Gaza War: ಗಾಜಾ ಶೀಘ್ರದಲ್ಲೇ ಅಮೆರಿಕ ವಶಕ್ಕೆ? ಮಧ್ಯಪ್ರಾಚ್ಯ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮ

ಮಧ್ಯಪ್ರಾಚ್ಯ ಕೊತ ಕೊತ ಕುದಿಯುತ್ತಿದೆ, ತೈಲದ ಭಂಡಾರವನ್ನೇ ಹೊಂದಿರುವ ಈ ಭಾಗದಲ್ಲಿ ಶ್ರೀಮಂತಿಕೆ ಕೂಡ ಅಷ್ಟೇ ಪ್ರಮಾಣದಲ್ಲಿ ಇದೆ. ಆದರೆ ಎಷ್ಟೇ ದುಡ್ಡು ಇರಲಿ ನೆಮ್ಮದಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ಮಧ್ಯಪ್ರಾಚ್ಯ ಭಾಗದಲ್ಲಿ ನಿರ್ಮಾಣ ಆಗಿದೆ. ಗಾಜಾ ಯುದ್ಧ ಶುರುವಾದ ನಂತರ ಇದು ಮತ್ತಷ್ಟು ಹೆಚ್ಚಾಗಿದ್ದು, ತಣ್ಣಗಾಗಿದ್ದ ಹಿಂಸಾಚಾರ ಮತ್ತೊಮ್ಮೆ ಭುಗಿಲೆದ್ದಿದೆ. ಇಂತಹ ಪರಿಸ್ಥಿತಿಯಲ್ಲೇ, ಗಾಜಾ ಶೀಘ್ರದಲ್ಲೇ ಅಮೆರಿಕ ವಶಕ್ಕೆ? ಎಂಬ ಪ್ರಶ್ನೆ ಇದೀಗ ಮೂಡಿದೆ.

ಇಸ್ರೇಲ್ ಸೇನೆ ಹಾಗೂ ಹಮಾಸ್ ನಡುವೆ ನಿರಂತರ ದಾಳಿ ನಡೆಯುತ್ತಿದೆ. ಹೀಗಾಗಿ ಹಿಂಸಾಚಾರ ಜೋರಾಗುತ್ತಿದೆ. ಇಬ್ಬರ ಮಧ್ಯೆ ಯುದ್ಧ ಶುರುವಾಗಿ ಭರ್ಜರಿ 1.5 ವರ್ಷವೇ ಕಳೆದು ಹೋಗಿದ್ದು ಇಸ್ರೇಲ್ ಮಾತ್ರ ಹಿಂದೆ ಮುಂದೆ ಯೋಚಿಸದೆ ದಾಳಿ ನಡೆಸುತ್ತಿದೆ. ಕೆಲವು ದಿನಗಳ ಕಾಲ ಯುದ್ಧ ನಿಂತರೂ ಮತ್ತೆ ಹಿಂಸಾಚಾರ ಇದೀಗ ಭುಗಿಲೆದ್ದಿದೆ. ಹೀಗಾಗಿ ಗಾಜಾ ಪಟ್ಟಿಯಲ್ಲಿ ಜನ ಕೂಡ ಓಡಿ ಹೋಗುವಂತೆ ಆಗಿದೆ. ಇದಿಷ್ಟೇ ಅಲ್ಲ, ಇಸ್ರೇಲ್ ಇದೀಗ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಗಾಜಾ ಪಟ್ಟಿ ಶೀಘ್ರದಲ್ಲೇ ಅಮೆರಿಕ ವಶಕ್ಕೆ ಸಿಗಲಿದೆಯಾ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.

Gaza War Influences Sensitive Dynamics in the Middle East

ಗಾಜಾ ಮೇಲೆ ಅಮೆರಿಕದ ಹಿಡಿತ?

ಕೆಲ ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಒಂದನ್ನ ನೀಡಿದ್ದರು. ಆ ಸಮಯದಲ್ಲಿ ಗಾಜಾ ಪಟ್ಟಿ ಪ್ರದೇಶವನ್ನು ಇಸ್ರೇಲ್ ತಮ್ಮ ವಶಕ್ಕೆ ಒಪ್ಪಿಸಲಿದೆ ಎಂದು ಹೇಳಿದ್ದರು. ಆ ಮಾತು ಇದೀಗ ನಿಜವಾಗುವ ಸಮಯ ಬಂದಂತೆ ಕಾಣಿಸುತ್ತಿದೆ, ಯಾಕಂದ್ರೆ ಯುದ್ಧ ನಿಲ್ಲಿಸಿದ್ದ ಇಸ್ರೇಲ್ ಇದೀಗ ಮತ್ತೆ ತನ್ನ ದಾಳಿಯನ್ನು ಆರಂಭ ಮಾಡಿದೆ. ಅಲ್ಲದೆ ಮತ್ತಷ್ಟು ಜೋರಾಗಿ ಮುಂದೆ ನುಗ್ಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಗಾಜಾ ಪಟ್ಟಿ ಅಮೆರಿಕ ವಶಕ್ಕೆ ಸಿಗಲಿದೆಯೇ? ಎಂಬ ಚರ್ಚೆ ನಡೆಯುತ್ತಿದೆ.

ಮಧ್ಯಪ್ರಾಚ್ಯ ಜನರಿಗೆ ನೆಮ್ಮದಿಯೇ ಇಲ್ಲ

ಗಾಜಾ ಪಟ್ಟಿ ಈಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಪದೇ ಪದೇ ಇಸ್ರೇಲ್ & ಹಮಾಸ್ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಆದರೆ, 2023ರ ಅಕ್ಟೋಬರ್ ತಿಂಗಳಲ್ಲಿ ದಿಢೀರ್ ಇಬ್ಬರ ಮಧ್ಯೆ ಘೋರ ಯುದ್ಧ ಅರಂಭವಾಗಿತ್ತು. ಯುದ್ಧವನ್ನು ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಇಸ್ರೇಲ್ ಮಿಲಿಟರಿ, ಇತ್ತೀಚೆಗೆ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸಿತ್ತು.

ಆದರೆ ಹೀಗೆ ಯುದ್ಧ ನಿಂತು ಕೆಲ ದಿನಗಳಲ್ಲಿ ಮತ್ತೆ ಹಿಂಸಾಚಾರವು ಭುಗಿಲೆದ್ದಿದೆ. ಅಲ್ಲದೇ ಈ ಬಾರಿ ಇಸ್ರೇಲ್ ಇಡೀ ಹಮಾಸ್ ನಾಶ ಮಾಡುವ ಪಣತೊಟ್ಟಿದೆ. ಹೀಗಾಗಿ, ಗಾಜಾ ಪಟ್ಟಿಯಲ್ಲಿ ಜೀವನ ನಡೆಸುತ್ತಿರುವ ಜನ ಕೂಡ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಮುಂದಿನ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಆತಂಕ ಕೂಡ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+