ಇಸ್ರೇಲ್ ದಾಳಿಯಲ್ಲಿ ಹಮಾಸ್‌ ನಾಯಕನ ಮಕ್ಕಳ ಸಾವು?

ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆಯುತ್ತಿದೆ. ಅದ್ರಲ್ಲೂ ಇಸ್ರೇಲ್ ವಾಯು ಸೇನೆ ದಾಳಿಗೆ ಗಾಜಾ ಪಟ್ಟಿ ನಗರ ನರಕವಾಗಿ ಬದಲಾಗಿದೆ. ಮತ್ತೊಂದು ಕಡೆ ಇಸ್ರೇಲ್ ಸೇನೆ ತನ್ನ ದಾಳಿಯನ್ನು ಮತ್ತಷ್ಟು ಭೀಕವಾಗಿಸಿ ಹಮಾಸ್ ನಾಯಕರನ್ನು ಹುಡುಕುತ್ತಿದೆ. ಹೀಗಿದ್ದಾಗಲೇ ಹಮಾಸ್ ನಾಯಕನ ಮಕ್ಕಳನ್ನೂ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಅಷ್ಟಕ್ಕೂ ಈ ಘಟನೆಯಲ್ಲಿ ಆಗಿದ್ದು ಏನು ಅಂದರೆ, ಗಾಜಾ ಮೇಲೆ ವಾಯು ದಾಳಿ ನಡೆಸಿದ ಇಸ್ರೇಲ್‌ ಸೇನೆ ಹಮಾಸ್‌ ಬಂಡುಕೋರರ ನಾಯಕ ಇಸ್ಮಾಯಿಲ್‌ ಹನಿಯೆಹ್‌ ಅವರ ಮೂವರು ಮಕ್ಕಳನ್ನು ಹತ್ಯೆ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತಾಗಿ ಹಮಾಸ್‌ ಪರ ಇರುವ ಮಾಧ್ಯಮ ಒಂದು ಮಾಹಿತಿ ಖಚಿತಪಡಿಸಿದೆ.

Hamas Leader Alleged This Against The Israel Military

ಮಕ್ಕಳನ್ನು ಹತ್ಯೆ ಮಾಡಿರುವ ಇಸ್ರೇಲ್‌ ಸೇನೆ ವಿರುದ್ಧ ಇಸ್ಮಾಯಿಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ಮಾಡಿದೆ. ಹೀಗಾಗಿ ಗಾಜಾ ಪಟ್ಟಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಹಾಗೇ ಮತ್ತೊಂದು ಕಡೆ ಮಕ್ಕಳ ಜೊತೆ ನಾಲ್ವರು ಮೊಮ್ಮಕ್ಕಳನ್ನೂ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಅಮೆರಿಕದ ಸಿಟ್ಟಿನ ನಡುವೆ ದಾಳಿ?

ಕೆಲವು ದಿನಗಳ ಹಿಂದಷ್ಟೇ ಇಸ್ರೇಲ್ ವಿರುದ್ಧ ಅಮೆರಿಕ ಗರಂ ಆಗಿತ್ತು. ಅಲ್ಲದೆ ಇಸ್ರೇಲ್‌ನ ಈ ರೀತಿಯ ದಾಳಿ ಬಗ್ಗೆ ಕೂಡ ಆಕ್ರೋಶ ಹೊರಹಾಕಿತ್ತು ಅಮೆರಿಕ. ಈ ಬೆಳವಣಿಗೆ ಮಧ್ಯೆ ಇದೀಗ ಇಸ್ರೇಲ್ ಸೇನೆ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದೆ. ಅದರಲ್ಲೂ ಈಗ, ಯುದ್ಧದ ಅಂತಿಮ ಘಟ್ಟ ತಲುಪಿದ ರೀತಿಯೇ ಇಸ್ರೇಲ್ ಪಡೆಗಳು ದಾಳಿಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿರುವುದು ಭಯ ಹುಟ್ಟಿಸಿದೆ. ಹಾಗೇ ಜಾಗತಿಕ ಮಟ್ಟದಲ್ಲಿ ಇದು, ಬಹುದೊಡ್ಡ ಚರ್ಚೆಯ ವಿಚಾರವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+