ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾದ್ಯಂತ ಜಿಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಸೇವೆಯಲ್ಲಿ ವ್ಯತ್ಯಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಜಗತ್ತಿನಾದ್ಯಂತ ಜಿಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಸೋಮವಾರ ಸಂಜೆ 5ರಿಂದ ಗೂಗಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು, ಬಹುತೇಕ ಬಳಕೆದಾರರಿಗೆ ಜಿಮೇಲ್, ಯೂ ಟ್ಯೂಬ್ ತೆರೆಯಲು ಸಧ್ಯವಾಗುತ್ತಿರಲಿಲ್ಲ. ಭಾರತ, ಜಪಾನ್ ಹಾಗೂ ಅಮೆರಿಕದ ಕೆಲವು ಭಾಗಗಳಲ್ಲಿ ಈ ಸಮಸ್ಯೆ ಉಂಟಾಗಿತ್ತು. ಯೂಟ್ಯೂಬ್ ತೆರೆಯಲು ಪ್ರಯತ್ನಿಸಿದರೆ ಸಂಥಿಂಗ್ ವೆಂಟ್ ರಾಂಗ್ ಎಂದು ಬರುತ್ತಿತ್ತು.

ಸೇವೆಯಲ್ಲಿ ವ್ಯತ್ಯಯವಾಗಿದ್ದರೂ ಗೂಗಲ್ ಕ್ರೋಮ್‌ನ ಇನ್‌ಕಾಗ್ನಿಟೊ ಮೋಡ್‌ನಲ್ಲಿ ಯೂಟ್ಯೂಬ್ ಬಳಸಬಹುದಾಗಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.ಆದರೆ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಮಂದಿ ಗೂಗಲ್ ಕೆಲಸ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Google, Gmail, YouTube Down In Massive Outage Worldwide, Google Confirms

ಕೆಲವರಲ್ಲಿ ಮಾತ್ರ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.ಕಾರಣ ಪ್ತತೆ ಮಾಡಲಾಗುತ್ತಿದೆ ಎಂದು ಗೂಗಲ್ ಹೇಳುತ್ತಿದೆ. ವರ್ಕ್ ಫ್ರಂ ಹೋಂ ಮತ್ತು ವಾರದ ಆರಂಭದ ದಿನವಾದ ಸೋಮವಾರವೇ ಕೈಕೊಟ್ಟಿದ್ದು ಹುಟುಕಾಟ ನಡೆಸಲಾಗುತ್ತಿದೆ.

ಇಡೀ ಪ್ರಪಂಚದಾದ್ಯಂತ ಗೂಗಲ್, ಜಿಮೇಲ್, ಗೂಗಲ್ ಡಾಕ್, ಯೂಟ್ಯೂಬ್ ಕೆಲಸ ಮಾಡುತ್ತಿರಲಿಲ್ಲ.

English summary
Google services abruptly went down on Monday evening, impacting hundreds of users. Among the services that were disrupted at the time of writing include Gmail, Google Search, YouTube, and Drive. The latest outage, which seems to be more intensive than the last one, seemingly started around 5 pm IST today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X