ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ನಲ್ಲಿ ವಿಮಾನ ದುರಂತ: 148 ಪ್ರಯಾಣಿಕರ ಸಾವು

|
Google Oneindia Kannada News

ನವದೆಹಲಿ. ಮಾ.24: ದಕ್ಷಿಣ ಫ್ರಾನ್ಸ್ ನಲ್ಲಿ ಮಂಗಳವಾರ ವಿಮಾನ ದುರಂತ ಸಂಭವಿಸಿದ್ದು 148 ಜನ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಜರ್ಮನ್ ವಿಂಗ್ಸ್ ಗೆ ಸೇರಿದ ವಿಮಾನ ಪತನವಾಗಿದ್ದು ಪೈಲೆಟ್ ಸೇರಿದಂತೆ ಎಲ್ಲ ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ.

ಬಾರ್ಸಿಲೋನಾದಿಂದ ಡಸ್ಸೆಲ್​ಡೋರ್ಪ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಡಿಗ್ನೆ-ಲೆಸ್-ಬೈನ್ಸ್ ಬಳಿ ಪತನಗೊಂಡಿದೆ. 6 ಸಾವಿರ ಅಡಿ ಎತ್ತರದಲ್ಲಿ ವಿಮಾನ ಪತನವಾಗಿದೆ ಎಂದು ಹೇಳಲಾಗಿದ್ದು ರಾಡಾರ್ ವ್ಯಾಪ್ತಿಯಿಂದ ಕಣ್ಮರೆಯಾಗಿತ್ತು.[102 ಜನ ದುರ್ಮರಣ ಒಬ್ಬ ಸಾವು ಗೆದ್ದ]

france

ವಿಮಾನದಲ್ಲಿದ್ದ ಯಾರೋಬ್ಬರೂ ಬದುಕಿ ಉಳಿದಿರುವ ಸಾಧ್ಯತೆಗಳಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಸ್ಪಷ್ಟಪಡಿಸಿದ್ದಾರೆ. ಮೇಯೋಲಾನ್ಸ್ -ರೆವೆಲ್ಸ್ ನ ದುರಂತ ಸ್ಥಳಕ್ಕೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ತಂಡಗಳು ಧಾವಿಸಿವೆ.

2015 ರ ಮೊದಲ ಘೋರ ವಿಮಾನ ದುರಂತ ಇದಾಗಿದೆ. ಅತಿ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ನೀಡುವುದಕ್ಕೆ ಜರ್ಮನ್ ವಿಂಗ್ಸ್ ಹೆಸರಾಗಿತ್ತು. ಸಾವಿಗೀಡಾದ ಪ್ರಯಾಣಿಕರ ಪೂರ್ಣ ಮಾಹಿತಿ ಇನ್ನು ತಿಳಿದು ಬಂದಿಲ್ಲ.

English summary
An Airbus A320 carrying 142 passengers along with two pilots and four cabin crew passengers has reportedly crashed in southern France, reports indicated. French President Francois Hollande said he believed none of the 148 people on board the Germanwings plane that crashed had survived.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X