Get Updates
Get notified of breaking news, exclusive insights, and must-see stories!

ಜಮ್ಮು- ಕಾಶ್ಮೀರ ಬಗ್ಗೆ ಭಾರತ- ಪಾಕ್ ಮಧ್ಯೆ ಮಾಲ್ಡೀವ್ಸ್ ನಲ್ಲೂ ಮಾತಿನ ಚಕಮಕಿ

ಮಾಲ್ಡೀವ್ಸ್, ಸೆಪ್ಟೆಂಬರ್ 1: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ-ಮಾನ ತೆಗೆಯುವ ಭಾರತದ ನಿರ್ಧಾರದ ಬಗ್ಗೆ ಚರ್ಚೆ ನಡೆಸಲು ಪಾಕಿಸ್ತಾನವು ಮಾಡಿದ ಪ್ರಯತ್ನಕ್ಕೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಘಟನೆ ನಡೆದಿರುವುದು ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ದಕ್ಷಿಣ ಏಷ್ಯಾದ ಸ್ಪೀಕರ್ ಗಳ ಸಮಾವೇಶದಲ್ಲಿ. ಈ ವೇಳೆ ಭಾರತ ಹಾಗೂ ಪಾಕಿಸ್ತಾನದ ಪ್ರತಿನಿಧಿಗಳ ಮಧ್ಯೆ ಕಾವೇರಿದ ಚರ್ಚೆ ನಡೆದಿದೆ.

ಪಾಕಿಸ್ತಾನದ ಪ್ರತಿನಿಧಿ ಜಮ್ಮು- ಕಾಶ್ಮೀರದ ವಿಷಯವನ್ನು ತೆಗೆದರು. ಇದಕ್ಕೆ ಭಾರತದ ಪ್ರತಿನಿಧಿ- ರಾಜ್ಯಸಭಾದ ಉಪ ಸಭಾಪತಿ ಹರಿವಂಶ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

"ಭಾರತದ ಆಂತರಿಕ ವಿಷಯವನ್ನು ಇಲ್ಲಿ ಚರ್ಚೆ ಮಾಡುವುದಕ್ಕೆ ನಾವು ಪ್ರಬಲವಾಗಿ ಆಕ್ಷೇಪಿಸುತ್ತೇವೆ. ಸಮಾವೇಶದ ಉದ್ದೇಶದ ಹೊರಗೆ ಇರುವ ವಿಷಯವನ್ನು ಎತ್ತುವ ಮೂಲಕ ಈ ವೇದಿಕೆಯಲ್ಲಿ ರಾಜಕೀಯ ತರುವುದನ್ನೂ ನಾವು ವಿರೋಧಿಸುತ್ತೇವೆ" ಎಂದು ಹರಿವಂಶ್ ಹೇಳಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದಲ್ಲಿ ಭಾರತೀಯ ನಿಯೋಗವು ಈ ಸಮಾವೇಶಕ್ಕೆ ತೆರಳಿದೆ.

Harivansh

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ-ಮಾನ ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಭಾರತದ ಕ್ರಮಕ್ಕೆ ಪಾಕಿಸ್ತಾನವು ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಜಮ್ಮು- ಕಾಶ್ಮೀರವು ಆಂತರಿಕ ವಿಚಾರ ಎನ್ನುತ್ತಾ ಬರುತ್ತಿದೆ ಭಾರತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+