ಉಕ್ರೇನ್ ಮೇಲೆ ರಷ್ಯಾ ಬಾಂಬ್ ದಾಳಿಗೆ ಹಸಿರು ನಿಶಾನೆ ತೋರಿತೇ ನ್ಯಾಟೋದ ಈ ನಿರ್ಧಾರ?

ಕೀವ್, ಮಾರ್ಚ್ 5: ಉಕ್ರೇನ್ ಮೇಲೆ ಹಾರಾಟ-ನಿಷೇಧ ವಲಯವನ್ನು ಸ್ಥಾಪಿಸುವ ಮನವಿಯನ್ನು ತಿರಸ್ಕರಿಸಿದ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ನಡೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಟುವಾಗಿ ಟೀಕಿಸಿದ್ದಾರೆ.

ದೂರದರ್ಶನದ ಭಾಷಣದಲ್ಲಿ, "ನ್ಯಾಟೋ ನಿರ್ಧಾರದಿಂದ ರಷ್ಯಾಕ್ಕೆ "ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್ ದಾಳಿಗೆ ಹಸಿರು ನಿಶಾನೆಯನ್ನು ತೋರಿದಂತೆ ಆಗುತ್ತದೆ," ಎಂದು ಹೇಳಿದ್ದಾರೆ.

"ಇಂದು ನ್ಯಾಟೋ ಶೃಂಗಸಭೆ, ದುರ್ಬಲ ಶೃಂಗಸಭೆ, ಗೊಂದಲಮಯ ಶೃಂಗಸಭೆ ಆಗಿ ಕಂಡುಬಂದಿದೆ. ಅಲ್ಲಿ ಪ್ರತಿಯೊಬ್ಬರೂ ಯುರೋಪಿಯನ್ ಸ್ವಾತಂತ್ರ್ಯವನ್ನು ಮೊದಲ ಗುರಿಯಾಗಿ ಪರಿಗಣಿಸುವುದಿಲ್ಲ," ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

ರಷ್ಯಾ ಬಾಂಬ್ ದಾಳಿಗೆ ಮತ್ತಷ್ಟು ಅವಕಾಶ

ರಷ್ಯಾ ಬಾಂಬ್ ದಾಳಿಗೆ ಮತ್ತಷ್ಟು ಅವಕಾಶ

"ಇಂದು, ನ್ಯಾಟೋ ಒಕ್ಕೂಟವು ಉಕ್ರೇನ್ ಪ್ರದೇಶದಲ್ಲಿ ಹಾರಾಟ-ನಿಷೇಧ ವಲಯವನ್ನು ಸ್ಥಾಪಿಸಲು ನಿರಾಕರಿಸಿದೆ. ಆ ಮೂಲಕ ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್ ದಾಳಿಗೆ ಹಸಿರು ನಿಶಾನೆಯನ್ನು ತೋರಿಸಿದಂತೆ ಆಗಿದೆ," ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಕಟುವಾಗಿ ದೂಷಿಸಿದ್ದಾರೆ. ಇದಕ್ಕೂ ಮೊದಲು, ಫೆಬ್ರವರಿ 24ರಂದು ರಷ್ಯಾ ಭೂಮಿ, ಸಮುದ್ರ ಮತ್ತು ವಾಯುಮಾರ್ಗದ ಮೂಲಕ ದೇಶವನ್ನು ಆಕ್ರಮಿಸಿದ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ಸ್ಥಾಪಿಸಲು ನ್ಯಾಟೋಗೆ ಮನವಿ ಮಾಡಿದ್ದರು.

ನ್ಯಾಟೋ ನಿರ್ಧಾರದ ಹಿಂದಿನ ಕಾರಣ?

ನ್ಯಾಟೋ ನಿರ್ಧಾರದ ಹಿಂದಿನ ಕಾರಣ?

ಯುಎಸ್ ನೇತೃತ್ವದ ನ್ಯಾಟೋ ರಷ್ಯಾದ ವೈಮಾನಿಕ ದಾಳಿಯಿಂದ ತನ್ನ ವಾಯು ಗಡಿಯನ್ನು ರಕ್ಷಿಸಲು ಸಹಾಯಕ್ಕಾಗಿ ಕೋರಿದ ಉಕ್ರೇನ್ ಮನವಿಯನ್ನು ತಿರಸ್ಕರಿಸಲಾಯಿತು. ನ್ಯಾಟೋ ಸದಸ್ಯರ ಪ್ರದೇಶದ "ಪ್ರತಿ ಅಂಗುಲ" ವನ್ನು ರಕ್ಷಿಸುತ್ತದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶುಕ್ರವಾರ ತಿಳಿಸಿದ್ದು, ಮೈತ್ರಿ ರಕ್ಷಣಾತ್ಮಕವಾಗಿದೆ ಎಂದು ಒತ್ತಿ ಹೇಳಿದರು. "ನಮ್ಮದು ರಕ್ಷಣಾತ್ಮಕ ಮೈತ್ರಿಯಾಗಿದ್ದು, ನಾವು ಯಾವುದೇ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ನಮ್ಮ ವಿರುದ್ಧ ಸಂಘರ್ಷಕ್ಕೆ ಬಂದರೆ ನಾವು ಸಿದ್ಧರಿದ್ದೇವೆ," ಎಂದು ಅವರು ಎಚ್ಚರಿಸಿದ್ದಾರೆ.

ನೋ-ಫ್ಲೈ ಝೋನ್ ಸ್ಥಾಪನೆ ಉದ್ದೇಶವೇನು?

ನೋ-ಫ್ಲೈ ಝೋನ್ ಸ್ಥಾಪನೆ ಉದ್ದೇಶವೇನು?

ಹಾರಾಟ ನಿಷೇಧ ವಲಯ (ನೋ-ಫ್ಲೈ ಝೋನ್) ಎನ್ನುವುದು ಮಿಲಿಟರಿ ಅಧಿಕಾರದಿಂದ ಸ್ಥಾಪಿಸಲ್ಪಟ್ಟ ಪ್ರದೇಶವಾಗಿದ್ದು, ಅದರ ಮೇಲೆ ಕೆಲವು ವಿಮಾನಗಳ ಹಾರಾಟಕ್ಕೆ ಯಾವುದೇ ರೀತಿಯ ಅನುಮತಿ ನೀಡಲಾಗುವುದಿಲ್ಲ. ಘರ್ಷಣೆಗಳು ಅಥವಾ ಯುದ್ಧಗಳ ಸಮಯದಲ್ಲಿ ಈ ವಲಯದಲ್ಲಿ ರಕ್ಷಿಸಲ್ಪಟ್ಟಿರುವ ದೇಶದ ಮೇಲೆ ಶತ್ರುಗಳು ದಾಳಿ ಮಾಡುವುದನ್ನು ತಡೆಯಲು ಹಾರಾಟ ನಿಷೇಧ ವಲಯಗಳನ್ನು ಸ್ಥಾಪಿಸಲಾಗುತ್ತದೆ. ಹಾರಾಟ-ನಿಷೇಧ ವಲಯವು ವಾಯುಪ್ರದೇಶವನ್ನು ಮುಚ್ಚುವುದಕ್ಕಿಂತ ಭಿನ್ನವಾಗಿದ್ದು, ವಾಣಿಜ್ಯ ವಿಮಾನಗಳ ಹಾರಾಟಕ್ಕೂ ನಿರ್ಬಂಧವನ್ನು ವಿಧಿಸುತ್ತದೆ.

ಒಂದು ವೇಳೆ ನೊ-ಫ್ಲೈ ಝೋನ್ ಜಾರಿಗೆ ಬಂದರೆ, ಯಾವುದೇ ದೇಶವು ಇತರ ದೇಶದ ವಾಯುಪ್ರದೇಶವನ್ನು ಆಕ್ರಮಿಸಿದರೆ, ದೇಶದ ಮಿಲಿಟರಿ ಅಥವಾ ಅದನ್ನು ಜಾರಿಗೊಳಿಸಿದ ಮೈತ್ರಿಕೂಟವು ಎದುರಾಳಿ ವಿಮಾನಗಳನ್ನು ಹೊಡೆದುರುಳಿಸಬಹುದು.

ರಷ್ಯಾದಿಂದ ಒಂದೇ ವಾರದಲ್ಲಿ 500 ಕ್ಷಿಪಣಿ ದಾಳಿ

ರಷ್ಯಾದಿಂದ ಒಂದೇ ವಾರದಲ್ಲಿ 500 ಕ್ಷಿಪಣಿ ದಾಳಿ

ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ನಿರಂತರ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ವ್ಲಾಡಿಮಿರ್ ಪುಟಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಗೆ ಉಕ್ರೇನ್ ನೆಲದಲ್ಲಿ ನರಕಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಕಳೆದ ಒಂದೇ ವಾರದಲ್ಲಿ ರಷ್ಯಾ ಪಡೆಯು 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.

Recommended Video

      ರಷ್ಯಾ ಭಯಕ್ಕೆ ಉಕ್ರೇನ್ ಗೆ ಕೈ ಕೊಟ್ಟ NATO: ಉಕ್ರೇನ್ ಪತನ ಗ್ಯಾರೆಂಟಿ!! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+