Guillain-Barre Syndrome: ಅಪರೂಪದ ಕಾಯಿಲೆಗೆ ಬೆಚ್ಚಿ ಬಿದ್ದ ಪೆರು, ತುರ್ತುಸ್ಥಿತಿ ಘೋಷಣೆ
ಲಿಮಾ, ಜುಲೈ. 11: ಪೇರು ದೇಶದಲ್ಲಿ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾದ ಗ್ವಿಲೆನ್-ಬಾರ್ರೆ ಸಿಂಡ್ರೋಮ್ ಸೋಂಕಿತ ಪ್ರಕರಣಗಳಲ್ಲಿ ಹೆಚ್ಚಳವಾಗಿವೆ. ಈ ಕಾರಣದಿಂದ ಪೆರುವಿಯನ್ ಸರ್ಕಾರವು ರಾಷ್ಟ್ರವ್ಯಾಪಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ದೇಶದ ಆರೋಗ್ಯ ಸಚಿವಾಲಯ ಏಕಾಏಕಿ 90 ದಿನಗಳ ಅವಧಿಗೆ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಪೆರುವಿನಲ್ಲಿ ಈ ಗ್ವಿಲೆನ್-ಬಾರ್ರೆ ಸಿಂಡ್ರೋಮ್ ಪ್ರಕರಣಗಳಲ್ಲಿ "ಅಸಾಮಾನ್ಯ ಹೆಚ್ಚಳ" ವನ್ನು ಅಧಿಕಾರಿಗಳು ಗಮನಿಸಿದ್ದು, ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ 2023 ರಿಂದ, ಪೆರುವಿನಲ್ಲಿ ರಾಷ್ಟ್ರವ್ಯಾಪಿ 182 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 147 ಕೇಸ್‌ಗಳು ಡಿಸ್ಚಾರ್ಜ್ ಆಗಿವೆ. 31 ಮಂದಿ ಆಸ್ಪತ್ರೆಯಲ್ಲಿ ಉಳಿದಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು MercoPress ಸುದ್ದಿ ಸಂಸ್ಥೆ ತಿಳಿಸಿದೆ.

ಗ್ವಿಲೆನ್-ಬಾರ್ರೆ ಸಿಂಡ್ರೋಮ್ ಎಂದರೇನು?
Guillain-Barré ಸಿಂಡ್ರೋಮ್ ಅಪರೂಪದ ಅಸ್ವಸ್ಥತೆಯಾಗಿದ್ದು, ಇದರಲ್ಲಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು (ಇಮ್ಯೂನ್ ಸಿಸ್ಟಮ್) ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ. ಇದು ಗಂಭೀರವಾದ ಸ್ಥಿತಿಯಾಗಿದ್ದು, ತಕ್ಷಣದ ಆಸ್ಪತ್ರೆಗೆ ದಾಖಲಾಗಿವ ಅಗತ್ಯವಿರುತ್ತದೆ. ಏಕೆಂದರೆ ಪ್ರತಿರಕ್ಷಣಾ ವ್ಯವಸ್ಥೆಯ ದಾಲಿಯಾದ ಕಾರಣ ರೋಗಿಯ ಸ್ಥಿತಿಯನ್ನು ತ್ವರಿತವಾಗಿ ಹದಗೆಡಿಸುತ್ತದೆ.
ಪ್ರಕರಣಗಳಲ್ಲಿ ದಿಢೀರ್ ಏರಿಕೆ ಏಕೆ?
ಈ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲು "ಇಮ್ಯುನೊಗ್ಲಾಬ್ಯುಲಿನ್ ಕೊರತೆ" (ಪ್ರತಿಕಾಯಗಳು) ಕಾರಣ ಎಂದು ಪೆರುವಿನ ಆರೋಗ್ಯ ಸಚಿವ ಸೀಸರ್ ವಾಸ್ಕ್ವೆಜ್ ಹೇಳಿದ್ದಾರೆ. ಅವರ ಮನವಿ ಮೇರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.
Guillain-Barre ಸಿಂಡ್ರೋಮ್‌ಗೆ ನಿಖರವಾದ ಕಾರಣವು ಪ್ರಸ್ತುತ ತಿಳಿದಿಲ್ಲ. ಆದರೆ, ಈ ಸ್ಥಿತಿಯನ್ನು ಹೊಂದಿರುವ ಮೂರನೇ ಎರಡರಷ್ಟು ರೋಗಿಗಳು ಹಿಂದಿನ ಆರು ವಾರಗಳಲ್ಲಿ ಸೋಂಕಿನ ಲಕ್ಷಣಗಳನ್ನು ವರದಿ ಮಾಡಿದ್ದಾರೆ. ಈ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು COVID-19, ಉಸಿರಾಟದ ಸೋಂಕು, ಜಠರಗರುಳಿನ ಸೋಂಕು, ಅಥವಾ ಝೀಕಾ ವೈರಸ್ ಅನ್ನು ಒಳಗೊಂಡಿವೆ.

ಪೆರುವಿನಲ್ಲಿ ಸ್ಥಿತಿಗೆ ಚಿಕಿತ್ಸೆ ನೀಡುವ ಕ್ರಮಗಳು
ಸಾಮಾನ್ಯವಾಗಿ, ಗ್ವಿಲಿನ್ ಬ್ಯಾರೆ ಸಿಂಡ್ರೋಮ್‌ಗೆ ಯಾವುದೇ ಚಿಕಿತ್ಸಾ ವಿಧಾನವಿಲ್ಲ. ಇನ್ನೂ, ಚಿಕಿತ್ಸೆಯು ರೋಗಲಕ್ಷಣಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಅನಾರೋಗ್ಯದ ತೀವ್ರತೆ ಮತ್ತು ಅವಧಿಯನ್ನು ಕಡಿಮೆ ಮಾಡುತ್ತದೆ.
ರೋಗದ ಲಕ್ಷಣಗಳು
ಆರೋಗ್ಯ ತಜ್ಞರ ಪ್ರಕಾರ, ಗ್ವಿಲೆನ್-ಬಾರ್ರೆ ಸಿಂಡ್ರೋಮ್‌ನ ಮೊದಲ ಲಕ್ಷಣಗಳು ಸ್ನಾಯುಗಳಲ್ಲಿನ ದೌರ್ಬಲ್ಯ ಮತ್ತು ನಿಮ್ಮ ಕೈ ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ. ಈ ಸ್ಥಿತಿಯಿಂದ ನಮ್ಮ ನರಗಳು, ಬೆನ್ನುಹುರಿ ಮತ್ತು ಮೆದುಳಿಗೆ ಸ್ಪರ್ಶ ಸಂವೇದನೆಗಳಂತಹ ಕೆಲವು ಮಾಹಿತಿಯನ್ನು ಕಳುಹಿಸುವುದನ್ನು ತಡೆಯುತ್ತದೆ. ಇದರಿಂದ ದೇಹವು ಮರಗಟ್ಟುವಿಕೆಯಂತಾಗುತ್ತದೆ. ಮೆದುಳು ಮತ್ತು ಬೆನ್ನುಹುರಿ ದೇಹಕ್ಕೆ ಯಾವುದೇ ಸಂಕೇತಗಳನ್ನು ರವಾನಿಸುವುದಿಲ್ಲ, ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು.
ಇತರ ರೋಗಲಕ್ಷಣಗಳೆಂದರೇ, ಮಾತನಾಡುವಲ್ಲಿ ತೊಂದರೆ, ಅಗಿಯಲು ಅಥವಾ ನುಂಗಲು ಆಗದಿರುವುದು, ತ್ವರಿತ ಹೃದಯ ಬಡಿತ, ಕಡಿಮೆ ಅಥವಾ ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆ ಕಾಣಿಸುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಜನರು ಪಾರ್ಶ್ವವಾಯುವಿಗೆ ಒಳಗಾಗಬಹುದು ಅಥವಾ ತಕ್ಷಣವೇ ಮೃತಪಡಬಹುದು.

ಚೇತರಿಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಆರೋಗ್ಯ ತಜ್ಞರ ಪ್ರಕಾರ ಹೆಚ್ಚಿನ ರೋಗಿಗಳು 2-3 ವಾರಗಳಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಾರೆ. ಆದರೆ, ಕೆಲವರು ಪೂರ್ಣ ಚೇತರಿಕೆ ಕಾಣಲು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಕೆಲವು ಜನರು ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು, ಆದರೆ ಕೆಲವು ರೋಗಿಗಳು ಶಾಶ್ವತ ನರ ಹಾನಿಯೊಂದಿಗೆ ಬದುಕಬೇಕಾಗುತ್ತದೆ. ಕೆಲವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಡಬಹುದು.
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications