ಹೈಟಿಯಲ್ಲಿ ಪ್ರಬಲ ಭೂಕಂಪ, ಸತ್ತವರ ಸಂಖ್ಯೆ 304ಕ್ಕೆ ಏರಿಕೆ

ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 304ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು, ನೋಡನೋಡುತ್ತಿದ್ದಂತೆಯೇ ನೂರಾರು ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಿಂದ 160 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪವಾಗ್ತಿದ್ದಂತೆಯೇ ಎಲ್ಲರೂ ತಮ್ಮ ತಮ್ಮ ಮನೆಗಳನ್ನ ಬಿಟ್ಟು ಹೊರಗೆ ಓಡೋಡಿ ಬಂದಿದ್ದಾರೆ. ಆದರೆ ಮನೆಯಲ್ಲೇ ಇದ್ದವರು ಅವಶೇಷಗಳಡಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ.

Haiti Searches For Survivors After Earthquake Kills At Least 304

ನೂರಾರು ಮಂದಿ ಭೂಕಂಪಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಸದ್ಯ ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಭೂಕಂಪದಿಂದ ಹೈಟಿಯಲ್ಲಿ ತರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಬಲ ಭೂಕಂಪದಿಂದ ಸುಮಾರು 304 ಜನ ಮೃತಪಟ್ಟಿದ್ದು, ಸಾವಿರಾರು ಜನರಿಗೆ ಗಾಯಗಳಾಗಿವೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಭರದಿಂದ ಮುಂದುವರೆದಿದೆ. ಭೂಕಂಪದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು ಹೈಟಿಯಲ್ಲಿ ಒಂದು ತಿಂಗಳು ತುರ್ತು ಪರಿಸ್ಥಿತಿ ಹೇರುತ್ತಿರುವುದಾಗಿ ಅಲ್ಲಿನ ಪ್ರಧಾನಿ ಏರಿಯಲ್ ಹೆನ್ರಿ ಘೋಷಿಸಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.2ರಷ್ಟು ದಾಖಲಾಗಿದ್ದು, ಹೈಟಿ ದೇಶದ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ ನಗರದಲ್ಲಿ ವಾಸಿಸುವ ಜನರು ಭೂಕಂಪಕ್ಕೆ ಬೆದರಿ ಮನೆಯಿಂದ ಆಚೆ ಓಡಿ ಬಂದಿದ್ದಾರೆ. ಏಕಾಏಕಿ ಭೂಮಿ ಜೋರಾಗಿ ಅಲುಗಾಡಿದ ಅನುಭವ ಆಗಿದೆ. ತಕ್ಷಣವೇ ಈ ಹಿಂದೆ ಆಗಿದ್ದ ಭೂಕಂಪಗಳ ನೆನಾಯಿತು ಎಂದು ಹೇಳಿಕೊಂಡಿದ್ದಾರೆ.

ಒಮ್ಮೆಲೆ ಭೂಮಿ ಕಂಪಿಸಿದ್ದರಿಂದ ಅನೇಕರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಹಾಸಿಗೆಯಲ್ಲಿ ಮಲಗಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಭೂಮಿ ಜೋರಾಗಿ ನಡುಗುತ್ತಿದೆ ಎಂಬ ಅನುಭವವಾಯಿತು.

ಈ ಹಿಂದೆ 2010ರಲ್ಲಿ ಉಂಟಾಗಿದ್ದ ಭೂಕಂಪದಿಂದ ನಮ್ಮ ಕುಟುಂಬ ಹೇಗೋ ಪಾರಾಗಿದೆ. ತಕ್ಷಣವೇ ನಮಗೆ ಅಂದಿನ ನೆನಪಾಯಿತು. ತಡಮಾಡದೇ ಮನೆಬಿಟ್ಟು ಹೊರಗೆ ಓಡಿಬಂದೆ.

ನಾನು ಮಾತ್ರವಲ್ಲದೇ ಮನೆಯೊಳಗೆ ತಾಯಿ ಮತ್ತು ನನ್ನ ಇಬ್ಬರು ಮಕ್ಕಳು ಇದ್ದರು. ನೆರೆ ಮನೆಯವರು ಅವರಿಗೆ ಮನೆಯಿಂದ ಆಚೆಗೆ ಓಡಿಬರುವಂತೆ ಸೂಚಿಸಿದರು. ಗಾಬರಿಯಿಂದ ಎಲ್ಲರೂ ಹೊರಗೆ ಓಡಿಬಂದು ರಸ್ತೆಯತ್ತ ಓಡಿ ಹೋದೆವು ಎಂದು ಭೂಕಂಪವನ್ನು ಅನುಭವಿಸಿದ ಸ್ಥಳೀಯ ನಿವಾಸಿ ನಯೋಮಿ ವೆರ್ನಿಯಸ್ ಆ ಕ್ಷಣದಲ್ಲಿ ತಮಗಾದ ಆತಂಕವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಸುಮಾರು 1,800ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದ್ದು, ಪ್ರಧಾನಿ ಏರಿಯಲ್​ ಹೆನ್ರಿ ಜನರಿಗೆ ಧೈರ್ಯ ತುಂಬಿದ್ದು ಸಹಾಯಕ್ಕೆ ಧಾವಿಸುವುದಾಗಿ ಹೇಳಿದ್ದಾರೆ. ಅನೇಕ ಪ್ರದೇಶಗಳು ತೀವ್ರ ಸ್ವರೂಪದಲ್ಲಿ ಹಾನಿಗೊಂಡಿದ್ದು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕಂಪನದ ಕೇಂದ್ರ ಬಿಂದು ಪೋರ್ಟ್-ಔ-ಪ್ರಿನ್ಸ್‌ ನಗರದಿಂದ ಪಶ್ಚಿಮ ಭಾಗದ 125 ಕಿಲೋಮೀಟರ್​ (78 ಮೈಲಿ) ದೂರದಲ್ಲಿದೆ ಎಂದು ಯುಎಸ್​ ಜಿಯೋಲಾಜಿಕಲ್​ ಸರ್ವೇ ತಿಳಿಸಿದೆ.

ಕೆರೆಬಿಯನ್ ರಾಷ್ಟ್ರಗಳಾದ ಕ್ಯೂಬಾ, ಜೈಕಾದಲ್ಲೂ ಸಹ ಭೂಕಂಪದ ಅನುಭವವಾಗಿದೆ, ಸೋಷಿಯಲ್ ಮೀಡಿಯಾಗಳಲ್ಲಿ ಭೂಕಂಪದಿಂದಾದ ಅನಾಹುತ, ರಕ್ಷಣಾ ಕಾರ್ಯದ ಫೋಟೊಗಳು ಹರಿದಾಡುತ್ತಿವೆ. 19ನೇ ಶತಮಾನದ ಕಟ್ಟಡ ಸೇಂಟ್ ಲೂಯಿಸ್ ಕಿಂಗ್ ಆಫ್ ಫ್ರಾನ್ಸ್‌ನ ಕೆಥೆಡ್ರೆಲ್ ಸಹ ಭೂಕಂಪದಿಂದ ಹಾನಿಗೊಂಡಿರುವುದಾಗಿ ವರದಿಯಾಗಿದೆ.

2010ರಲ್ಲಿ 7.0 ತೀವ್ರತೆಯ ಭೂಕಂಪ ಹೈಟಿಯಲ್ಲಿ ಸಂಭವಿಸಿತ್ತು, ದುರಂತವೆಂದರೆ 2 ಲಕ್ಷ ಮಂದಿ ಭೂಕಂಪದಿಂದ ಸಾವನ್ನಪ್ಪಿದ್ದರು ಎಂದು ಅಂದಾಜಿಸಲಾಗಿತ್ತು.

ಭೂಕಂಪದಿಂದ ಬಾಧಿತವಾಗಿರುವ ನಗರ ಹಾಗೂ ಪಟ್ಟಣಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದ್ದು, ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ ಎಂದು ಪ್ರಧಾನಿ ಏರಿಯಲ್ ಹೆನ್ರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+