Gaza War: ಗಾಜಾದಲ್ಲಿ ಮತ್ತೊಂದು ಸುತ್ತಿನ ಕದನ ವಿರಾಮಕ್ಕೆ ಮುಂದಾದ ಹಮಾಸ್?

ಹಮಾಸ್ & ಇಸ್ರೇಲ್ ನಡುವೆ ಶಾಂತಿ ಮಾತುಕತೆ ಸರಿಹೊಂದುತ್ತಿಲ್ಲ, ಇಬ್ಬರ ನಡುವೆ ಭಾರಿ ಘೋರ ಹಿಂಸಾಚಾರ ಶುರುವಾಗಿದೆ. ಇಬ್ಬರ ಈ ಜಗಳದ ಪರಿಣಾಮ ಗಾಜಾ ಪಟ್ಟಿ ಇದೀಗ ನರಕದ ರೂಪ ಪಡೆದಿದೆ. ಇದೇ ಸಮಯದಲ್ಲಿ ಜನರು ಕೂಡ ಊರು ಬಿಟ್ಟು ಓಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಮಾಸ್ & ಇಸ್ರೇಲ್ ವಿರುದ್ಧ ಆಕ್ರೋಶ ಮೊಳಗಿದೆ. ಇಬ್ಬರ ಜಗಳದಲ್ಲಿ ಸಾಮಾನ್ಯ ಜನರ ಬದುಕು ಬೀದಿಗೆ ಬಿದ್ದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಸಮಯದಲ್ಲೇ ಕದನ ವಿರಾಮದ ಬಗ್ಗೆ ಹಮಾಸ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, ಗಾಜಾ ಪಟ್ಟಿಯಲ್ಲಿ ಎಷ್ಟು ಬೇಗ ಯುದ್ಧ ನಿಲ್ಲುತ್ತದೋ ಅಷ್ಟು ಬೇಗ ಮಧ್ಯಪ್ರಾಚ್ಯ ಸಾಮಾಧಾನ & ಶಾಂತಿಯಿಂದ ಬದುಕಲು ಸಾಧ್ಯವಿದೆ. ಹೀಗಾಗಿ ಗಾಜಾ ಪಟ್ಟಿ ಯುದ್ಧವನ್ನ ನಿಲ್ಲಿಸಲು ಜಾಗತಿಕ ಮಟ್ಟದಲ್ಲಿ ಅನೇಕ ದೇಶಗಳು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಸಾಲು ಸಾಲು ಸಭೆಗಳು ನಡೆಯುತ್ತಿದ್ದರು ಪ್ರಯೋಜನಕ್ಕೆ ಬರುತ್ತಿಲ್ಲ. ವಾತಾವರಣ ಕೈಮೀರಿ ಹೋಗುತ್ತಿರುವ ಸಮಯದಲ್ಲೇ ಕದನ ವಿರಾಮ ಘೋಷಣೆ ಬಗ್ಗೆ ಇದೀಗ ಹಮಾಸ್ ಮಹತ್ವದ ಘೋಷಣೆ ಹೊರಡಿಸಿದೆ.

Hamas Approves Ceasefire Plan in Gaza Amid Ongoing Conflict

ಕದನ ವಿರಾಮಕ್ಕೆ ಮುಂದಾದ ಹಮಾಸ್?

ಇಸ್ರೇಲ್ ಜೊತೆ ಮಾತುಕತೆ ನಡೆಸಿ, ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮೂಲಕ ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ನಿಲ್ಲಿಸಲು ಇದೀಗ ಹಮಾಸ್ ನಿರ್ಧಾರ ಕೈಗೊಂಡಿದೆ. ಈ ಮೂಲಕ ಗಾಜಾ ಜನರು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದಾರೆ. ಹಮಾಸ್ ಕದನ ವಿರಾಮದ ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದು, ಅತಿ ಶೀಘ್ರದಲ್ಲೇ ಯುದ್ಧ ನಿಲ್ಲುವುದು ಈ ಮೂಲಕ ಪಕ್ಕಾ ಆಗುತ್ತಿದೆ. ಮತ್ತೊಂದು ಕಡೆ, ರಂಜಾನ್ ಸಮಯದಲ್ಲಿ ದಾಳಿಗೆ ಬ್ರೇಕ್ ಹಾಕಬೇಕು ಎಂದು ಇಸ್ರೇಲ್ ಮೇಲೆ ಒತ್ತಡ ಜಾಸ್ತಿ ಆಗುತ್ತಿದೆ.

ಅಮೆರಿಕ ಮಾಡಿರುವ ಪ್ಲಾನ್ ಏನು?

ಒಂದು ಕಡೆ ರಷ್ಯಾ & ಉಕ್ರೇನ್ ಬಡಿದಾಡುವ ಸಮಯಕ್ಕೆ ಇನ್ನೊಂದು ಕಡೆ ಇಸ್ರೇಲ್, ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.ಇದು ಅಮೆರಿಕಗೆ ತಲೆನೋವು ತರಿಸುವ ಸಾಧ್ಯತೆ ಇದೆ. ಯಾಕಂದ್ರೆ ಮಧ್ಯಪ್ರಾಚ್ಯ ದೇಶಗಳೆಲ್ಲ ಸೇರಿ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಅಲ್ಲದೇ ಗಾಜಾ ಪಟ್ಟಿಯಲ್ಲಿ ಹಿಂಸೆ ನಿಲ್ಲಬೇಕು ಎಂಬುದು ಮಧ್ಯಪ್ರಾಚ್ಯ ದೇಶಗಳ ಒತ್ತಾಯ ಕೂಡ ಆಗಿದೆ. ಈ ಪರಿಸ್ಥಿತಿ ಇರುವಾಗಲೇ ಇಸ್ರೇಲ್ ದಿಢೀರ್ ಭಾರಿ ದೊಡ್ಡ ಪ್ರಮಾಣದ ದಾಳಿ ನಡೆಸುತ್ತಿದೆ. ಹಮಾಸ್ ಕೂಡ ಕದನ ವಿರಾಮಕ್ಕೆ ಇದೀಗ ಮೊದಲ ಸಂದೇಶ ರವಾನೆ ಮಾಡಿದ್ದು, ಇದನ್ನ ಇಸ್ರೇಲ್ ಒಪ್ಪಿಕೊಳ್ಳುತ್ತಾ? ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+