Get Updates
Get notified of breaking news, exclusive insights, and must-see stories!

Greenland And Denmark: ಅಮೆರಿಕ ಜೊತೆ ಒಪ್ಪಂದ, ಯುರೋಪ್ ನಾಯಕರೊಂದಿಗೆ ಗ್ರೀನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಚರ್ಚೆ

ಅಮೆರಿಕ ಇನ್ನೇನು ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಸೇನಾ ಕಾರ್ಯಾಚರಣೆ ನಡೆಸಿಬಿಡುತ್ತೆ ಎನ್ನುವ ಭಾರಿ ಗಂಭೀರ ವಾತಾವರಣ, ಆತಂಕ ಎದುರಾಗಿದ್ದ ಸಮಯದಲ್ಲೇ ಎಲ್ಲಾ ತಣ್ಣಗಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠ ಮಾಡಿ ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಒದ್ದಾಡಿದರೂ ಸಕ್ಸಸ್ ಆಗಲಿಲ್ಲ. ಕೊನೆಯ ಹಂತದಲ್ಲಿ ಅಮೆರಿಕ ಅಧ್ಯಕ್ಷರು ಕೂಡ ಸೈಲೆಂಟ್ ಆಗಿ ತಮ್ಮ ನಿರ್ಧಾರ ಹಿಂತೆಗೆದುಕೊಂಡರು. ಇದಕ್ಕೆಲ್ಲಾ ನ್ಯಾಟೋ ನಾಯಕರು ಕಾರಣ ಎನ್ನಲಾಗುತ್ತಿದ್ದು, ಯುರೋಪ್ ಒಕ್ಕೂಟ ಸಾಕಷ್ಟು ಪ್ರಯತ್ನಪಟ್ಟು ಗ್ರೀನ್‌ಲ್ಯಾಂಡ್ ಸ್ವಾತಂತ್ರ್ಯ ಉಳಿಸಿದೆ. ಹೀಗಿದ್ದಾಗ, ಅಮೆರಿಕ ಜೊತೆ ಒಪ್ಪಂದ ಹಿನ್ನೆಲೆ ಯುರೋಪ್ ನಾಯಕರೊಂದಿಗೆ ಗ್ರೀನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಚರ್ಚೆ ನಡೆಸಿವೆ.

ಕಿರಿಕ್ ಇಲ್ಲದೆ ಟ್ರಂಪ್ ಅವರ ಆಡಳಿತ ಇಲ್ಲ, ಟ್ರಂಪ್ ಅವರ ಆಡಳಿತದಲ್ಲಿ ಕಿರಿಕ್ ಆಗಲೇಬೇಕೆಂಬ ವಾತಾವರಣ ಇದೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಹಲವಾರು ಕಿರಿಕ್ ಆಗಿ ಹೋಗಿವೆ. ಪರಿಣಾಮ ಈಗಾಗಲೇ ಜಾಗತಿಕ ಮಟ್ಟದಲ್ಲಿ ಅಮೆರಿಕ ವಿಲನ್ ಆಗಿದೆ. ಈ ಸಮಯ ಬಳಸಿ ವಿರೋಧಿಗಳು ಅಮೆರಿಕ ವಿರುದ್ಧ ಏನೇನೋ ಹೇಳುತ್ತಿದ್ದಾರೆ, ಎಂದು ಸ್ವತಃ ಅಮೆರಿಕದಲ್ಲೇ ಟ್ರಂಪ್ ಅವರ ನಡೆಯ ವಿರುದ್ಧ ಆಕ್ರೋಶ ಮೊಳುಗತ್ತಿದೆ. ಇಷ್ಟೆಲ್ಲಾ ಆಗಿದ್ದರೂ ಗ್ರೀನ್‌ಲ್ಯಾಂಡ್ ನಮಗೆ ಬೇಕು ಎಂದು ಅತ್ತ ಟ್ರಂಪ್ ಅವರು ಹಠ ಹಿಡಿದು ಕೂತಿದ್ದರು, ಹೀಗಿದ್ದಾಗ ಭಾರಿ ದೊಡ್ಡ ತಲ್ಲಣ ಏರ್ಪಟ್ಟಿತ್ತು. ಆದರೆ ಕೊನೆಗೂ ಅದನ್ನ ತಣ್ಣಗೆ ಮಾಡುವಲ್ಲಿ ಯುರೋಪ್ ಒಕ್ಕೂಟ ಯಶಸ್ವಿಯಾಗಿದೆ. ಇದು ಗ್ರೀನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ನಾಯಕರಿಗೆ ಸಮಾಧಾನ ತಂದಿದೆ.

Greenland And Denmark

ಯುರೋಪ್ ಒಕ್ಕೂಟದ ಬಲ ಅಗತ್ಯ

ಆರ್ಕ್ಟಿಕ್ ದ್ವೀಪದ ಜೊತೆಗೆ ಮಾತುಕತೆ ವಿಚಾರದಲ್ಲಿ ಅಮೆರಿಕ ಈಗ ಒಂದಷ್ಟು ಮುಕ್ತವಾಗಿದೆ, ಹೀಗೆ ಹೊಸ ಬೆಳವಣಿಗೆಗಳ ನಂತರ ಯುರೋಪ್ ಬೆಂಬಲ ಪಡೆಯಲು ಮಹತ್ವದ ಪ್ಲಾನ್ ಮಾಡಲಾಗಿದೆ. ಇದೇ ಕಾರಣಕ್ಕೆ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ ನಾಯಕರು ಬರ್ಲಿನ್ ಮತ್ತು ಪ್ಯಾರಿಸ್‌ನಲ್ಲಿ ಮಹತ್ವದ ಸಭೆಗಳನ್ನು ನಡೆಸುತ್ತಿದ್ದಾರೆ. ಈಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರೂ ಭವಿಷ್ಯದಲ್ಲಿ ಮತ್ತೆ ಇದೇ ಸವಾಲು ಎದುರಾದರೆ ಕಷ್ಟ ಎಂಬುದು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ ನಾಯಕರಿಗೆ ಚನ್ನಾಗಿ ಅರ್ಥ ಆಗಿದೆ. ಇದೆಲ್ಲವನ್ನೂ ಅಳೆದು & ತೂಗಿ ಇದೀಗ ಯುರೋಪ್ ಒಕ್ಕೂಟದಿಂದ ಗಟ್ಟಿ ಬೆಂಬಲ ಪಡೆಯಲು ಮುಂದಾಗಿದ್ದಾರೆ.

ಜಗತ್ತಿನ ಅತಿದೊಡ್ಡ ದ್ವೀಪದ ಮೇಲೆ ಕಣ್ಣು

ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್ ಸಾಮ್ರಾಜ್ಯದ ಭಾಗವಾಗಿದ್ದು, ತನ್ನದೇ ಸ್ವಂತ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಹೊಂದಿರುವ ನೆಲವಾಗಿದೆ. ಹೀಗಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲ ದಿನಗಳ ಹಿಂದೆ ನೇರವಾಗಿ ಇಡೀ ಗ್ರೀನ್‌ಲ್ಯಾಂಡ್ ನೆಲವನ್ನೇ ಅಮೆರಿಕದ ಸುಪರ್ದಿಗೆ ಪಡೆಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಈ ಪೈಕಿ ನೇರವಾಗಿ ಅಮೆರಿಕ ಸೇನೆಯನ್ನು ಗ್ರೀನ್‌ಲ್ಯಾಂಡ್‌ಗೆ ಕಳಿಸಿ, ವಶಕ್ಕೆ ಪಡೆಯಲು ಪ್ಲಾನ್ ಆಗಿತ್ತು. ಈ ನಿರ್ಧಾರ ಇಡೀ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸುವ ಜೊತೆಗೆ ಯುರೋಪ್ ದೇಶಗಳು ನಡುಗುವಂತೆ ಮಾಡಿತ್ತು.

ರಾಷ್ಟ್ರೀಯ ಭದ್ರತಾ ಉದ್ದೇಶಗಳಿಗಾಗಿ ಗ್ರೀನ್‌ಲ್ಯಾಂಡ್‌ನ ನಿಯಂತ್ರಣದ ಅಗತ್ಯವಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ತಮ್ಮ ನಿರ್ಧಾರ ಸಮರ್ಥನೆ ಮಾಡುತ್ತಾ, ಚೀನಾ ಮತ್ತು ರಷ್ಯಾ ಭವಿಷ್ಯದಲ್ಲಿ ದ್ವೀಪದ ಮೇಲೆ ಅಟ್ಯಾಕ್ ಮಾಡಬಹುದು ಎಂದು ಆತಂಕ ಕೂಡ ವ್ಯಕ್ತಪಡಿಸಿದ್ದರು. ಆದರೂ ಅಂತಿಮವಾಗಿ ಗ್ರೀನ್‌ಲ್ಯಾಂಡ್ ತಂಟೆಗೆ ಹೋಗದೇ ಇರಲು ಮಹತ್ವದ ನಿರ್ಧಾರ ಮಾಡಿದ್ದರು. ಆ ಭೂಪ್ರದೇಶವನ್ನು ವಶಕ್ಕೆ ಪಡೆಯಲು ಬಲಪ್ರಯೋಗ ಮಾಡಲ್ಲ ಎಂದು ದೃಢಪಡಿಸಿದ್ದರು. ಇಷ್ಟೆಲ್ಲದರ ಬೆನ್ನಲ್ಲೇ ಮತ್ತೆ ಇಂತಹ ಪರಿಸ್ಥಿತಿ ಬರಬಾರದು ಎಂದು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ ನಾಯಕರು ಯುರೋಪ್‌ನ ಪ್ರಮುಖ ದೇಶಗಳ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+