Breaking; ಮಾರಿಯುಪೋಲ್ ರಷ್ಯಾ ವಶಕ್ಕೆ; ಪುಟಿನ್ ಘೋಷಣೆ
ಮಾಸ್ಕೋ, ಏಪ್ರಿಲ್ 21; ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಮಾರಿಯುಪೋಲ್ ನಗರವನ್ನು ರಷ್ಯಾ ಪಡೆಗಳು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಕಳೆದ ಮೂರು ದಿನಗಳಿಂದ ರಷ್ಯಾ ಪಡೆಗಳು ನಗರವನ್ನು ಸುತ್ತುವರೆದಿದ್ದವು.
ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಕುರಿತು ಘೋಷಣೆ ಮಾಡಿದ್ದಾರೆ. ಮಾರಿಯುಪೋಲ್ ನಗರವನ್ನು ವಶಪಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರದಿಂದ ಉಕ್ರೇನ್ ಸೈನಿಕರಿಗೆ ಶರಣಾಗುವಂತೆ ಸೂಚನೆಯನ್ನು ನೀಡುತ್ತಿದ್ದ ರಷ್ಯಾ ಪಡೆಗಳು ಮಾರಿಯುಪೋಲ್ ನಗರದ ಸುತ್ತಲೂ ಹೆಚ್ಚಿನ ಪಡೆಗಳನ್ನು ನಿಯೋಜನೆ ಮಾಡಿತ್ತು.
ಮಾರಿಯುಪೋಲ್ ಉಕ್ರೇನ್‌ನ ಬಂದರು ನಗರವಾಗಿದೆ. ಅಲ್ಲದೇ ಇಲ್ಲಿ ದೇಶದ ದೊಡ್ಡ ಉಕ್ಕು ಕೈಗಾರಿಕಾ ಘಟಕವಿದೆ. ನಗರದಿಂದ ಜನರನ್ನು ಸ್ಥಳಾಂತರ ಮಾಡುವ ನಾಲ್ಕು ಬಸ್‌ಗಳು ಗುರುವಾರ ತೆರಳಿವೆ.
ಕಳೆದ ಎರಡು ತಿಂಗಳಿನಿಂದ ಮಾರಿಯುಪೋಲ್ ನಗರವನ್ನು ವಶಕ್ಕೆ ಪಡೆಯಲು ರಷ್ಯಾ ಪಡೆಗಳು ಪ್ರಯತ್ನ ನಡೆಸುತ್ತಿದ್ದವು. ಉಕ್ರೇನ್ ಸೈನಿಕರಿಗೆ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಎಚ್ಚರಿಕೆ ನೀಡಲಾಗಿತ್ತು.
ಮಾರಿಯುಪೋಲ್‌ನಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರ ಮಾಡಲು ರಷ್ಯಾ ಮಾರ್ಚ್ ತಿಂಗಳಿನಲ್ಲಿಯೇ ಮಾನವೀಯ ಕಾರಿಡಾರ್ ನಿರ್ಮಾಣ ಮಾಡಲು ಅವಕಾಶ ನೀಡಿತ್ತು. ನಗರದಲ್ಲಿರುವ ಉಕ್ಕು ತಯಾರಿಕಾ ಘಟಕದ ಮೇಲೆ ರಷ್ಯಾ ಪಡೆ ಮುತ್ತಿಗೆ ಹಾಕಲಿದೆ.












Click it and Unblock the Notifications