ಇ ಮೇಲ್ ಪ್ರಕರಣದಲ್ಲಿ ಹಿಲರಿ ಕ್ಲಿಂಟನ್ ಗೆ ನಿರಾಳ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ವಾಷಿಂಗ್ಟನ್, ನವೆಂಬರ್ 7: ಇ ಮೇಲ್ ಹಗರಣದ ಆರೋಪದಲ್ಲಿ ಯಾವುದೇ ಸಾಕ್ಷಿಗಳಿಲ್ಲ ಎನ್ನುವ ಮೂಲಕ ಹಿಲರಿ ಕ್ಲಿಂಟನ್ ಗೆ ನಿರಾಳವಾದಂತಾಗಿದೆ. ಎಫ್ ಬಿಐ ನಿರ್ದೇಶಕ ಜೇಮ್ಸ್ ಬಿ. ಕಾಮೆ. ಭಾನುವಾರ ಈ ಬಗ್ಗೆ ಹೇಳಿರುವ ಅವರು, ಹಿಲರಿ ಕ್ಲಿಂಟನ್ ಖಾಸಗಿ ಇ ಮೇಲ್ ಮೂಲಕ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿದ್ದು, ಆಕೆ ವಿರುದ್ಧದ ಆರೋಪದಿಂದ ಮುಕ್ತಗೊಳಿಸಲಾಗಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಎರಡು ದಿನ ಇರುವಂತೆ ಈ ಮಾಹಿತಿ ಬಂದಿದೆ. ಹಿಲರಿ ಕ್ಲಿಂಟನ್ ಮೇಲೆ ಇದ್ದ ಅನುಮಾನದ ಕಾರ್ಮೋಡ ಸರಿದಂತಾಗಿದೆ. ಕಳೆದ ತಿಂಗಳು ಚುನಾವಣೆ ಪ್ರಚಾರದ ವೇಳೆಯೇ ಇ ಮೇಲ್ ಪ್ರಕರಣ ಚರ್ಚೆಯ ವಸ್ತುವಾಗಿತ್ತು. ಅಮೆರಿಕಾದ ತನಿಖಾ ಸಂಸ್ಥೆ ಎಫ್ ಬಿಐ ಇ ಮೇಲ್ ಗಳ ಪರಿಶೀಲನೆ ನಡೆಸುತ್ತದೆ ಎಂದು ಹೇಳಲಾಗಿತ್ತು.[ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್]

Hillary Clinton gets relax in email case

ಎಫ್ ಬಿಐಗೆ ಹೊಸ ಹಿಲರಿ ಕ್ಲಿಂಟನ್ ಅವರ ಹೊಸ ಇ ಮೇಲ್ ಗಳು ಸಿಕ್ಕಿವೆ ಎಂಬ ಮಾಹಿತಿ ಹೊರಬಿದ್ದ ಹಾಗೆ ಸಂಚಲನಕ್ಕೆ ಕಾರಣವಾಗಿತ್ತು ಹಾಗೂ ಈ ಸಂದರ್ಭದಲ್ಲಿ ಮತ್ತೆ ಆ ವಿಷಯ ಕೆದಕಿದ್ದಕ್ಕೆ ವ್ಯಾಪಕ ವಿರೋಧವೂ ಕೇಳಿಬಂದಿತ್ತು. ಹಿಲರಿ ತಮ್ಮ ಖಾಸಗಿ ಇ ಮೇಲ್ ನಿಂದ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು.[ಖಾಸಗಿ ಇ-ಮೇಲ್ ಬಳಕೆ: ಎಫ್ ಬಿಐ ತನಿಖೆಗೆ ಹಿಲರಿ ಆಕ್ಷೇಪ]

ಈ ಬಗ್ಗೆ ಜುಲೈನಲ್ಲೇ ಕ್ಲೀನ್ ಚಿಟ್ ಪಡೆದಿದ್ದರು ಹಿಲರಿ. ಅದರೆ, ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ಹಗರಣ ಮರುಜೀವ ಪಡೆದಿತ್ತು. ಆ ಬಗ್ಗೆ ಹೇಳಿರುವ ಕಾಮೆ, ಜುಲೈನಲ್ಲಿ ನಾವು ತಿಳಿಸಿದ್ದ ವಿಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The FBI director James B. Comey told, he had seen no evidence in a recently discovered trove of emails to change his conclusion that Hillary Clinton should face no charges over her handling of classified information.
Please Wait while comments are loading...