3 ಕೋಟಿ ರೂ ಲಾಟರಿ ಹಣ ಸೀದಾ ಟಾಯ್ಲೆಟ್ಟಿಗೆಸೆದ ವೃದ್ಧೆ

ಹೌದು, 63 ವರ್ಷದ ಜರ್ಮನ್ ಮಹಿಳೆ ಏಂಜೆಲಾ ಮಾಯಿರ್ ಗೆ 3,30,000 ಪೌಂಡ್ ಅಂದರೆ ಸರಿಸುಮಾರು 3 ಕೋಟಿ ರೂ ಮೊತ್ತದ ಜರ್ಮನ್ ಲಾಟರಿ ಹೊಡೆದಿತ್ತು. ಲಾಟರಿ ಮೊತ್ತ ಮನೆಗೂ ತಲುಪಿತ್ತು. ಅದೇ ವೇಳೆ ಸಂಕಷ್ಟದ ಜೀವನ ನಡೆಸುತ್ತಿದ್ದ ಏಂಜೆಲಾ ಮದ್ಯ ಸೇವನೆಯನ್ನು ರೂಢಿಸಿಕೊಂಡಿದ್ದಳು.
ನಶೆ ಏರಿದಾಗ ಮನೆಗೆ ಬಂದ 3 ಕೋಟಿ ರೂ ಲಾಟರಿ ಹಣವನ್ನು ಸಾವಕಾಶವಾಗಿ (ಒಂದೊಂದೇ ನೋಟನ್ನು ಹರಿದು ಹರಿದೂ) ಟಾಯ್ಲೆಟ್ಟಿಗೆ ಹಾಕಿ ಫ್ಲಶ್ ಮಾಡಿದ್ದಾಳೆ, ಪುಣ್ಯಾತಗಿತ್ತಿ!
ಅದಕ್ಕೂ ಮುನ್ನ ಏನಾಗಿತ್ತೆಂದರೆ ಗಂಡ ಅದಾಗತಾನೆ ಅನಾರೋಗ್ಯದಿಂದ ಮೃತಪಟ್ಟಿದ್ದ. ಮತ್ತು ಆತ ಕೇರ್ ಹೋಂನಲ್ಲಿ ವಾಸ್ತವ್ಯ ಹೂಡಿದ್ದ. ಅದರ ಬಾಬತ್ತು ಹಾಗೆಯೇ ಬಾಕಿಯುಳಿದಿತ್ತು. ಯಾವಾಗ ಏಂಜೆಲಾ ಮಾಯಿರ್ ಭಾರಿ ರಖಂ ಲಾಟರಿ ಹೊಡೆದಿದೆ ಎಂಬುದು ತಿಳಿದುಬಂತೋ ಕೇರ್ ಹೋಂನವರು ಆಕೆಯ ಮನೆಗೆ ಬಿಲ್ ಕಳಿಸಿದ್ದಾರೆ.
ಆ ಬಿಲ್ ನೋಡಿ ಏಂಜೆಲಾ ಮಾಯಿರ್ ಗೆ ಏನನ್ನಿಸಿತೋ ಅಷ್ಟೂ ಹಣವನ್ನು ಗುಡ್ಡೆ ಮಾಡಿ, ಕೇರ್ ಹೋಂ ಬಿಲ್ ಅನ್ನೂ ಸೇರಿಸಿಕೊಂಡು ಒಂದೊಂದಾಗಿ ಹರಿಯುತ್ತಾ ಅಷ್ಟನ್ನೂ ಟಾಯ್ಲೆಟ್ಟಿಗೆಸೆದು ಕೈತೊಳೆದುಕೊಂಡಿದ್ದಾಳೆ. ( ಮಾರಾಟಕ್ಕಿದೆ ಟಾಯ್ಲೆಟ್ ಟಿಶ್ಯೂ ಪೇಪರ್, ಚಿನ್ನದ್ದು! )
ಮೂರು ದಿನಗಳ ಹಿಂದೆ ತನಗೆ 3 ಕೋಟಿ ಲಾಟರಿ ಹೊಡೆದಿದೆ ಎಂಬ ಸುದ್ದಿ ಕೇಳಿದ ಏಂಜೆಲಾ ಮಾಯಿರ್, ಒಂದಲ್ಲ/ಎರಡಲ್ಲ ಐದು ಶಾಂಪೇನ್ ಬಾಟಲಿಗಳನ್ನು ತರಿಸಿಕೊಂಡು ಒಂದೊಂದಾಗಿ ಹೀರಿದ್ದಳಂತೆ!












Click it and Unblock the Notifications