ ಬ್ಯಾಂಕ್ ನಲ್ಲಿರುವ ಹೆಬ್ರಾನ್ ಪ್ರದೇಶದಲ್ಲಿ ಅಬ್ದುಲ್ ಫತಾಹ್ ಅಲ್ ಶರೀಫ್ ಎಂಬ 21 ವರ್ಷದ ಪ್ಯಾಲೆಸ್ತೀನ್ ತರುಣನನ್ನು ಇಸ್ರೇಲ್ ಸೈನಿಕ ಎಲೊರ್ ಅಝಾರಿಯಾ ಗುಂಡಿಕ್ಕಿ ಕೊಂದಿದ್ದ. ಈ ಕೊಲ್ಲುವ ದೃಶ್ಯವನ್ನು ಇಸ್ರೇಲಿನ 'ಬಿ ಟ್ಸೆಲೆಮ್' ಎಂಬ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರೊಬ್ಬರು ರೆಕಾರ್ಡ್ ಮಾಡಿದ್ದರು.

ದೃಶ್ಯದಲ್ಲಿ ಏನಿತ್ತು?

ದೃಶ್ಯದಲ್ಲಿ ಏನಿತ್ತು?

ದೃಶ್ಯದಲ್ಲಿ ಇಸ್ರೇಲ್ ಸೈನಿಕನ ದಾಳಿಗೆ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕ ನಿಸ್ತೇಜನಾಗಿ ಬಿದ್ದಿದ್ದು ಕಾಣಿಸುತ್ತಿತ್ತು. ವಿಪರೀತ ರಕ್ತ ಸೋರುತ್ತಾ ಬಿದ್ದಿದ್ದ ಆತ ಪ್ರತಿ ದಾಳಿ ನಡೆಸುವ ಯಾವ ಸಾಧ್ಯತೆಯೂ ಇರಲಿಲ್ಲ. ಹೀಗಿರುವಾಗ ಆತನನ್ನು ವಿನಾಕಾರಣ ಕೊಂದಿದ್ದಕ್ಕೆ ಇಸ್ರೇಲ್ ನ್ಯಾಯಾಲಯ ತನ್ನದೇ ಸೈನಿಕನಿಗೆ ಈ ಶಿಕ್ಷೆ ನೀಡಿದೆ.

ಸಮಂಜಸವಲ್ಲದ ಪ್ರತಿದಾಳಿ

ಸಮಂಜಸವಲ್ಲದ ಪ್ರತಿದಾಳಿ

"ಎದುರಿಗಿದ್ದ ಮನುಷ್ಯ ಭಯೋತ್ಪಾದಕನಾದರೂ, ಸಮಂಜಸವಲ್ಲದ ಪ್ರತಿದಾಳಿ ನಡೆಸಿದ್ದನ್ನು ಸಮರ್ಥಿಸಿಕೊಳ್ಳಲಾಗದು," ಎಂದು ನ್ಯಾಯಮೂರ್ತಿ ಮಯ ಹೆಲ್ಲರ್ ಆದೇಶ ನೀಡುವ ವೇಳೆ ಖಾರವಾಗಿಯೇ ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರಕರಣದ ವಿಚಾರಣೆ ನಡೆದು ಕೆಲವು ತಿಂಗಳ ಹಿಂದಷ್ಟೇ ಅಝಾರಿಯಾ ತಪ್ಪಿತಸ್ಥ ಎನ್ನಲಾಗಿತ್ತು. ಇದೀಗ ಅಲ್ಲಿನ ನ್ಯಾಯಾಲಯ ಻ಅಝಾರಿಯಾಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಮಾನವೀಯತೆಯೇ ಸರ್ವ ಶ್ರೇಷ್ಠ

ಮಾನವೀಯತೆಯೇ ಸರ್ವ ಶ್ರೇಷ್ಠ

ಹಾಗೆ ನೋಡಿದರೆ ಅಝಾರಿಯಾಗೆ ಶಿಕ್ಷೆ ನಿಡಬಾರದು ಎಂದು ಅಲ್ಲಿನ ನ್ಯಾಯಾಲಯದ ವಿರುದ್ಧ ದೇಶದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿಸದ್ದರು. ಸ್ವತಃ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅಝಾರಿಯಾ ಪರ ವಾದಿಸಿದ್ದರು. ಆದರೆ ಅದಕ್ಕೆಲ್ಲಾ ಸೊಪ್ಪು ಹಾಕದ ನ್ಯಾಯಾಲಯ ನೆರೆಯ ರಾಷ್ಟ್ರದ ಭಯೋತ್ಪಾದಕನನ್ನು ಕೊಂದಿದ್ದಕ್ಕೆ ತನ್ನದೇ ದೇಶದ ಸೈನಿಕನಿಗೆ ಶಿಕ್ಷೆ ನೀಡಿದೆ.

ಅಮ್ನೆಸ್ಟಿ ಆರೋಪ

ಅಮ್ನೆಸ್ಟಿ ಆರೋಪ

ಇದೇ ರೀತಿ ದಾಳಿಕೋರರಲ್ಲದ ಪ್ಯಾಲೆಸ್ತೀನಿಯರನ್ನು ಕೊಂದ ಆರೋಪಗಳೂ ಇಸ್ರೇಲಿ ಸೈನಿಕರ ಮೇಲೆ ಇವೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಕನಿಷ್ಠ 20 ಕಾನೂನು ಬಾಹಿರ ಕೊಲೆಗಳನ್ನು ಇಸ್ರೇಲಿ ಸೈನಿಕರು ಮಾಡಿದ್ದಾರೆ ಎಂದು ಹೇಳಿತ್ತು. ಇದರಲ್ಲಿ 15 ಜನ ದಾಳಿ ಮಾಡುವ ಯಾವ ಸಾಧ್ಯತೆಗಳೂ ಇರಲಿಲ್ಲ; ಇದು ಗೊತ್ತಿದ್ದೂ ಕೊಲೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆಯ ಮೇಲೆ ಆರೋಪ ಹೊರಿಸಿತ್ತು.

244 ಜನರ ಕೊಲೆ

244 ಜನರ ಕೊಲೆ

ಅಕ್ಟೋಬರ್ 2015ರಿಂದ ಇಲ್ಲೀವರೆಗೆ, ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು, ಅನುಮಾನಾಸ್ಪದ ದಾಳಿಕೋರರು ಸೇರಿ ಒಟ್ಟು 244 ಪ್ಯಾಲೆಸ್ಟೀನಿಯರನ್ನು ಇಸ್ರೇಲಿ ಸೈನಿಕರು ಕೊಂದಿದ್ದಾರೆ. ಇದೇ ವೇಳೆ 36 ಇಸ್ರೇಲಿ ಸೈನಿಕರು ಪ್ಯಾಲೆಸ್ತೀನಿಯರ ಚಾಕು ದಾಳಿ ಮತ್ತು ಗುಂಡಿಗೆ ಹತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+