ಯುರೋಪ್ ಗಂಟಲಿಗೆ ಬಿಸಿತುಪ್ಪ: ಉಕ್ರೇನ್‌ಗೆ ಹಣ ನೀಡಲು ಪರದಾಟ!
ಯುದ್ಧ ಬೇಡ ಬೇಡ ಅಂತಾ ಅದೆಷ್ಟೇ ತಡೆ ಹಾಕಿದರೂ ಯುದ್ಧಗಳು ಮಾತ್ರ ನಡೆಯುತ್ತಲೇ ಇವೆ. ಹೀಗೆ ಯುದ್ಧದ ರಕ್ತದಾಹಕ್ಕೆ ಕೋಟ್ಯಂತರ ಅಮಾಯಕರ ಜೀವ ಬಲಿಯಾಗುತ್ತಿದ್ದರು, ಅಧಿಕಾರದಲ್ಲಿ ಇರುವ ಅಹಂಕಾರಿ ನಾಯಕರು ಮಾತ್ರ ಯುದ್ಧ ನಿಲ್ಲಿಸಲು ತಯಾರಾಗಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಯುರೋಪ್ ಖಂಡ ನಲುಗಿ ಹೋಗಿದೆ.
2022ರಲ್ಲಿ ಉಕ್ರೇನ್ & ರಷ್ಯಾ ನಡುವೆ ಯುದ್ಧ ಶುರುವಾದ ನಂತರ ಜಾಗತಿಕ ಮಟ್ಟದಲ್ಲೂ ರಕ್ಷಣಾ ಬಜೆಟ್ ಹೆಚ್ಚಾಗುತ್ತಿದೆ. ಶ್ರೀಮಂತ ದೇಶಗಳು ತಮ್ಮ ತಮ್ಮ ಸೇನಾ ಖರ್ಚಿಗೆ ಹೆಚ್ಚಾಗಿ ಹಣ ಬಳಸುತ್ತಿವೆ. ಈ ಮೂಲಕ ಕಳೆದ ವರ್ಷ ರಕ್ಷಣಾ ಬಜೆಟ್ ಸುಮಾರು 2.44 ಟ್ರಿಲಿಯನ್ ಡಾಲರ್ ತಲುಪಿದೆ. ಮತ್ತೊಂದು ಕಡೆ ಹೀಗೆ ರಕ್ಷಣಾ ಬಜೆಟ್ ಹೆಚ್ಚಾದಂತೆ ಭಯ ಆವರಿಸಿ, ಯುದ್ಧದ ಭೀತಿ ಹೆಚ್ಚಾಗಿದೆ. ಇದೇ ಸಮಯದಲ್ಲಿ ಯುರೋಪ್ ದೇಶಗಳ ಜನ ಉಕ್ರೇನ್ ಯುದ್ಧ ಶುರುವಾದ ನಂತರ ಒಂದು ಲೀಟರ್ ಗ್ಯಾಸ್ ಖರೀದಿ ಮಾಡುವುದಕ್ಕೂ ಪರದಾಡ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು!

ಯುರೋಪ್‌ನ ಬುಡವೇ ಶೇಕ್!
ಹೌದು, ಯಾವಾಗ ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಯ್ತೋ ಆ ದಿನವೇ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಹಲವು ನಿರ್ಬಂಧ ಹೇರಿವೆ. ಇದರ ಪರಿಣಾಮ ರಷ್ಯಾ ದೇಶ ಸರಬರಾಜು ಮಾಡುತ್ತಿದ್ದ ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಹಲವು ವಸ್ತುಗಳು ಈಗ ಯುರೋಪ್ ಖಂಡದಲ್ಲಿ ಕಾಸ್ಟ್ಲಿ ಆಗಿವೆ. ರಷ್ಯಾ ಜೊತೆ ಯಾವುದೇ ವ್ಯವಹಾರ ಮಾಡಬಾರದು ಎಂಬ ನಿಷೇಧಾಜ್ಞೆ ಇರುವ ಕಾರಣಕ್ಕೆ ಸಂಚಲನ ಸೃಷ್ಟಿ ಆಗಿದೆ. ಹೀಗಿದ್ದಾಗ ಯುರೋಪ್‌ನ ಆರ್ಥಿಕತೆ ಕೂಡ ನಲುಗಿ ಹೋಗಿದ್ದು, ಒಂದೇ ಒಂದು ಯುದ್ಧ ಯುರೋಪ್‌ನ ಬುಡವನ್ನೇ ಅಲುಗಾಡಿಸಿದೆ.
'ನ್ಯಾಟೋ' ಒಕ್ಕೂಟದ ದೇಶಗಳಿಗೆ ಹೊರೆ
ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟದ ದೇಶಗಳು ಯುರೋಪ್ ಖಂಡದಲ್ಲಿ ಹೆಚ್ಚಾಗಿವೆ. ಹೀಗಾಗಿ ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತರ ಅನಿವಾರ್ಯ ಕಾರಣಕ್ಕೆ ಎಲ್ಲಾ ದೇಶಗಳು ರಷ್ಯಾ ವಿರುದ್ಧ ನಿಂತಿವೆ. ಇದು ಯುರೋಪ್ ದೇಶಗಳನ್ನು ಈಗ ಆರ್ಥಿಕವಾಗೂ ಬೀದಿಗೆ ತಳ್ಳುತ್ತಿದೆ. ಅಕಸ್ಮಾತ್ ರಷ್ಯಾ & ಉಕ್ರೇನ್ ನಡುವೆ ಯುದ್ಧ ಇದೇ ರೀತಿ ಇನ್ನೊಂದು ವರ್ಷ ನಡೆದರೂ ಯುರೋಪ್ ಆರ್ಥಿಕತೆ ದಿಕ್ಕಾಪಾಲು ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು.
ಒಟ್ನಲ್ಲಿ ಯುದ್ಧದ ಕಾರ್ಮೋಡ ಕರಗಬೇಕಿದೆ, ರಷ್ಯಾ VS ಉಕ್ರೇನ್ ಯುದ್ಧಕ್ಕೆ ಅಂತ್ಯವನ್ನ ಹಾಡಬೇಕಿದೆ. ಇಲ್ಲವಾದ್ರೆ ಮನುಷ್ಯರ ಭವಿಷ್ಯಕ್ಕೆ ಈ ಯುದ್ಧವು ದೊಡ್ಡ ಅಡ್ಡಿ ಆಗುವುದು ಪಕ್ಕಾ ಅಂತಿದ್ದಾರೆ ತಜ್ಞರು. ಕಳೆದ 2 ವರ್ಷಗಳಿಂದ ನಿರಂತರವಾಗಿ ಯುದ್ಧವು ನಡೆಯುತ್ತಿದೆ. ಇದೀಗ 3ನೇ ವರ್ಷಕ್ಕೆ ಈ ಯುದ್ಧ ಕಾಲಿಟ್ಟಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications