ಕೆನಡಾ ಮಸೀದಿಯಲ್ಲಿ ಗನ್ ಫೈರ್: ಐವರ ಸಾವು
ಇತ್ತೀಚಿನ ವರ್ಷಗಳಲ್ಲಿ ಕೆನಡಾದಲ್ಲಿ ಮತಾಂಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಕ್ಯೂಬೆಕ್ ಮಸೀದಿ ದಾಳಿ ಇದಕ್ಕೊಂದು ತಾಜಾ ಉದಾಹರಣೆಯಷ್ಟೇ.
ಕ್ಯೂಬೆಕ್, ಜನವರಿ 30 : ನಗರದ ಕ್ಯೂಬೆಕ್ ಸಿಟಿ ಇಸ್ಲಾಮಿಕ್ ಕಲ್ಚರ್ ಸೆಂಟರ್ ನಲ್ಲಿರುವ ಮಸೀದಿಯೊಂದರಲ್ಲಿ ನಾಲ್ವರು ವ್ಯಕ್ತಿಗಳು ಏಕಾಏಕಿ ನಡೆಸಿದ ಗುಂಡಿನ ದಾಳಿಗೆ ಐವರು ಬಲಿಯಾಗಿದ್ದಾರೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನದ ಪ್ರಕಾರ, ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ) ಮಸೀದಿಗೆ ಎಂದಿನಂತೆ ಪ್ರಾರ್ಥನೆಗಾಗಿ ಬಂದ ಜನರ ಮೇಲೆ ಈ ದಾಳಿಯಾಗಿದೆ.
ಆರಂಭದಲ್ಲಿ ಬಂದ ವರದಿಗಳ ಪ್ರಕಾರ, ಕಲ್ಚರ್ ಸೆಂಟರ್ ನಲ್ಲಿರುವ ಮಸೀದಿಗೆಯಲ್ಲಿ ಸುಮಾರು 40 ಜನರು ಸಂಜೆಯ ಪ್ರಾರ್ಥನೆಗಾಗಿ ಬಂದಿದ್ದರು. ಆಗ, ಮಸೀದಿಯೊಳಕ್ಕೆ ಏಕಾಏಕಿ ನುಗ್ಗಿದ ಐವರು ವ್ಯಕ್ತಿಗಳು ಗುಂಡಿನ ಮಳೆಗಳೆರೆದು ಪರಾರಿಯಾಗಿದ್ದಾರೆ.
ಯಂಗುನಿ ಎಂಬ ಪ್ರತ್ಯಕ್ಷದರ್ಶಿಯ ಪ್ರಕಾರ, ಪ್ರಾರ್ಥನೆ ಆರಂಭವಾಗುವ ವೇಳೆಗೆ ಗುಂಡಿನ ದಾಳಿಯಾಗಿದೆ. ಎಂದಿನಂತೆ ಯಂಗುನಿ ಕೂಡ ಮಸೀದಿಗೆ ಪ್ರಾರ್ಥನೆಗಾಗಿ ಬಂದಿದ್ದರು. ಆದರೆ, ಅವರಿನ್ನೂ ಮಸೀದಿ ಪ್ರವೇಶಿಸುವ ಮುನ್ನವೇ ಒಳಗಡೆಯಿಂದ ಗುಂಡಿನ ಸದ್ದು ಹಾಗೂ ಜನರ ಕೂಗಾಟ, ಅರಚಾಟಗಳು ಕೇಳಿದವು. ತಕ್ಷಣವೇ ಅವರು ರಕ್ಷಣೆಗಾಗಿ ಹೊರಗೋಡಿ ಬಂದಿದ್ದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಹಂದಿಯೊಂದರ ತಲೆಯನ್ನು ಈ ಮಸೀದಿಯ ಹೊಸ್ತಿಲಲ್ಲಿ ಇಡಲಾಗಿತ್ತು.












Click it and Unblock the Notifications