Gaza War: ಇಸ್ರೇಲ್ ದಾಳಿಯಲ್ಲಿ ಹಾಮಾಸ್ ನಾಯಕ ಸಾವು, ಹಿಂಸಾಚಾರ ಜೋರು?
ಗಾಜಾ ಪಟ್ಟಿಯಲ್ಲಿ ಮತ್ತೆ ರಕ್ತ ಹರಿಯುತ್ತಿದ್ದು, ಜನರು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ. ಹಮಾಸ್ & ಇಸ್ರೇಲ್ ನಡುವೆ ಗುದ್ದಾಟ ಮತ್ತೆ ಸ್ಫೋಟವಾಗಿದ್ದು, ಇಬ್ಬರ ನಡುವೆ ಜೋರಾಗಿ ಯುದ್ಧ ನಡೆಯುತ್ತಿದೆ. ಗಾಜಾ ಪಟ್ಟಿ ಮೇಲೆ ಮನಸ್ಸಿಗೆ ಬಂದಂತೆ ದಾಳಿಯನ್ನು ನಡೆಸುತ್ತಿರುವ ಇಸ್ರೇಲ್ ಸೇನೆ ಹಮಾಸ್ ನಾಯಕರ ಕಥೆ ಮುಗಿಸುತ್ತಿದೆ. ಈಗಲೂ ಅಷ್ಟೇ ಮತ್ತೊಂದು ಶಾಕ್ ಹಮಾಸ್‌ಗೆ ಸಿಕ್ಕಿದೆ.
ಅಂದಹಾಗೆ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ರಾತ್ರಿಯಿಡೀ ನಡೆಸಿದ ದಾಳಿ ಪರಿಣಾಮವಾಗಿ ಇದೀಗ 19 ಜನರು ಬಲಿಯಾಗಿದ್ದು, ಇವರಲ್ಲಿ ಹಮಾಸ್ ಸಂಘಟನೆ ರಾಜಕೀಯ ನಾಯಕ ಸೇರಿ ಹಲವರು ಜೀವ ಬಿಟ್ಟಿದ್ದಾರೆ. ಪ್ಯಾಲೆಸ್ತೀನ್ ಸಂಸತ್ ಸದಸ್ಯ & ಹಮಾಸ್ ನಾಯಕ ಸಲಾಹ್ ಬರ್ದಾವಿಲ್, ದಕ್ಷಿಣ ನಗರ ಖಾನ್ ಯೂನಿಸ್ ಬಳಿ ಮೃತಪಟ್ಟಿರುವುದು ದೃಢವಾಗಿದೆ. ಇನ್ನೂ ಹಮಾಸ್ ಪರ ಹಲವು ವರ್ಷಗಳಿಂದ ಸಲಾಹ್ ಬರ್ದಾವಿಲ್ ಮಾಧ್ಯಮ ಸಂದರ್ಶನ ನೀಡುತ್ತಾ ಬಂದಿದ್ದು, ಇದೀಗ ಇಸ್ರೇಲ್ ದಾಳಿಯಲ್ಲಿ ಜೀವ ಬಿಟ್ಟಿರುವುದು ಖಚಿತವಾಗಿದೆ.

ಅಮೆರಿಕಗೆ ಹೊಸ ತಲೆನೋವು ಶುರು?
ಒಂದು ಕಡೆ ರಷ್ಯಾ & ಉಕ್ರೇನ್ ಬಡಿದಾಡುವ ಸಮಯದಲ್ಲೇ ಇನ್ನೊಂದು ಕಡೆ ಇಸ್ರೇಲ್ & ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದರೆ ಇದು ಅಮೆರಿಕದ ನಾಯಕರಿಗೆ ತಲೆನೋವು ತರಿಸುವ ಸಾಧ್ಯತೆ ಇದೆ. ಯಾಕಂದ್ರೆ, ಮಧ್ಯಪ್ರಾಚ್ಯ ದೇಶಗಳೆಲ್ಲಾ ಸೇರಿ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಅಲ್ಲದೆ ಗಾಜಾ ಪಟ್ಟಿಯಲ್ಲಿ ಹಿಂಸೆ ನಿಲ್ಲಬೇಕು ಎಂಬುದು ಮಧ್ಯಪ್ರಾಚ್ಯ ದೇಶಗಳ ಒತ್ತಾಯವಾಗಿದೆ. ಇಂತಹ ಪರಿಸ್ಥಿತಿ ಇರುವಾಗಲೆ ಇಸ್ರೇಲ್ ದಿಢೀರ್ ಭಾರಿ ದೊಡ್ಡ ಪ್ರಮಾಣದ ದಾಳಿ ನಡೆಸುತ್ತಿದೆ. ಹೀಗಾಗಿ ತಿಕ್ಕಾಟ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡುವುದು ಮತ್ತೆ ಕಗ್ಗಂಟಾಗಿದೆ.
ಯುದ್ಧ... ಯುದ್ಧ... ಯುದ್ಧ...
ಗಾಜಾ ಪಟ್ಟಿ ಈಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಪದೇ ಪದೇ ಇಸ್ರೇಲ್ & ಹಮಾಸ್ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಆದರೆ, 2023ರ ಅಕ್ಟೋಬರ್ ತಿಂಗಳಲ್ಲಿ ದಿಢೀರ್ ಇಬ್ಬರ ಮಧ್ಯೆ ಘೋರ ಯುದ್ಧ ಅರಂಭವಾಗಿತ್ತು. ಯುದ್ಧವನ್ನು ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಇಸ್ರೇಲ್ ಮಿಲಿಟರಿ, ಇತ್ತೀಚೆಗೆ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸಿತ್ತು. ಆದರೆ ಹೀಗೆ ಯುದ್ಧ ನಿಂತು ಕೆಲ ದಿನಗಳಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದಿದೆ. ಅಲ್ಲದೆ ಈ ಬಾರಿ ಇಸ್ರೇಲ್ ಇಡೀ ಹಮಾಸ್‌ನ ನಾಶ ಮಾಡುವ ಪಣತೊಟ್ಟಿದೆ. ಹೀಗಾಗಿಯೇ ಗಾಜಾ ಪಟ್ಟಿಯಲ್ಲಿ ಜೀವನ ನಡೆಸುತ್ತಿರುವ ಜನ ಕೂಡ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ.












Click it and Unblock the Notifications