Israel & Gaza: ಇಸ್ರೇಲ್ ಒತ್ತೆಯಾಳುಗಳನ್ನು ರಿಲೀಸ್ ಮಾಡಿದ ಹಮಾಸ್

ಹಮಾಸ್ ಮತ್ತು ಇಸ್ರೇಲ್ ನಡುವೆ ಮೂಡಿರುವ ಒಪ್ಪಂದದ ಪ್ರಕಾರ ಇದೀಗ ಮತ್ತೆ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ರಿಲೀಸ್ ಮಾಡಿದೆ ಹಮಾಸ್. ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಸಮಯದಲ್ಲಿ ಒತ್ತೆಯಾಳು ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಹಾಗೇ ಇಸ್ರೇಲ್ ಕೂಡ ಬಂಧಿತರಾಗಿದ್ದ ಹಮಾಸ್ ಮುಖಂಡರ ಬಿಡುಗಡೆಗೆ ಒಪ್ಪಿಗೆ ಸೂಚಿಸಿತ್ತು. ಒಪ್ಪಂದ ಪ್ರಕಾರ ಇದೀಗ ಎರಡೂ ಕಡೆ ಬಿಡುಗಡೆ ನಡೆಯುತ್ತಿದೆ.

15 ತಿಂಗಳ ಕಾಲ ಬಡಿದಾಡಿದ ನಂತರ ಕದನ ವಿರಾಮ ಘೋಷಣೆ ಮಾಡಿ, ಗಾಜಾ ಪಟ್ಟಿಯ ಜನರಿಗೆ ರಿಲೀಫ್ ನೀಡಲಾಗಿದೆ. ಆದರೆ ಕದನ ವಿರಾಮ ಇದೇ ರೀತಿ ಮುಂದುವರಿಯಲು & ಶಾಂತಿ ಮರುಸ್ಥಾಪನೆಗೆ ಇಸ್ರೇಲ್‌ನ ಅಷ್ಟೂ ಒತ್ತೆಯಾಳುಗಳು ರಿಲೀಸ್ ಆಗಬೇಕು ಎಂಬುದು ಇಸ್ರೇಲ್ ಪ್ರಧಾನಿ ಒತ್ತಾಯ. ಹೀಗಾಗಿ ಹಮಾಸ್ ಮೇಲೆ ಒತ್ತಡ ಹೇರಲಾಗಿದ್ದು, ಶನಿವಾರ ಕೂಡ 3 ಇಸ್ರೇಲಿ ಒತ್ತೆಯಾಳುಗಳನ್ನು ರಿಲೀಸ್ ಮಾಡಿದ ಹಮಾಸ್ ಕದನ ವಿರಾಮ ನಿಯಮ ಪಾಲಿಸುತ್ತಿದೆ.

Hamas Releases Three Israeli Hostages in Khan Yunis as Ceasefire Continues

ಗಾಜಾ ಪಟ್ಟಿಯಲ್ಲಿ ನಿಲ್ಲದ ಪರದಾಟ

ಯುದ್ಧ ನಿಂತಿದ್ದರೂ ಗಾಜಾ ಪಟ್ಟಿ ಭಾಗಶಃ ನಾಶವಾಗಿ ಹೋಗಿದ್ದು, ಅಲ್ಲಿನ ಜನರು ಈಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಅನ್ನ & ನೀರು ಇಲ್ಲದೇ ಅವರೆಲ್ಲಾ ಬೀದಿ ಬೀದಿಯಲ್ಲಿ ಅಲೆದಾಡುವ ಪರಿಸ್ಥಿತಿ ಇದೆ. ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ವಿವಿಧ ಭಾಗದಿಂದ ನೆರವು ಬಂದರೂ, ಅದೆಲ್ಲಾ ಗಾಜಾ ಪಟ್ಟಿ ನಿರಾಶ್ರಿತರಿಗೆ ಸಾಕಾಗುತ್ತಿಲ್ಲ. ಹೀಗಾಗಿ ಜನರ ಒದ್ದಾಟ ನಿಂತಿಲ್ಲ. ಇದರ ಜೊತೆಗೆ ಭವಿಷ್ಯದ ಚಿಂತೆ ಕೂಡ ಅಲ್ಲಿನ ಜನರಿಗೆ ಇದೀಗ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+